ಭಾರತದ ಸರಕುಗಳಿಗೆ ಅಮೆರಿಕದ ಹೊಸ ಸುಂಕ, ಶುರುವಾಯ್ತು ಮಹತ್ವದ ಚರ್ಚೆ | Donald Trump Tariffs

ಭಾರತದ ಜೊತೆಗೆ ಚನ್ನಾಗಿಯೇ ಇದ್ದು, ಭಾರತದಿಂದ ಲಾಭ ಪಡೆದು ಪದೇ ಪದೇ ಅಮೆರಿಕ ಕಿರಿಕ್ ಮಾಡುತ್ತಿದೆ ಎಂಬ ಆಕ್ರೋಶ ಮೊಳಗುತ್ತಿದೆ. ಅದರಲ್ಲೂ ಭಾರತದ ವಸ್ತುಗಳ ಮೇಲೆ ವಿಪರೀತವಾಗಿ ತೆರಿಗೆ ಹಾಕುತ್ತಾ, ತೆರಿಗೆ ಯುದ್ಧವನ್ನೇ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಸಾರಿದ್ದಾರೆ ಎಂಬ ಚರ್ಚೆ ಜೋರಾಗಿದೆ. ಭಾರತ ಮಾತ್ರವಲ್ಲದೆ ಜಗತ್ತಿನ ಹಲವು ದೇಶಗಳ ವಿರುದ್ಧ ಕೂಡ ಇದೇ ರೀತಿ ತೆರಿಗೆಯ ತಿಕ್ಕಾಟನ್ನು ಅಮೆರಿಕ ನಡೆಸುತ್ತಿದೆ. ಇದು ದೊಡ್ಡ ಚರ್ಚೆಗೆ ಗ್ರಾಸವಾಗುವ ಜೊತೆಗೆ ಆರ್ಥಿಕವಾಗಿ ಕೂಡ ಸಂಚಲನ ಸೃಷ್ಟಿ ಮಾಡಿತ್ತು. ಕೊನೆಗೆ ಅಮೆರಿಕದ ಸುಪ್ರೀಂಕೋರ್ಟ್ ಈ ವಿಚಾರದಲ್ಲಿ ಮಧ್ರಪ್ರವೇಶ ಮಾಡಿದ ನಂತರ ದೊಡ್ಡ ಬದಲಾವಣೆ ಆಗಿದೆ.

ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬಂದ ನಂತರ ಸದ್ದು ಮಾಡಿದ್ದೇ ತಮ್ಮ ತೆರಿಗೆ ಅಸ್ತ್ರದಿಂದ. ಪ್ರಮುಖವಾಗಿ ತಮ್ಮ ಮಾತು ಕೇಳದ ದೇಶಗಳ ವಿರುದ್ಧ ತೆರಿಗೆ ಅಸ್ತ್ರ ಪ್ರಯೋಗ ಮಾಡಲಾಗಿತ್ತು, ಈ ಮೂಲಕ ಅಮೆರಿಕ ಜೊತೆಗೆ ಹಲವು ದೇಶಗಳ ಸಂಬಂಧ ಹಾಳಾಗುವ ಹಂತಕ್ಕೆ ಬಂದಿತ್ತು. ಇದೆಲ್ಲಾ ಅಮೆರಿಕ ಸುಪ್ರೀಂಕೋರ್ಟ್‌ ಎದುರಲ್ಲಿ ಬಂದು ನಿಂತಾಗ, ಡೊನಾಲ್ಡ್‌ ಟ್ರಂಪ್‌ ಅವರು ಪ್ರಯೋಗಿಸಿದ್ದ ಬೇಕಾಬಿಟ್ಟಿ ತೆರಿಗೆ ಅಸ್ತ್ರವನ್ನ ಅಸಾಂವಿಧಾನಿಕ ಎಂದು ಅಮೆರಿಕ ಸುಪ್ರೀಂಕೋರ್ಟ್‌ ಕರೆದಿತ್ತು.

