Donald Trump: ಭಾರತದಲ್ಲಿ ಸಸಿ ನೆಟ್ಟ ಡೊನಾಲ್ಡ್ ಟ್ರಂಪ್: ಅದು ಯಾವುದು? ಎಲ್ಲಿದೆ? ಈಗ ಹೇಗಿದೆ?

ಭಾರತದಿಂದ ಸಾವಿರಾರು ಮೈಲಿ ದೂರದಲ್ಲಿರುವ ಡೊನಾಲ್ಡ್ ಟ್ರಂಪ್ ಸದ್ಯ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿರುವ ಸಂತಸದಲ್ಲಿದ್ದಾರೆ. ಈ ಹಿಂದೆ ಹಲವಾರು ಬಾರಿ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ್ದಾರೆ. ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಟ್ರಂಪ್ ಸಸಿಯೊಂದನ್ನು ನೆಟ್ಟಿದ್ದರು. ಸದ್ಯ ಈ ಗಿಡವನ್ನು ನೋಡಿದ ಅನೇಕರು ಅಚ್ಚರಿಗೊಂಡಿದ್ದಾರೆ. ಜೊತೆಗೆ ಆ ಗಿಡದ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ. ಅಷ್ಟಕ್ಕೂ ಆ ಗಿಡ ಯಾವುದು? ಎಲ್ಲಿದೆ? ಹಾಗೂ ಹೇಗಿದೆ?

ದೇಶದ ರಾಜಧಾನಿ ದೆಹಲಿಗೆ ಡೊನಾಲ್ಡ್ ಟ್ರಂಪ್ ಹಲವಾರು ಭಾರಿ ಭೇಟಿ ನೀಡಿದ್ದಾರೆ. ಡೊನಾಲ್ಡ್ ಟ್ರಂಪ್ ನಾಲ್ಕು ವರ್ಷಗಳ ಹಿಂದೆ 25 ಫೆಬ್ರವರಿ 2020 ರಂದು ರಾಜಧಾನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿ ಸಸಿ ನೆಟ್ಟಿದ್ದರು. ಈ ಸಂದರ್ಭದಲ್ಲಿ ಅವರ ಪತ್ನಿ ಮೆಲಾನಿಯಾ ಟ್ರಂಪ್ ಕೂಡ ಅವರ ಜೊತೆಗಿದ್ದರು. ಈ ಸಸಿ ಈಗ ನೋಡುಗರ ಗಮನ ಸೆಳೆಯುತ್ತಿದೆ.

Donald Trump planted plant in India where how is it

ಹೌದು... ದೆಹಲಿಯ ರಾಜ್‌ಘಾಟ್ ಕ್ಯಾಂಪಸ್‌ನಲ್ಲಿ ಟ್ರಂಪ್ ಮಲಬಾರ್ ಚೆಸ್ಟ್‌ನಟ್ (Pachira Aquatica) ಸಸಿಯನ್ನು ನೆಟ್ಟಿದ್ದರು. ಟ್ರಂಪ್ ನೆಟ್ಟಿರುವ ಮಲಬಾರ್ ಚೆಸ್ಟ್‌ನಟ್ ಸಸಿಯನ್ನು ನೋಡಿ ಇಲ್ಲಿಗೆ ಆಗಮಿಸಿದ ಅನೇಕರು ಪುಳಕಿತರಾಗಿದ್ದಾರೆ. ಈ ಗಿಡದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಟ್ರಂಪ್ ನೆಟ್ಟ ಮಲಬಾರ್ ಚೆಸ್ಟ್‌ನಟ್ ಸಸ್ಯ ಎಲ್ಲಿಯದ್ದು? ನೋಡಲು ಹೇಗಿದೆ ಗೊತ್ತಾ?

ಸಸ್ಯದ ಬಗ್ಗೆ ಟ್ರಂಪ್ ಹೇಳಿದ್ದೇನು?

ಮಲಬಾರ್ ಚೆಸ್ಟ್‌ನಟ್ ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ಕಂಡುಬರುತ್ತದೆ. ಇದು ನಿತ್ಯಹರಿದ್ವರ್ಣ ಮರವಾಗಿದೆ. ಈ ಮರ ಸಣ್ಣ ಹಸಿರು ಹೂವುಗಳನ್ನು ಬಿಡುತ್ತದೆ. ಇದು ಕ್ರಮೇಣ ಬೃಹತ್ ಮರವಾಗಿ ಬೆಳೆಯುತ್ತದೆ. ದೆಹಲಿಯ ರಾಜ್‌ಘಾಟ್ ಕ್ಯಾಂಪಸ್‌ನಲ್ಲಿನ ರಾಷ್ಟ್ರಪತಿ ಮಹಾತ್ಮ ಗಾಂಧಿ ಪ್ರತಿಮೆಗೆ ನಮನ ಸಲ್ಲಿಸಿದ ಬಳಿಕ ಟ್ರಂಪ್ ಈ ಸಸಿ ನೆಟ್ಟರು. ರಾಜ್‌ಘಾಟ್ ಉಸ್ತುವಾರಿ ರಜನೀಶ್ ಕುಮಾರ್ ಅವರಿಂದ ಟ್ರಂಪ್ ಮತ್ತು ಅವರ ಪತ್ನಿ ಈ ಸಸ್ಯದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದರು.

