ಚುನಾವಣೆ ರದ್ದು ಮಾಡಿ, ನಾನೇ ಅಧ್ಯಕ್ಷ ಎಂದು ಘೋಷಿಸಿ: ಟ್ರಂಪ್

Posted By:
Subscribe to Oneindia Kannada

ವಾಷಿಂಗ್ಟನ್, ಅಕ್ಟೋಬರ್, 28: ಸದಾ ವಿವಾದಿತ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಟ್ರಂಪ್ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಗೆಲವು ಸಾಧಿಸಲು ಈಗಾಗಲೇ ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದಾರೆ. ಇದರ ಭಾಗವಾಗಿ ಭಾರತೀಯ ಸಂಜಾತ ಮನಗೆಲ್ಲಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ.

Donald Trump says US 'should cancel the election

ಗೆಲ್ಲಲೇಬೇಕೆಂಬ ಹಟಕ್ಕೆ ಬಿದ್ದಿರುವ ಟ್ರಂಪ್ ಅವರು ನಿರಂತರವಾಗಿ ಚುನಾವಣಾ ಜಾಥಾಗಳನ್ನು ಹಮ್ಮಿಕೊಂಡು ಪ್ರಚಾರ ಕಾರ್ಯದಲ್ಲಿ ನಿರಂತರವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. [ಟ್ರಂಪ್ ಲೈಂಗಿಕ ಪುರಾಣವನ್ನು ಬಿಚ್ಚಿಟ್ಟ ಮಹಿಳಾಮಣಿಗಳು!]

ಚುನಾವಣಾ ಪ್ರಚಾರದ ಭಾಗವಾಗಿ ಗುರುವಾರ ಓಹಿಯೋದಲ್ಲಿ ನಡೆದ ಜಾಥಾವೊಂದರಲ್ಲಿ ಚುನಾವಣೆ ರದ್ದುಗೊಳಿಸಿ ಎಂಬ ಹೇಳಿಕೆಯನ್ನು ಟ್ರಂಪ್ ನೀಡಿದ್ದು, ಸಾರ್ವಜನಿಕ ವಲಯದಲ್ಲಿ ಮತ್ತೆ ವಿವಾದ ಉಂಟುಮಡಿದೆ.

ಚುನಾವಣಾ ಪೂರ್ವ ಸಮೀಕ್ಷೆಗಳು ಡೆಮಾಕ್ರೆಟಿಕ್ ಪಕ್ಷದಿಂದ ಸ್ಪರ್ಧಿಸುತ್ತಿರುವ ಹಿಲರಿ ಕ್ಲಿಂಟನ್ ಅವರ ಪರವಾಗಿ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಟ್ರಂಪ್ ನೀಡಿರುವ ಹೇಳಿಕೆಗಳನ್ನು ಟ್ರಂಪ್ ಅವರಿಗಿರುವ ಭಯವನ್ನು ತೋರಿಸಿವೆ ಎಂದು ಹೇಳಲಾಗುತ್ತಿದೆ.[ಹಿಲರಿ ಅಧ್ಯಕ್ಷರಾದರೆ ಮೂರನೇ ವಿಶ್ವಯುದ್ಧ ಗ್ಯಾರಂಟಿ!]

ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು " ನನ್ನ ಅನಿಸಕೆ ಪ್ರಕಾರ ಚುನಾವಣೆ ರದ್ದು ಮಾಡುವುದೇ ಒಳ್ಳೆಯದು, ನನ್ನನ್ನೇ ಅಧ್ಯಕ್ಷ ಎಂದು ಘೋಷಿಸುವುದು ಮತ್ತಷ್ಟು ಒಳ್ಳೆಯದು ಎಂದು ಹೇಳಿದ್ದಾರೆ.

ಹಿಲರಿ ಕ್ಲಿಂಟನ್ ಅವರಿಗೆ ಸರ್ಕಾರ ನಡೆಸುವಷ್ಟು ಶಕ್ತಿ ಇಲ್ಲ. ಅವರು ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಅಲ್ಲವೇ ಅಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Donald Trump has suggested the US Presidential election should be cancelled and called in his favour as polls continue to predict victory for Hillary Clinton.
Please Wait while comments are loading...