• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐದನೇ ವಾರ್ಷಿಕ ಯುಕೆ- ಭಾರತ ನಾಯಕತ್ವ ಸಮಾವೇಶ ತಪ್ಪಿಸಿಕೊಳ್ಳಬೇಡಿ

|

ಯುಕೆ-ಭಾರತದ ಮಧ್ಯದ ಸಂಬಂಧ ವೃದ್ಧಿವಾಗಿ ಆಯೋಜಿಸಲಿರುವ ಐತಿಹಾಸಿಕ ಕಾರ್ಯಕ್ರಮದ ಬಗ್ಗೆ ಇಂಡಿಯಾ ಇಂಕ್ ನ ಸ್ಥಾಪಕ ಹಾಗೂ ಸಿಇಒ ಮನೋಜ್ ಲಾಡ್ವಾ ಅವರು ಮುನ್ನೋಟ ನೀಡಿದ್ದಾರೆ. ಜಾಗತಿಕ ಬ್ರಿಟನ್ ಸಮಾವೇಶದ ಹಾದಿಯಲ್ಲಿ ಜಾಗತಿಕ ಭಾರತದ ಮುಂದಿನ ಹಾದಿಯ ಬಗ್ಗೆ ಕೂಡ ಗಮನ ಕೇಂದ್ರೀಕೃತವಾಗಿರುತ್ತದೆ. ಆ ಮುನ್ನೋಟ ಇಲ್ಲಿದೆ.

ನಮ್ಮ ಓದುಗರಿಗೆ ಇದು ಗೊತ್ತಿದ್ದೇ ಇರುತ್ತದೆ. ಯುಕೆ- ಭಾತದ ಮಧ್ಯೆ ಸಂಬಂಧ ವೃದ್ಧಿಗೆ ಇಂಡಿಯಾ ಇಂಕ್ ಬಹಳ ಹಿಂದಿನಿಂದ ಪ್ರಯತ್ನಿಸುತ್ತಲೇ ಇದೆ. ವೈಯಕ್ತಿಕವಾಗಿ ಹಾಗೂ ಕಂಪೆನಿಗಳು, ಹೆಸರೇ ಇಲ್ಲದಂತೆ ಎರಡೂ ದೇಶಗಳ ಮಧ್ಯೆ ಸಂಬಂಧ ವೃದ್ಧಿ ಆಗಲಿ ಎಂದು ಬಯಸುವ ಹಿತೈಷಿಗಳನ್ನು ನಾನು ಹಾಗೂ ನನ್ನ ತಂಡ ತುಂಬ ಉತ್ಸಾಹದಿಂದ ಉತ್ತೇಜಿಸುತ್ತಿದ್ದೇವೆ.

ಭಾರತ-ಇಂಗ್ಲೆಂಡ್‌ ಬಾಂಧವ್ಯ ಭವಿಷ್ಯದ ಸಂಬಂಧಕ್ಕೆ ರಹದಾರಿ

ಎರಡೂ ಕಡೆಯಿಂದ ವ್ಯವಹಾರಿಕ ಅನ್ನಿಸುವಂಥ ವಾತಾವರಣದಿಂದ ಬದಲಾವಣೆಯ ಕಡೆಗೆ ತರಲು ಯತ್ನಿಸುತ್ತಿದ್ದೇವೆ. ಎರಡೂ ದೇಶಗಳ ಮಧ್ಯದ ಸನ್ನಿವೇಶವನ್ನು ವಿಶ್ಲೇಷಿಸಿ, ದೊಡ್ಡ ಚಿತ್ರವೊಂದನ್ನು ಎದುರಿಗೆ ಇಟ್ಟಿದ್ದೇವೆ. ಒಂದು ಬೆಚ್ಚಗಿನ ಬಾಂಧವ್ಯ ವೃದ್ಧಿಗೆ ನಮ್ಮದೊಂದು ವಿನಮ್ರ ಪ್ರಯತ್ನವಿದು. ಅದರಲ್ಲೂ ಬ್ರೆಕ್ಸಿಟ್ ನಂತರದ ಬ್ರಿಟನ್ ಹಾಗೂ ಉದಾರೀಕರಣದ ನಂತರದ ಭಾರತದ ಮಧ್ಯೆ ಸೇತುವೆ ನಿರ್ಮಿಸುವ ಕೊಡುಗೆಯ ಸಣ್ಣ ಪ್ರಯತ್ನ ನಮ್ಮದು.

