ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2024ಕ್ಕೆ ಮತ್ತೆ ಯುಎಸ್ ಅಧ್ಯಕ್ಷ ಹುದ್ದೆಗೆ ಡೋನಾಲ್ಡ್‌ ಟ್ರಂಪ್‌ ಸ್ಪರ್ಧೆ

|
Google Oneindia Kannada News

ವಾಷಿಂಗ್ಟನ್‌, ನವೆಂಬರ್‌ 16: 2024ರಲ್ಲಿ ನಡೆಯುವ ಅಮೆರಿಕ ಅಧ್ಯಕ್ಷ ಹುದ್ದೆಗೆ ಮತ್ತೆ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸ್ಪರ್ಧಿಸುವುದಾಗಿ ಘೋಷಿಸಿದರು. ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠ ಹಾಗೂ ವೈಭವಯುತವಾಗಿಸಲು ನಾನು ಮತ್ತೆ ಅಧ್ಯಕ್ಷ ಹುದ್ದೆಗೆ ನನ್ನ ಉಮೇದುವಾರಿಕೆಯನ್ನು ಸಲ್ಲಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

76 ವರ್ಷದ ಡೊನಾಲ್ಡ್‌ ಟ್ರಂಪ್‌ 2020ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್‌ ವಿರುದ್ಧ ಸೋತಿದ್ದರು. ಚುನಾವಣೆಯಲ್ಲಿ ಬೃಹತ್‌ ಪ್ರಮಾಣದ ವಂಚನೆ ನಡೆದಿದೆ ಎಂದು ಟ್ರಂಪ್‌ ಹಾಗೂ ಅವರ ಬೆಂಬಲಿಗರು ಚುನಾವಣಾ ಫಲಿತಾಂಶಗಳನ್ನು ಒಪ್ಪಿಕೊಂಡಿಲ್ಲ. ಆದರೆ ಅವರ ಆರೋಪಗಳಿಗೆ ಚುನಾವಣಾಧಿಕಾರಿಗಳು ಹಾಗೂ ನ್ಯಾಯಾಲಯ ಮನ್ನಣೆಯನ್ನು ನೀಡಲ್ಲ.

2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ: ಡೊನಾಲ್ಡ್‌ ಟ್ರಂಪ್‌ ಘೋಷಣೆ ಸಾಧ್ಯತೆ2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ: ಡೊನಾಲ್ಡ್‌ ಟ್ರಂಪ್‌ ಘೋಷಣೆ ಸಾಧ್ಯತೆ

ಇತ್ತೀಚೆಗೆ ನಡೆದ ಅಮೆರಿಕ ಮಧ್ಯಂತರ ಚುನಾವಣೆ ಬಳಿಕ ಟ್ರಂಪ್‌ ಮತ್ತೆ ಚುನಾವಣೆಗೆ ಸ್ಪರ್ಧಿಸುವ ನಿಲುವು ತೆಗೆದುಕೊಂಡಿದ್ದಾರೆ. ಯುಎಸ್‌ ಸೆನೆಟ್‌ನಲ್ಲಿ 50 ಸ್ಥಾನಗಳಲ್ಲಿ ಡೆಮೊಕ್ರೆಟಿಕ್ ಪಕ್ಷ ಮುನ್ನಡೆ ಸಾಧಿಸಿದದ್ದರೆ ಟ್ರಂಪ್‌ ಅವರ ರಿಪಬ್ಲಿಕನ್‌ ಪಕ್ಷದವರು 49 ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಅಮೆರಿಕಾ ಸೆನೆಟ್‌ನಲ್ಲಿ 217 ಸ್ಥಾನಗಳಲ್ಲಿ ರಿಪಬ್ಲಿಕನ್‌ಗಳು ಮುನ್ನಡೆಯುತ್ತಿದ್ದರೆ, ಡೆಮೊಕ್ರಟಿಕ್‌ ಪಕ್ಷದವರು 207 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇತ್ತೀಚಿನ ತಿಂಗಳಲ್ಲಿ ಟ್ರಂಪ್‌ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಸುಳಿವು ನೀಡಿದ್ದರು.

Donald Trump is contesting for US President elections again in 2024

ಟ್ರಂಪ್‌ ಅವರು ಕಳೆದ ವಾರ ಅಯೋವಾದಲ್ಲಿ ನಡೆದ ಸಭೆಯಲ್ಲಿ ನಾನು ಮತ್ತೆ ಅಧ್ಯಕ್ಷ ಹುದ್ದೆಗೆ ಸ್ಪರ್ಧೆ ನಡೆಸುತ್ತಿದ್ದೇನೆ ಎಂದರು. ಆದರೆ ಇತ್ತೀಚಿನ ಮಧ್ಯಂತರ ಚುನಾವಣೆಯಲ್ಲಿ ಫಲಿತಾಂಶಗಳು ಸ್ವಲ್ಪ ನಿರಾಶಾದಾಯಕ ಎಂದು ಒಪ್ಪಿಕೊಂಡರು.

Donald Trump is contesting for US President elections again in 2024

ಇಬ್ಬರು ಗವರ್ನರ್‌ಗಳಾದ ಪ್ಲೋರಿಡಾದ ರಾನ್‌ ಡಿಸಾಂಟಿಸ್‌ ಮತ್ತು ವರ್ಜೀನಿಯಾದ ಗ್ಲೆನ್‌ ಯಂಗ್‌ಕಿನ್‌ ಅವರು ಮುಂಬರುವ ತಿಂಗಳುಗಳಲ್ಲಿ ಪಕ್ಷದ ನಿರೂಪಕರಾಗಿ ತಮ್ಮ ಸ್ಥಾನಮಾನವನ್ನು ಪ್ರಶ್ನಿಸಿದ ಬಗ್ಗೆ ಹೇಳಿಕೆ ನೀಡಿದ್ದರಿಂದ ಟ್ರಂಪ್‌ ಎರಡನೇ ಅವಧಿಗೆ ಅಧ್ಯಕ್ಷ ಹುದ್ದೆಗೆ ಸ್ಪರ್ಧೆಗೆ ನಿಲ್ಲುತ್ತಿದ್ದಾರೆ ಎಂದು ಸಿಎನ್‌ಎನ್‌ ವರದಿ ಮಾಡಿದೆ.

English summary
Former President Donald Trump has announced that he will run again for the post of President of the United States in 2024.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X