Get Updates
Get notified of breaking news, exclusive insights, and must-see stories!

ಫ್ರೆಂಚರು ಆಳಿದ್ದ ಜಾಗದ ಮೇಲೂ ಬಿತ್ತು ಟ್ರಂಪ್ ಕಣ್ಣು, ಕೆನಡಾ ಕಥೆ ಮುಂದೇನು?

ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ ಅವರು ಅಧಿಕಾರಕ್ಕೆ ಬಂದು 1 ವರ್ಷವಾಗಿದ್ದು, ಈ ಅವಧಿಯಲ್ಲಿ ಭಾರಿ ದೊಡ್ಡ ಏರುಪೇರು ಕೂಡ ಉಂಟಾಗಿದೆ. ಅದರಲ್ಲೂ ಅಂತಾರಾಷ್ಟ್ರೀಯ ಸಂಬಂಧಗಳೇ ಬದಲಾಗಿವೆ. ಡೊನಾಲ್ಡ್ ಟ್ರಂಪ್ ಹೆಸರು ಕೇಳಿದರೆ ಸಾಕು ಸ್ವತಃ ಅಮೆರಿಕದ ಸ್ನೇಹಿತ ದೇಶಗಳೇ ಹೆದರುವ ಸನ್ನಿವೇಶ ಹಾಗೂ ವಾತಾವರಣ ಇದೀಗ ನಿರ್ಮಾಣ ಆಗಿದೆ. ಏಕೆಂದರೆ ಡೊನಾಲ್ಡ್ ಟ್ರಂಪ್ ಅವರು ಯಾವಾಗ ಮತ್ತು ಹೇಗೆ ಯಾವ ದೇಶದ ಮೇಲೆ ಕಣ್ಣು ಇಡುತ್ತಾರೋ ಗೊತ್ತಿಲ್ಲ ಎನ್ನುವ ಭಯ ಆವರಿಸಿದೆ. ಈ ಪೈಕಿ ಗ್ರೀನ್‌ಲ್ಯಾಂಡ್ ಮೇಲೆ ಹಿಡಿತ ಹೊಂದಿರುವ ಡೆನ್ಮಾರ್ಕ್‌ಗೆ ಸಾಕಷ್ಟು ಭಯ ಶುರುವಾಗಿತ್ತು. ಅದೇ ರೀತಿ ಕೆನಡಾ ಕೂಡ ಬೆಚ್ಚಿ ಬೀಳುತ್ತಿದೆ.

ಟ್ರಂಪ್ ಅವರು ಅಧಿಕಾರಕ್ಕೆ ಬಂದ ನಂತರ ಏನು ಮಾಡಿದ್ದಾರೋ, ಬಿಟ್ಟಿದ್ದಾರೋ ಗೊತ್ತಿಲ್ಲ. ಆದರೆ ಅಕ್ಕಪಕ್ಕ ಇರುವ ದೇಶಗಳು ಹಾಗೂ ಅಮೆರಿಕದ ಮಿತ್ರ ದೇಶಗಳಿಗೆ ಆತಂಕ ಮೂಡುವಂತೆ ಮಾಡಿದ್ದಾರೆ. ಮೊದಲಿಗೆ ಗ್ರೀನ್‌ಲ್ಯಾಂಡ್ ವಿಚಾರ ತೆಗೆದು, ಈ ದ್ವೀಪ ನಮಗೆ ಬೇಕು ಎಂದಿದ್ದರು ಟ್ರಂಪ್ ಅವರು. ಆ ನಂತರ ಕೆನಡಾ ವಿಚಾರದಲ್ಲಿ ಕೂಡ ಕಿರಿಕ್ ಮಾಡಿ, ಅಮೆರಿಕದ ಮತ್ತೊಂದು ರಾಜ್ಯ ಮಾಡುತ್ತೇವೆ ಎಂದಿದ್ದರು. ಆದರೆ ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಯಾವಾಗ ನೇರವಾಗಿ ನ್ಯಾಟೋ ನಾಯಕರು ಎಂಟ್ರಿ ಕೊಟ್ಟರೋ ಅಲ್ಲಿಂದ ಮುಂದೆ ಪರಿಸ್ಥಿತಿ ಬದಲಾಗಿದ್ದು, ಟ್ರಂಪ್ ತಣ್ಣಗಾಗಿದ್ದಾರೆ. ಆದರೆ ಈಗ ಕೂಡ ಕೆನಡಾ ದೇಶದ ನಾಯಕರು ಟ್ರಂಪ್ ವಿಚಾರದಲ್ಲಿ ಭಯಪಡುವ ವಾತಾವರಣ ಇದೆ.

Donald Trump Completed 1 Year In 2nd Term And This Is What Happened To The Canada

ಕೆನಡಾ ನೆಲಕ್ಕೆ ಅಮೆರಿಕ ಸೇನೆ ಎಂಟ್ರಿ?