ಸದ್ಯ ಮತ್ತೊಮ್ಮೆ ಅಮೆರಿಕದ ಅಧ್ಯಕ್ಷರಾಗಲಿರುವ ಡೊನಾಲ್ಡ್ ಟ್ರಂಪ್ ಅವರಿಗೆ ರಾಜ್‌ಘಾಟ್‌ನಲ್ಲಿನ ಗಾಂಧಿ ಸಾಹಿತ್ಯ, ಅವರ ಸಣ್ಣ ಪ್ರತಿಮೆ ಮತ್ತು ನೂಲುವ ಚಕ್ರವನ್ನು ಉಡುಗೊರೆಯಾಗಿ ನೀಡಲಾಯಿತು. ಇದನ್ನು ಪ್ರೀತಿಯಿಂದ ಸ್ವೀಕರಿಸಿದ ಟ್ರಂಪ್ ಹೀಗೆ ಬರೆದಿದ್ದಾರೆ - 'ಭಾರತವು ಶಕ್ತಿಯುತ ರಾಷ್ಟ್ರವಾಗಿ ಹೊರಹೊಮ್ಮಬೇಕೆಂದು ಅಮೆರಿಕ ಬಯಸುತ್ತದೆ' ಎಂದಿದ್ದಾರೆ.

Donald Trump planted plant in India where how is it

ಬರಾಕ್ ಒಬಾಮ ನೆಟ್ಟ ಮಾವಿನ ಮರ ಎಲ್ಲಿ ಹೋಯಿತು?

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ನೆಟ್ಟಿರುವ ಬೋಧಿ ವೃಕ್ಷ ಟ್ರಂಪ್ ನೆಟ್ಟ ಸ್ಥಳದಿಂದ ಸ್ವಲ್ಪ ದೂರವಿಲ್ಲ. ಬೋಧಗಯಾದಲ್ಲಿನ ಬೋಧಿ ವೃಕ್ಷದ ಕೆಳಗೆ ಧ್ಯಾನ ಮಾಡುವಾಗ ಗೌತಮ ಬುದ್ಧನಿಗೆ ಜ್ಞಾನೋದಯವಾಯಿತು ಎಂದು ನಂಬಲಾಗಿದೆ. ಅಂದಿನಿಂದ ಬೋಧಿ ವೃಕ್ಷಕ್ಕೆ ಪ್ರತ್ಯೇಕ ಸ್ಥಾನವಿದೆ. ಇದನ್ನು ಶಾಂತಿಯ ಸಂಕೇತವೆಂದು ಪರಿಗಣಿಸಲಾಗಿದೆ. 1950 ರಲ್ಲಿ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಅವರು ನೆಟ್ಟ ಮಾವಿನ ಗಿಡವು ಒಬಾಮಾ ಅವರ ಬೋಧಿ ವೃಕ್ಷದ ಪಕ್ಕದಲ್ಲಿದೆ.

ದುಃಖಕರವೆಂದರೆ, ಕೆಲವು ವರ್ಷಗಳ ಹಿಂದೆ ರಾಜಧಾನಿಗೆ ಅಪ್ಪಳಿಸಿದ ಬಲವಾದ ಚಂಡಮಾರುತದಲ್ಲಿ ಆ ಮಾವಿನ ಮರವು ನೆಲಸಮವಾಗಿದೆ. ಕಳೆದ ವರ್ಷ ಯಮುನಾ ಪ್ರವಾಹಕ್ಕೆ ಒಳಗಾದಾಗ, ರಾಜ್‌ಘಾಟ್ ಕೂಡ ಹಲವಾರು ದಿನಗಳವರೆಗೆ ಮುಳುಗಿತ್ತು. ಆಗ ಕಾಲಾಂತರದಲ್ಲಿ ವೃಕ್ಷಗಳಾಗಿ ನಿಂತಿದ್ದ ರಾಷ್ಟ್ರನಾಯಕರು ನೆಟ್ಟ ಹಲವು ಸಸಿಗಳು ನಾಶವಾದವು. ಆದರೆ, ಡೊನಾಲ್ಡ್ ಟ್ರಂಪ್ ನೆಟ್ಟಿದ್ದ ಗಿಡ ಸುರಕ್ಷಿತವಾಗಿತ್ತು. ಜೋ ಬಿಡೆನ್ ನೆಟ್ಟ ಗಿಡ ಮಾತ್ರ ನಾಶವಾಗಿದೆ. ಟ್ರಂಪ್ ಅವರು ಮಾತ್ರವಲ್ಲದೆ ಈ ಹಿಂದೆ ರಿಚರ್ಡ್ ನಿಕ್ಸನ್, ಜಿಮ್ಮಿ ಕಾರ್ಟರ್, ಬಿಲ್ ಕ್ಲಿಂಟನ್, ಜಾರ್ಜ್ ಬುಷ್ ಮತ್ತು ಜೋ ಬಿಡೆನ್ ಕೂಡ ರಾಜ್‌ಘಾಟ್‌ಗೆ ಬಂದು ಸಸಿಗಳನ್ನು ನೆಟ್ಟಿದ್ದಾರೆ.

