ಡೊನಾಲ್ಡ್ ಟ್ರಂಪ್ ಹೊಸ ಲವ್ ಪಾಕಿಸ್ತಾನ, ಇದರ ಅರ್ಥ ಭಾರತಕ್ಕೇನು?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಡಿಸೆಂಬರ್ 1: ಅಮೆರಿಕ ಚುನಾವಣೆ ಪ್ರಚಾರದ ವೇಳೆ ಹಿರಿಯ ತಜ್ಞರೊಬ್ಬರು ಹೇಳಿದ್ದರು: ಅಧ್ಯಕ್ಷ ಟ್ರಂಪ್ ಹಾಗೂ ಅಭ್ಯರ್ಥಿ ಟ್ರಂಪ್ ಎರಡೂ ಬೇರೆ ಬೇರೆ ಅಂತ. ನಿಜವಾಗಲೂ ಆ ವೇಳೆ ತುಂಬ ಚರ್ಚೆಯಾಗಿದ್ದು ಟ್ರಂಪ್ ವಾಕ್ಚಾತುರ್ಯ. ಕೊನೆಗೆ ಚುನಾವಣೆಯಲ್ಲಿ ಟ್ರಂಪ್ ಗೆಲುವನ್ನೇ ಪಡೆಯುವುದಕ್ಕೆ ಅದರಿಂದ ಅನುಕೂಲವಾಯಿತು.

ಬೆಳ್ ಬೆಳಗ್ಗೆ ಮಾಧ್ಯಮಗಳು ಬಂಬಡಾ ಬಜಾಯಿಸುವಂತೆ ಮಾಡಿದ್ದಾರೆ ಟ್ರಂಪ್. ಅದೂ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ನ 'ನೀವೊಬ್ಬ ಸೊಗಸಾದ, ಅದ್ಭುತವಾದ ವ್ಯಕ್ತಿ' ಎಂದು ಹೊಗಳುವ ಮೂಲಕ. ಪಾಕಿಸ್ತಾನ ಪ್ರಧಾನಿ ಕಚೇರಿಯಿಂದ ಬಿಡುಗಡೆ ಮಾಡಿದ ಹೇಳಿಕೆ ಪ್ರಕಾರ ಟ್ರಂಪ್ ಅವರು ನವಾಜ್ ಷರೀಫ್ ನ ಹೊಗಳಿದ್ದಾರೆ.[ಪಾಕ್, ಚೀನಾ ಸೊಕ್ಕು ಮುರಿಯಲು ದೊರೆಯುವುದೇ ಟ್ರಂಪ್ ಸಖ್ಯ!]

ಪಾಕಿಸ್ತಾನೀಯರು ಬುದ್ಧಿವಂತರು. ದೇಶದ ಯಾವುದೇ ಜ್ವಲಂತ ಸಮಸ್ಯೆಯನ್ನು ನಿವಾರಿಸುವುದಕ್ಕೆ ಬದ್ಧ ಎಂದು ಕೂಡ ಹೇಳಿದ್ದಾರೆ. ಅಮೆರಿಕಾ ಅದ್ಯಕ್ಷೀಯ ಚುನಾವಣೆ ಪ್ರ‌ಚಾರದ ವೇಳೆ ಪಾಕಿಸ್ತಾನದ ಬಗ್ಗೆ ಹೇಳಿದ ಟ್ರಂಪ್ ಮಾತಿಗೆ ಇದು ಪೂರ್ತಿ ಉಲ್ಟಾ ಇದೆ. ಕೇವಲ ಬಾಯಿ ಮಾತಿನಂತೆ ಖಂಡಿತಾ ಇಲ್ಲ.

ಅಮೆರಿಕಾದ ಕೆಲವು ಮಾಧ್ಯಮದವರು ಟ್ರಂಪ್ ತಂಡದ ಬಳಿ, ಇದೇ ಮಾತುಗಳಾ ಟ್ರಂಪ್ ಆಡಿದ್ದು ಅಥವಾ ಸುಮ್ಮನೆ ಪ್ರೋತ್ಸಾಹಕ್ಕೆ ಇರಲಿ ಎಂದು ಆಡಿದ್ದಾ ಎಂದು ಖಚಿತಪಡಿಸಿಕೊಂಡಿದ್ದಾರೆ. ಟ್ರಂಪ್ ಫೋನ್ ಕರೆ ಬಗ್ಗೆ ಚರ್ಚೆ ಮಾಡುವುದಕ್ಕೆ ಮುಂಚೆ ಅಧ್ಯಕ್ಷೀಯ ಚುನಾವಣೆ ವೇಳೆ ಆತ ಪಾಕಿಸ್ತಾನದ ಬಗ್ಗೆ ನೀಡಿದ ಹೇಳಿಕೆಗಳನ್ನು ಗಮನಿಸೋಣ.[ಕಟ್ಟೋಣ ನಾವು ಹೊಸ ನಾಡೊಂದನು: ಡೊನಾಲ್ಡ್ ಟ್ರಂಪ್]