ಗ್ರೀನ್‌ಲ್ಯಾಂಡ್ ಅಮೆರಿಕಗೆ ಸೇರಬೇಕು, ಇಲ್ಲವಾದರೆ ಭವಿಷ್ಯದಲ್ಲಿ ಗ್ರೀನ್‌ಲ್ಯಾಂಡ್ ಮೇಲೆ ಚೀನಾ ಮತ್ತು ರಷ್ಯಾ ಕಣ್ಣು ಬೀಳಲಿದೆ ಎಂಬುದು ಅಮೆರಿಕ ಅಧ್ಯಕ್ಷ ಟ್ರಂಪ್ ನೀಡುತ್ತಿರುವ ಸಮರ್ಥನೆ. ಯುರೋಪ್ ಒಕ್ಕೂಟ ಹಾಗೂ ಅಮೆರಿಕದ ಸ್ನೇಹಿತ ರಾಷ್ಟ್ರಗಳು ತಮ್ಮ ಈ ಕ್ರಮವನ್ನು ಬೆಂಬಲಿಸಬೇಕು ಎಂದು ಕೂಡ ಟ್ರಂಪ್ ಹೇಳುತ್ತಿದ್ದಾರೆ. ಅಕಸ್ಮಾತ್ ತಮ್ಮನ್ನು ಬೆಂಬಲಿಸದೇ ಇದ್ದರೆ ಭಾರಿ ದೊಡ್ಡ ತೆರಿಗೆಯ ಬರೆ ಹಾಕುವ ಎಚ್ಚರಿಕೆ ನೀಡುತ್ತಿದ್ದರು. ಆದರೆ ದಾವೋಸ್ ಆರ್ಥಿಕ ಸಮ್ಮೇಳನ ಸಮಯದಲ್ಲಿ ಟ್ರಂಪ್ ಅವರಿಗೆ ನ್ಯಾಟೋ ನಾಯಕರು ಪಾಠ ಮಾಡಿದ್ದಾರೆ.

ಹೀಗಿದ್ದಾಗಲೇ ಗ್ರೀನ್‌ಲ್ಯಾಂಡ್ & ಕೆನಡಾ ಒಳಗೊಂಡ ಅಮೆರಿಕದ ನಕ್ಷೆ ಪ್ರದರ್ಶನ ಮಾಡಿದ್ದ ಟ್ರಂಪ್ ಅವರು ನ್ಯಾಟೋ ನಾಯಕರು ಗರಂ ಆಗಿರುವುದನ್ನು ನೋಡಿ ದಿಢೀರ್ ಸ್ವಲ್ಪ ಥಂಡಾ ಹೊಡೆದಿದ್ದಾರೆ. ಇಷ್ಟಾದರೂ ಅತ್ತ ಕೆನಡಾ ದೇಶಕ್ಕೆ ಟ್ರಂಪ್ ನಡೆ ಬಗ್ಗೆ ಅನುಮಾನ ಇದ್ದೇ ಇದೆ, ಕೆನಡಾ ನೆಲಕ್ಕೆ ಅಮೆರಿಕ ಸೇನೆ ಎಂಟ್ರಿ ಕೊಡುತ್ತಾ? ಎಂಬ ಚರ್ಚೆಯೂ ಜೋರಾಗಿದೆ. ಆದರೆ ಈಗಿನ ಪರಿಸ್ಥಿತಿ ಗಮನಿಸಿದರೆ ಆ ರೀತಿ ಆಗುವುದು ಸ್ವಲ್ಪ ಕಷ್ಟವಿದೆ.

ಅಮೆರಿಕದಲ್ಲೇ ಶುರುವಾಯ್ತು ಭಾರಿ ವಿರೋಧ

2ನೇ ಬಾರಿಗೆ ಟ್ರಂಪ್ ಅವರು ಅಧಿಕಾರಕ್ಕೆ ಬಂದ ನಂತರ ಅಮೆರಿಕ ಹಾಗೂ ಇತರ ದೇಶಗಳ ನಡುವೆ ಸಂಬಂಧ ಹಳಸಿ ಹೋಗುತ್ತಿದೆ. ಹೀಗಾಗಿ ಸ್ವತಃ ಅಮೆರಿಕದ ನೆಲದಲ್ಲೇ ಇದೀಗ ಆಕ್ರೋಶ ಮೊಳಗುತ್ತಿದ್ದು, ಟ್ರಂಪ್ ಅವರ ನಿರ್ಧಾರಗಳಿಗೆ ವಿರೋಧ ವ್ಯಕ್ತವಾಗುತ್ತಿದೆ. ಕಳೆದ 1 ವರ್ಷದಲ್ಲಿ ಟ್ರಂಪ್ ಅವರು ಈ ರೀತಿ ಮಾಡಿಕೊಂಡ ಕಿರಿಕ್ ಬಗ್ಗೆ ಕೂಡ ಜನರು ಚರ್ಚೆ ಮಾಡುವಂತೆ ಆಗಿದೆ.

ಒಟ್ಟಾರೆ ಹೇಳುವುದಾದರೆ ಟ್ರಂಪ್ ಅವರು ಎಲ್ಲಾ ಘಟನೆಗಳಿಂದ ಪಾಠ ಕಲಿತು ನಿರ್ಧಾರ ಬಲಿಸುತ್ತಾರಾ? ಅಥವಾ ಕೆನಡಾ ವಶಕ್ಕೆ ಪಡೆಯಲು ಸೇನೆ ಕಳಿಸುತ್ತಾರಾ? ಅನ್ನೋದನ್ನು ಕಾದು ನೋಡಬೇಕಿದೆ. ಆದರೆ ತಮ್ಮದೇ ಸ್ನೇಹಿತ ರಾಷ್ಟ್ರಗಳ ಮೇಲೆ ಸೇನಾ ಕ್ರಮ ಕೈಗೊಂಡರೆ, ಅದು ಅಮೆರಿಕಗೆ ಭವಿಷ್ಯದಲ್ಲಿ ಭಾರಿ ದೊಡ್ಡದಾಗಿ ಪೆಟ್ಟು ಕೊಟ್ಟು ಪಾಠ ಕಲಿಸುವ ಸಾಧ್ಯತೆ ದಟ್ಟವಾಗಿದೆ. ಇದೆಲ್ಲವನ್ನೂ ಅಳೆದು ತೂಗಿ ಅಮೆರಿಕ ಮುಂದಿನ ಹೆಜ್ಜೆ ಇಡಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+