Don’t miss the 5th Annual UK-India Leadership Conclave

ಈ ಯುಕೆ- ಇಂಡಿಯಾ ಸಪ್ತಾಹ ಅವಕಾಶವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ಎರಡು ದೇಶಗಳ ಮಧ್ಯೆ ಭವಿಷ್ಯದ ನಂಟಿಗೆ ನೆರವಾಗುತ್ತದೆ. ಅಂದಹಾಗೆ, ನಾವು ಅಂದುಕೊಂಡಂಥ ಕಾರ್ಯಕ್ರಮಗಳು ಹೀಗಿವೆ:

* 5ನೇ ವಾರ್ಷಿಕ ಯುಕೆ-ಭಾರತ ನಾಯಕತ್ವ ಸಮಾವೇಶ: ಈ ವರ್ಷ ಬ್ರೆಕ್ಸಿಟ್ ಬ್ರಿಟನ್ ಹಾಗೂ ಜಾಗತಿಕ ಭಾರತದ ಮುಂದಿರುವ ಹಾದಿಯ ಮೇಲೆ ಗಮನ. ಈ ಐತಿಹಾಸಿಕ ಸಮಾವೇಶದ ಉದ್ದೇಶ ಎರಡೂ ದೇಶಗಳ ಮಧ್ಯೆ ಸಂಬಂಧ ವೃದ್ಧಿ

* ಯುಕೆ-ಇಂಡಿಯಾ ಅವಾರ್ಡ್ಸ್ 2018: ಜಾಗತಿಕ ಸಹಭಾಗಿತ್ವಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡುತ್ತಿರುವ, ಬ್ರಿಟಿಷ್ ಮತ್ತು ಭಾರತದ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಪ್ರತಿಷ್ಠಿತವಾದ ಪ್ರಶಸ್ತಿ ವಿತರಣೆ ಸಮಾರಂಭ.

ವಾಣಿಜ್ಯ, ರಾಜಕೀಯ, ಕಲೆ, ಸಂಸ್ಕೃತಿ, ರಾಜತಾಂತ್ರಿಕ ಕ್ಷೇತ್ರ ಹೀಗೆ ವಿವಿಧ ಕ್ಷೇತ್ರದ ನಾನೂರು ಹಿರಿಯ ನಾಯಕರನ್ನು ಒಂದೇ ವೇದಿಕೆಯಲ್ಲಿ ಸನ್ಮಾನಿಸುವ ಪ್ರಯತ್ನವಿದು. ಜೂನ್ 22ರಂದು ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಯುಕೆ-ಇಂಡಿಯಾ ಅವಾರ್ಡ್ಸ್ ಗಳ ವಿಜೇತರನ್ನು ಆಯ್ಕೆ ಮಾಡಲಿದೆ. ಈ ನಿರ್ಣಾಯಕ ಮಂಡಳಿಯಲ್ಲಿರುವ ಪ್ರಮುಖರೆಂದರೆ:

* ಲಾರ್ಡ್ ಮಾರ್ಲ್ಯಾಂಡ್, ಚೇರಮನ್, ಕಾಮನ್‌ವೆಲ್ತ್ ಎಂಟರ್‌ಪ್ರೈಸ್ ಆಂಡ್ ಇನ್ವೆಸ್ಟ್ ಮೆಂಟ್ ಕೌನ್ಸಿಲ್

* ಸುನೀಲ್ ಭಾರ್ತಿ ಮಿತ್ತಲ್, ಚೇರಮನ್ ಹಾಗೂ ಸಂಸ್ಥಾಪಕ, ಭಾರ್ತಿ ಎಂಟರ್‌ ಪ್ರೈಸಸ್

* ಎಂಪಿ ಬ್ಯಾರಿ ಗಾರ್ಡಿನರ್, ಶಾಡೊ ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಟರ್ ನ್ಯಾಷನಲ್ ಟ್ರೇಡ್

* ಎಂಪಿ ಪ್ರೀತಿ ಪಟೇಲ್, ಮಾಜಿ ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಟರ್ ನ್ಯಾಷನಲ್ ಡೆವಲಪ್‌ಮೆಂಟ್

* ಎಡ್ವಿನಾ ಡನ್, ಸಿಇಓ, ಸ್ಟಾರ್‌ಕೌಂಟ್

* ಬರ್ಖಾ ದತ್, ಲೇಖಕಿ ಹಾಗೂ ಪತ್ರಕರ್ತೆ

ಈ ಹಿಂದೆಂದಿಗಿಂತಲೂ ಇಂದು ಭಾರತ- ಯುಕೆ ಸಂಬಂಧ ವೃದ್ಧಿ ಆಗುವುದು ಮುಖ್ಯವಾಗಿದೆ. ಈ ಎರಡು ಜಾಗತಿಕ ಶಕ್ತಿಗಳ ಮಧ್ಯೆ ವ್ಯಾಪಾರ ಹಾಗೂ ಸಂಸ್ಕೃತಿ ವಿನಿಮಯದ ಸಾಮರ್ಥ್ಯ ಅರಿಯಲು ಭಾರತ- ಯುಕೆ ಸಪ್ತಾಹ ಒಂದು ಒಳ್ಳೆ ವೇದಿಕೆ. ಯುರೋಪ್ ಖಂಡದಲ್ಲಿ ಭಾರತದ ಛಾಪು ಮೂಡಿಸಲು ಯುಕೆ ಹೆಬ್ಬಾಗಿಲು ಆಗಲಿದೆ. ಮತ್ತು ಭಾರತದೊಂದಿಗೆ ಮುಕ್ತ ವ್ಯಾಪಾರ ನಡೆಸುವುದಕ್ಕೆ ಕೂಡ ಅನುಕೂಲವಾಗಲಿದೆ.