ಚುನಾವಣೆ ಪ್ರಚಾರದ ವೇಳೆ ಹೇಳಿದ್ದೇನು

ಚುನಾವಣೆ ಪ್ರಚಾರದ ವೇಳೆ ಹೇಳಿದ್ದೇನು

"ನೇರವಾಗಿ ಹೇಳೋದಾದರೆ ಪಾಕಿಸ್ತಾನ ನಮ್ಮ ಸ್ನೇಹಿತ ರಾಷ್ಟ್ರವಲ್ಲ. ಅವರಿಗೆ ಬಿಲಿಯನ್, ಬಿಲಿಯನ್ ಡಾಲರ್ ಕೊಟ್ಟೆವು, ವಾಪಸ್ ನಮಗೇನು ಸಿಕ್ಕಿತು? ನಂಬಿಕೆದ್ರೋಹ, ಅಗೌರವ ಮತ್ತಿನ್ನೂ ಕೆಟ್ಟ ಅನುಭವಗಳು", "ಒಸಾಮಾ ಬಿನ್ ಲಾಡೆನ್ ಗೆ ಅರು ವರ್ಷ ಸುರಕ್ಷಿತವಾದ ಜಾಗ ಮಾಡಿಕೊಟ್ಟ ಪಾಕಿಸ್ತಾನ ಅದಕ್ಕಾಗಿ ನಮ್ಮನ್ನು ಕ್ಷಮೆ ಕೇಳಿದೆಯಾ?"

ಜಗತ್ತಿನಲ್ಲೇ ಅಪಾಯಕಾರಿ

ಜಗತ್ತಿನಲ್ಲೇ ಅಪಾಯಕಾರಿ

ಇನ್ನು ಸಂದರ್ಶನವೊಂದರಲ್ಲಿ, ಪಾಕಿಸ್ತಾನ ಜಗತ್ತಿನಲ್ಲೇ ಅಪಾಯಕಾರಿ ರಾಷ್ಟ್ರ. ಅದನ್ನು ತಡೆಯಬೇಕಿದ್ದರೆ ಭಾರತ ಮಾತ್ರ. ಪಾಕಿಸ್ತಾನ ಗಂಭೀರ ಸಮಸ್ಯೆ ಯಾಕೆಂದರೆ, ಅದರ ಹತ್ತಿರ ಅಣ್ವಸ್ತ್ರ ಇದೆ. ಆ ಪೈಕಿ ಬಹಳ ಉತ್ತರ ಕೊರಿಯಾ ಬಳಿ ಇರುವಂಥವು" ಎಂದು ಟ್ರಂಪ್ ಹೇಳಿದ್ದರು.

ಆಲೋಚನೆ ಬದಲಾಗಿದೆ

ಆಲೋಚನೆ ಬದಲಾಗಿದೆ

ಪಾಕ್ ನ ನವಾಜ್ ಷರೀಫ್ ಬಗೆಗಿನ ಹೇಳಿಕೆ ಪ್ರೋಟೋಕಾಲ್ ವಿರುದ್ಧವಾಗಿ, ಯಾವುದಕ್ಕೂ ತಯಾರಿಲ್ಲದೆ ಟ್ರಂಪ್ ಆಡಿದ ಮಾತುಗಳಂತೆ ಇವೆ. ಟ್ರಂಪ್ ಈಗಾಗಲೇ ಭಾರತ, ಪಾಕಿಸ್ತಾನದಲ್ಲಿ ಸಾಕಷ್ಟು ಗಮನ ಸೆಳೆದಿದ್ದಾರೆ. ಒಂದು ವೇಳೆ ಪಾಕಿಸ್ತಾನ ಪ್ರಧಾನಿ ಕಚೇರಿ ಬಿಡುಗಡೆ ಮಾಡಿದ ಹೇಳಿಕೆ ಸರಿಯಾಗಿಯೇ ಇದ್ದರೆ, ಟ್ರಂಪ್ ಗೆ ಪಾಕ್ ಬಗ್ಗೆ ಇದ್ದ ಆಲೋಚನೆ ಬದಲಾಗಿದೆ ಅಂತಲೇ ಅರ್ಥ ಎನ್ನುತ್ತಾರೆ ಭಾರತದ ಅಧಿಕಾರಿಗಳು.