ರಾಜ್‌ಘಾಟ್‌ನಲ್ಲಿ ಯಾರು ಸಸಿ ನೆಡಬಹುದು?

ರಾಜ್‌ಘಾಟ್‌ನಲ್ಲಿ ರಾಷ್ಟ್ರದ ಮುಖ್ಯಸ್ಥರು ಮಾತ್ರ ಸಸಿಗಳನ್ನು ನೆಡುತ್ತಾರೆ. ಅಂದಹಾಗೆ, ಅಮೆರಿಕದ ಮಹಾನ್ ನಾಯಕ ಮಾರ್ಟಿನ್ ಲೂಥರ್ ಕಿಂಗ್ ಮತ್ತು ವಿಶ್ವ ಹೆವಿವೇಟ್ ಬಾಕ್ಸಿಂಗ್ ಚಾಂಪಿಯನ್ ಮೊಹಮ್ಮದ್ ಅಲಿ ಕೂಡ ಇಲ್ಲಿಗೆ ಬಂದಿದ್ದಾರೆ.

ಮಾರ್ಟಿನ್ ಲೂಥರ್ ಕಿಂಗ್ 1959 ರಲ್ಲಿ ಸಾತ್ನಿಕ್ ರಾಜ್‌ಘಾಟ್‌ಗೆ ಬಂದಿದ್ದರು. ರಾಜ್‌ಘಾಟ್‌ನಲ್ಲಿ ಬಾಪುವಿಗೆ ನಮನ ಸಲ್ಲಿಸುವಾಗ ಅವರ ಕಣ್ಣುಗಳು ತೇವಗೊಂಡವು. ಅವರು ಸಮಾಧಾನಗೊಂಡಾಗ ಅಲ್ಲಿದ್ದ ಮಾಧ್ಯಮದವರು ಅವರ ಕಣ್ಣೀರಿಗೆ ಕಾರಣವನ್ನು ಪ್ರಶ್ನಿಸಿದಾಗ ಮಾರ್ಟಿನ್ ಲೂಥರ್ ಉತ್ತರಿಸಿದರು - 'ಗಾಂಧಿ ಅವರ ಮಾರ್ಗದರ್ಶನ, ಗಾಂಧಿ ತೋರಿಸಿದ ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಅನುಸರಿಸುವ ಮೂಲಕ ಮಾತ್ರ ನಾನು ಅಮೆರಿಕದಲ್ಲಿ ತುಳಿತಕ್ಕೊಳಗಾದ ಕರಿಯರನ್ನು ಬೆಂಬಲಿಸಲು ಸಮರ್ಥನಾದೆ. ಭಾರತ ನನ್ನ ಪಾಲಿಗೆ ಯಾತ್ರಾಸ್ಥಳ' ಎಂದಿದ್ದರು.

ಮೊಹಮ್ಮದ್ ಅಲಿ ಅವರು 1975ರಲ್ಲಿ ಭಾರತಕ್ಕೆ ಬಂದಾಗ ರಾಜ್‌ಘಾಟ್ ನಲ್ಲಿ ಗಾಂಧೀಜಿಯವರ ಸಮಾಧಿಗೆ ನಮನ ಸಲ್ಲಿಸಿದರು. ಆದರೆ ಇವರು ರಾಷ್ಟ್ರದ ಮುಖ್ಯಸ್ಥರಾಗಿರಲಿಲ್ಲ. ಹಾಗಾಗಿ ರಾಜ್‌ಘಾಟ್‌ನಲ್ಲಿ ಸಸಿ ನೆಡುವ ಅವಕಾಶ ಸಿಗಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+