Donald Trump Tariffs

ತೆರಿಗೆ ಪ್ರಮಾಣದಲ್ಲಿ ಮತ್ತೆ ಬದಲಾವಣೆ!

ಇದೇ ಕಾರಣಕ್ಕೆ ಟ್ರಂಪ್‌ ಭಾರತ ಸೇರಿ ಎಲ್ಲ ದೇಶ​ಗಳ ಮೇಲೆ ಹೊಸದಾಗಿ ಈಗ ಶೇ. 15 ರಷ್ಟು ತಾತ್ಕಾಲಿಕ ಸುಂಕ ಹೇರಿಕೆ ಮಾಡಲು ತೀರ್ಮಾನ ಮಾಡಿದ್ದಾರೆ. ಹೊಸ ಪ್ರತಿ ಸುಂಕವು ಫೆಬ್ರವರಿ 24 ಮಂಗಳವಾರ ಜಾರಿಗೆ ಬರಲಿದ್ದು, ಹಾಗಾದರೆ ಈ ಹೊಸ ತೆರಿಗೆ ನಿಯಮದ ಪರಿಣಾಮ ಈಗ ಏನೆಲ್ಲಾ ಬದಲಾವಣೆ ಆಗಲಿದೆ? ಎಂಬ ಚರ್ಚೆ ಶುರುವಾಗಿದೆ. ಒಂದು ಕಡೆ ಈ ಹೊಸ ಸುಂಕ ಭಾರತಕ್ಕೆ ಸಹಾಯ ಮಾಡುವ ಎಲ್ಲಾ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ತಜ್ಞರು.

ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಾ?

ಹೌದು, ಅಮೆರಿಕ ಸುಪ್ರೀಂಕೋರ್ಟ್ ಆದೇಶದ ನಂತರ ಮತ್ತೊಂದು ನಿರ್ಧಾರ ಪ್ರಕಟಿಸಿರುವ ಟ್ರಂಪ್ ಅವರು ತೆರಿಗೆ ಪ್ರಮಾಣ ಹೆಚ್ಚಿಸಿದ್ದಾರೆ. ತಾವು ವಿಧಿಸಲು ಬಯಸುವ ಜಾಗತಿಕ ಸುಂಕವನ್ನ ಶೇ. 15ಕ್ಕೆ ಹೆಚ್ಚಿಸುವುದಾಗಿ ಪ್ರಕಟಿಸಿದ್ದಾರೆ ಅಮೆರಿಕ ಅಧ್ಯಕ್ಷರು. ಮೊದಲಿಗೆ ಶೇ. 10 ಎಂದು ಹೇಳಲಾಗಿದ್ದ ಈ ತೆರಿಗೆ ಇದೀಗ ಶೇ. 15ಕ್ಕೆ ಹೆಚ್ಚಳವಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಮಾಹಿತಿಯನ್ನು ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಹೊಸ ಸುಂಕ ಹೇರಿಕೆಯ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಇದು ಮತ್ತೆ ಅಮೆರಿಕದ ಪಾಲುದಾರ ದೇಶಗಳಿಗೆ ಟೆನ್ಷನ್ ಹೆಚ್ಚಿಸುವ ಜೊತೆಗೆ, ಗೊಂದಲ ಸೃಷ್ಟಿ ಮಾಡುತ್ತಿದೆ. ಪದೇ ಪದೇ ಹೀಗೆ ಸುಂಕ ಏರಿಕೆ ಮತ್ತು ಇಳಿಕೆ ನಡೆಯುತ್ತಿದ್ದರೆ ಆರ್ಥಿಕತೆ ಮೇಲೆ ಕೂಡ ಅದರ ಪರಿಣಾಮ ಉಂಟಾಗಲಿದೆ ಅಂತಿದ್ದಾರೆ ಆರ್ಥಿಕ ತಜ್ಞರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+