ಭರವಸೆ ಏನಿದು?

ಭರವಸೆ ಏನಿದು?

ಪಾಕಿಸ್ತಾನದ ಜ್ವಲಂತ ಸಮಸ್ಯೆಗಳನ್ನು ಸರಿ ಮಾಡಿಕೊಡುವ ಭರವಸೆ ಏನಿದು? ಒಂದು ವೇಳೆ ಕಾಶ್ಮೀರ ವಿಚಾರ ಆದರೆ ಭಾರತಕ್ಕೆ ಸಂತೋಷ ತರುವಂಥದ್ದಲ್ಲ. ಬರಾಕ್ ಒಬಾಮ ಕೂಡ ಕಾಶ್ಮೀರ ಸಮಸ್ಯೆ ಬಗ್ಗೆ ಮೊದಲಿಗೆ ಮಾತನಾಡಿದ್ದರೂ ಅ ನಂತರ ಆ ವಿಷಯದಲ್ಲಿ ಮೂಗು ತೂರಿಸಲಿಲ್ಲ. ಟ್ರಂಪ್ ವಿಚಾರದಲ್ಲೂ ಹೀಗೆ ಆಗುತ್ತದೆ ಎಂಬ ಅಭಿಪ್ರಾಯವನ್ನು ಅಧಿಕಾರಿಗಳು ಸೇರಿಸುತ್ತಾರೆ.

ಪಾಕ್ ಪರ, ಚೀನಾ ವಿರುದ್ಧ

ಪಾಕ್ ಪರ, ಚೀನಾ ವಿರುದ್ಧ

ಕಳೆದ ಕೆಲವು ವರ್ಷಗಳಲ್ಲಿ ಪಾಕಿಸ್ತಾನವು ಚೀನಾಗೆ ಹತ್ತಿರವಾಗಿದೆ. ಯಾವಾಗ ಚೀನಾವು ಪಾಕಿಸ್ತಾನವನ್ನು ಸರ್ವ ಋತು ಸ್ನೇಹಿತ ರಾಷ್ಟ್ರ ಎಂದು ಕರೆಯಿತೋ ಅಗಲೇ ಸ್ಪಷ್ಟವಾಗಿದೆ ಅಮೆರಿಕಾದ ಸ್ನೇಹ ಪಾಕ್ ಜತೆಗೆ ಸ್ನೇಹ ಎಂಥದ್ದು ಎಂಬ ಸಂಗತಿ. ಇನ್ನು ಭಾರತ, ಚೀನಾ, ಅಫಘಾನಿಸ್ತಾನ ಮತ್ತು ಇರಾನ್ ಮೇಲೊಂದು ನಿಗಾ ಇಡುವುದಕ್ಕಷ್ಟೇ ಅಮೆರಿಕಾಗೆ ಪಾಕ್ ಸ್ನೇಹ ಬೇಕು ಎಂಬುದು ಖಾತ್ರಿಯಾಗಿದೆ.

ಮತ್ತೊಂದು ಲೆಕ್ಕಾಚಾರ

ಮತ್ತೊಂದು ಲೆಕ್ಕಾಚಾರ

ಟ್ರಂಪ್ ಭಾಷಣಗಳನ್ನು ಕೇಳಿದವರಿಗೆ ಚೀನಾ ಮೇಲೆ ಅತನಿಗೆ ಪ್ರೀತಿ ಇಲ್ಲ ಎಂಬುದು ಖಚಿತವಾಗುತ್ತದೆ. ಈಗಿನ ನಡೆ ಗಮನಿಸಿದರೆ ಪಾಕಿಸ್ತಾನವನ್ನು ತನ್ನೆಡೆಗೆ ಸೆಳೆದು, ಚೀನಾ ಮಧ್ಯೆ ಸಂಬಂಧ ಕಡಿಮೆ ಮಾಡುವ ಉದ್ದೇಶವೂ ಇರಬಹುದು. ಜತೆಗೆ ಚೀನಾದ ಹಿಡಿತ ಈ ಭಾಗದಲ್ಲಿ ಹೇಗಿದೆ ಎಂದು ತಿಳಿಯುವ ಆಲೋಚನೆ ಕೂಡ ಇರಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಪಾಕ್ ಪ್ರಧಾನಿಗೆ ಕಚೇರಿ ಹೇಳಿಕೆಯಲ್ಲಿ ಏನಿದೆ?

ಪಾಕ್ ಪ್ರಧಾನಿಗೆ ಕಚೇರಿ ಹೇಳಿಕೆಯಲ್ಲಿ ಏನಿದೆ?