1991ರಲ್ಲಿ ಭಾರತ ತನ್ನ ಆರ್ಥಿಕ ಸಂಬಂಧವನ್ನು ಅಮೆರಿಕ ಹಾಗೂ ಏಷ್ಯಾದ ರಾಷ್ಟ್ರಗಳ ಜತೆಗೆ ನಿಕಟ ಮಾಡಿಕೊಂಡಿತು. ಆ ಸಂದರ್ಭದಲ್ಲಿ ಉಳಿದ ದೇಶಗಳ ಜತೆಗಿನ ಸಂಬಂಧ ಅಧಿಕೃತವಾಗಿ ನಿರ್ಲಕ್ಷ್ಯವಾಯಿತು. ಎರಡೂ ರಾಷ್ಟಗಳ ನಾಯಕರು ಐತಿಹಾಸಿಕ ಸಂಬಂಧದ ಬಗ್ಗೆ ಏನೇ ಸದ್ದು ಮಾಡಿದರೂ ದ್ವಿಪಕ್ಷೀಯ ಸಂಬಂಧದ ಅಗತ್ಯ ಇದ್ದೇ ಇತ್ತು.

ಇಥ ಸನ್ನಿವೇಶದಲ್ಲೇ ಎರಡೂ ದೇಶಗಳ ಜನರ ಮಧ್ಯೆ ಸಂಪರ್ಕ ಮುಖ್ಯವಾಯಿತು. ಬ್ರಿಟನ್ ನಲ್ಲಿರುವ ಹದಿನೈದು ಲಕ್ಷದಷ್ಟು ಭಾರತೀಯರು ಆ ಸಂಪರ್ಕ ಗಟ್ಟಿಗೊಳಿಸಿದರು. ಅಕ್ಷರಶಃ ಜೀವಂತ ಸೇತುವೆಗಳಂತೆ ಆದರು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದೇ ಆ ಕಾರಣಕ್ಕೆ. ಯುಕೆ ಪ್ರವೇಶಿಸಿದ ಭಾರತದ ವ್ಯಾಪಾರಿ ವಲಯ ಎರಡು ದೇಶಗಳ ಮಧ್ಯೆ ಸಂಬಂಧಕ್ಕೆ ಸಹಕಾರಿಯಾಯಿತು.

ಎರಡೂ ದೇಶಗಳ ಮಧ್ಯದ ಸಂಬಂಧ ವೃದ್ಧಿಗೆ ತೆರೆಮರೆ ಕಾಯಿಯಂತೆ ಶ್ರಮಿಸಿದ ವ್ಯಕ್ತಿ, ಸಂಘ- ಸಂಸ್ಥೆಗಳನ್ನು ಗೌರವಿಸುವುದು ಕೂಡ ಈ ಸಂದರ್ಭದ ಅಗತ್ಯ ಹಾಗೂ ವಿಶೇಷ. ಇಪ್ಪತ್ತೊಂದನೇ ಶತಮಾನದ ಆರ್ಥಿಕ-ರಾಜಕೀಯ ಹಾಗೂ ವ್ಯೂಹಾತ್ಮಕ ಸಂಬಂಧವಾಗಿ ಭಾರತ- ಯುಕೆ ಹೊರಹೊಮ್ಮಲಿ ಎಂಬುದು ಹಲವರ ನಿರೀಕ್ಷೆ.

ಇದು ಕೇವಲ ವ್ಯಾಪಾರಿಕ ವಿಚಾರವಲ್ಲ. ಇದು ಜಗತ್ತಿನಲ್ಲೇ ಬದಲಾವಣೆ ತರುವ ಸಂಗತಿ. ಹೊಸ ತಂತ್ರಜ್ಞಾನ, ಸಂಶೋಧನೆ ಮತ್ತು ಶಿಕ್ಷಣ, ಅಭಿವೃದ್ಧಿಗಾಗಿ ಬಂಡವಾಳ ಹರಿವು ಇವೆಲ್ಲಕ್ಕೂ ಮುಂದಿನ ತಲೆಮಾರಿಗೆ ಮತ್ತಷ್ಟು ಬಲ ಸಿಕ್ಕಂತಾಗುತ್ತದೆ.

ಯಾರಿಗೆ ಈ ಚರ್ಚೆಯ ಭಾಗವಾಗುವ ಆಸಕ್ತಿ, ಇಚ್ಛೆ ಇದೆಯೋ ಮತ್ತು ಸಂಪರ್ಕ- ಸಂಬಂಧದ ಶಕ್ತಿ ತಿಳಿಯಬೇಕಿದೆಯೋ ಯುಕೆ- ಇಂಡಿಯಾ ಸಪ್ತಾಹ ಖಂಡಿತಾ ತಪ್ಪಿಸಿಕೊಳ್ಳಬಾರದು.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India Inc. Founder & CEO Manoj Ladwa presents a sneak-peek into a landmark event aimed at enhancing the UK-India strategic relationship, focusing on the road ahead as Global Britain meets Global India.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more