ಪ್ರಧಾನಿ ಮುಹಮ್ಮದ್ ನವಾಜ್ ಷರೀಫ್ ಅವರು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಅವರಿಗೆ ದೂರವಾಣಿ ಕರೆ ಮಾಡಿ, ಗೆಲುವಿಗೆ ಅಭಿನಂದನೆ ಸಲ್ಲಿಸಿದರು. ಆಗ ಅಧ್ಯಕ್ಷ ಟ್ರಂಪ್, ನವಾಜ್ ಷರೀಫ್ ಅವರೇ ನಿಮಗೆ ಒಳ್ಳೆ ಹೆಸರಿದೆ. ನೀವು ಸೊಗಸಾದ ವ್ಯಕ್ತಿ. ಅದ್ಭುತವಾದ ಕೆಲಸ ಮಾಡುತ್ತಿದ್ದೀರಿ ಅನ್ನೋದು ಎಲ್ಲ ಕಡೆಯಿಂದಲೂ ಗೋಚರಿಸುತ್ತಿದೆ. ನಿಮ್ಮನ್ನು ಶೀಘ್ರದಲ್ಲೇ ಭೇಟಿ ಮಾಡಲು ಎದುರು ನೋಡುತ್ತಿದ್ದೇನೆ. ಪ್ರಧಾಮಂತ್ರಿಯಾದ ನಿಮ್ಮ ಜತೆ ಮಾತನಾಡುತ್ತಿದ್ದರೆ, ನನಗೆ ಎಷ್ಟೋ ಕಾಲದಿಂದ ಪರಿಚಿತರಾದವರ ಜೊತೆಗೆ ಮಾತನಾಡಿದಂತಿದೆ. ನಿಮ್ಮ ದೇಶ ಅದ್ಭುತವಾದದ್ದು ಜತೆಗೆ ಅಗಾಧ ಅವಕಾಶಗಳಿರುವಂಥದ್ದು.

ಪಾಕಿಸ್ತಾನಿಯರು ಒಳ್ಳೆ ಜನ

ಪಾಕಿಸ್ತಾನಿಯರು ಒಳ್ಳೆ ಜನ

ಪಾಕಿಸ್ತಾನೀಯರು ಅಗಾಧ ಬುದ್ಧಿಮತ್ತೆ ಇರುವವರು. ನಿಮ್ಮ ದೇಶದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ನಾನು ಯಾವ ಪಾತ್ರ ವಹಿಸುವುದಕ್ಕೂ ಸಿದ್ಧನಿದ್ದೇನೆ. ಇದು ನನ್ನ ಪಾಲಿಗೆ ಗೌರವ ಹಾಗೂ ವಯಕ್ತಿಕವಾಗಿ ಅದನ್ನು ಮಾಡುತ್ತೇನೆ. ಜನವರಿ 20ರಂದು ಅಮೆರಿಕಾ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಬಹುದು. ಅಷ್ಟರಲ್ಲಿ ಕೂಡ ಯಾವಾಗ ಬೇಕಾದರೂ ನೀವು ನನಗೆ ಕರೆ ಮಾಡಿ, ಮಾತನಾಡಬಹುದು ಎಂದರು ಟ್ರಂಪ್. ಪಾಕಿಸ್ತಾನಕ್ಕೆ ಭೇಟಿ ನೀಡುವಂತೆ ಪ್ರಧಾನಿ ನವಾಜ್ ಷರೀಫ್ ಆಹ್ವಾನ ನೀಡಿದರು. ಅದಕ್ಕೆ ಟ್ರಂಪ್, ಅಂಥ ಅದ್ಭುತವಾದ ದೇಶ, ಸ್ಥಳ ಹಾಗೂ ಜನರನ್ನು ನೋಡುವುದನ್ನು ಇಷ್ಟ ಪಡ್ತೀನಿ. ಪಾಕಿಸ್ತಾನಿಯರು ಅದ್ಭುತವಾದ ಜನ, ನನಗೆ ಗೊತ್ತಿರುವ ಎಲ್ಲ ಪಾಕಿಸ್ತಾನಿಗಳು ತುಂಬ ಒಳ್ಳೆ ಜನ ಎಂದಿದ್ದಾರಂತೆ ಟ್ರಂಪ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
"You are a terrific guy," Trump said to Pakistan Prime Minister Nawaz Sharif, According to a statement released by the Pakistan Prime Minister's Office. So, is it a concern for India? Has Trump changed his mind about Pakistan?
Please Wait while comments are loading...