• search

ವಿಶ್ವವನ್ನೇ ತಲ್ಲಣಿಸಿದ ಆ 10 ವದಂತಿಗಳು

Posted By:
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಸಕಲ ಚರಾಚರಗಳನ್ನೂ ಸಾಕಿಟ್ಟುಕೊಂಡ, ಸೃಷ್ಟಿ ಸೊಬಗಿನ ದ್ಯೋತಕವಾದ ಈ ಜಗತ್ತು ನಾಳೆಯೇ ಇಲ್ಲವಾದರೆ..? ನಮ್ಮೆಲ್ಲರ ಹುಟ್ಟು-ಸಾವಿನ ಚಕ್ರಗಳನ್ನು ಅವಿರತವಾಗಿ ತಿರುಗಿಸುತ್ತಿರುವ ಭೂಮಿಯೇ ಅಂತ್ಯವಾದರೆ..? ಆ ಕಲ್ಪನೆ ಊಹೆಗೂ ನಿಲುಕದ್ದು! ಆದರೆ ಡೇವಿಡ್ ಮೀಡೆ ಎಂಬ ಕ್ರಿಶ್ಚಿಯನ್ ಸಂಖ್ಯಾಶಾಸ್ತ್ರಜ್ಞರೊಬ್ಬರು ಹೇಳುವ ಪ್ರಕಾರ ಸೆಪ್ಟೆಂಬರ್ 23 ಕ್ಕೆ ವಿಶ್ವ ಕೊನೆಯಾಗುತ್ತಂತೆ! ಈ ಅನೂಹ್ಯ ಕಲ್ಪನೆಯು ಇನ್ನೊಂದೇ ದಿನದಲ್ಲಿ ವಾಸ್ತವವಾಗುತ್ತೆ ಅಂತಾರೆ ಮೀಡೆ!

  ಆದರೆ ವಿಶ್ವಾಸ, ಪ್ರೀತಿ, ಸಹಬಾಳ್ವೆ, ಅಧ್ಯಾತ್ಮ, ವಿಜ್ಞಾನ, ಸಂಸ್ಕೃತಿ, ಧರ್ಮ ಎಂಬೆಲ್ಲ ನೂರಾರು ಆದರ್ಶಗಳ ಮೇಲೆ ನಿಂತಿರುವ ಈ ಜೀವ ಜಗತ್ತು ನಿಜಕ್ಕೂ ಕೊನೆಯಾಗುತ್ತಾ? ಇಂಥ ಎಷ್ಟೆಲ್ಲ ವದಂತಿಗಳನ್ನು ಹಬ್ಬಿಸಿದ ಮನುಷ್ಯನ ಹುಚ್ಚು ಕಲ್ಪನೆಗಳಿಗೆ ನಕ್ಕು ಸುಮ್ಮನಾಗಿರಲಿಕ್ಕೆ ಸಾಕು ಭೂತಾಯಿ!

  ಸೆಪ್ಟೆಂಬರ್ 28 ಭೂಮಿ ಮೇಲೆ ನಮ್ಮೆಲ್ಲರದ್ದು ಕೊನೆ ದಿನ!

  'ಭೂಮಿ ಇಂಥದೇ ದಿನದಂದು ಕೊನೆಯಾಗುತ್ತದೆ' ಎಂಬ ತಾಳತಂತು ಇಲ್ಲದ, ಅವೈಜ್ಞಾನಿಕ ಹೇಳಿಕೆಗಳು ಎಷ್ಟೊ ಕಾಲದಿಂದಲೂ ಸದ್ದುಮಾಡಿವೆ. ಆ ಪಟ್ಟಿಗೆ ಸೆಪ್ಟೆಂಬರ್ 23, ಶನಿವಾರ ತಾಜಾ ಸೇರ್ಪಡೆಯಷ್ಟೆ!

  ಸೆ.28ರ ಕೆಂಪುಚಂದ್ರನ ಕುರಿತು ನಾಸಾ ಹೇಳುವುದೇನು?

  ಜಗತ್ತಿನ ಅಂತ್ಯದ ಕುರಿತು ಅಸಂಖ್ಯ ವದಂತಿಗಳು ಹಬ್ಬಿವೆ, ಹಬ್ಬುತ್ತಿವೆ. ಮನುಷ್ಯ ವೈಜ್ಞಾನಿಕ ಕ್ಷೇತ್ರದಲ್ಲಿ ಆಗಸವನ್ನೂ ಮೀರಿ ಬೆಳೆದ ಮೇಲೂ 'ಜಗತ್ತಿನ ಅಂತ್ಯ' ಎಂದು ಗುಲ್ಲೆಬ್ಬಿಸುವ ಕಾರ್ಯ ನಡೆಯುತ್ತಲೇ ಇದೆ. ಈ ಸುದ್ದಿಯನ್ನು ವಿವೇಚನೆಯ ಚೌಕಟ್ಟಿನಿಂದ ಆಚೆ ಇಟ್ಟು ಮೂಢನಂಬಿಕೆಯಲ್ಲಿಯೇ ನೋಡುವ ಕೆಲಸವೂ ನಡೆಯುತ್ತಲೇ ಬಂದಿದೆ. ಸೆಪ್ಟೆಂಬರ್ 23 ಕ್ಕೂ ಮುನ್ನ ತೀರಾ ಇತ್ತೀಚಿನ ವರ್ಷಗಳಲ್ಲಿ ಜಗತ್ತಿನ ಅಂತ್ಯ ಎಂದು ಗುಲ್ಲೆಬ್ಬಿಸಿದ ಆ 10 ದಿನಗಳತ್ತ ಒಮ್ಮೆ ಕಣ್ಣು ಹಾಯಿಸೋಣ.

  2014-2015

  2014-2015

  ಜಾನ್ ಹೇಗ್ ಮತ್ತು ಮಾರ್ಕ್ ಬಿಲ್ಟ್ಜ್ ಎಂಬ ಧಾರ್ಮಿಕ ಮುಖಂಡರು 2014 ಏಪ್ರಿಲ್ ಮತ್ತು 2015 ಸೆಪ್ಟೆಂಬರ್ ನಲ್ಲಿ ಜಗತ್ತು ಕೊನೆಯಾಗುತ್ತದೆಂದು ಭವಿಷ್ಯ ನುಡಿದಿದ್ದರು. ಆದರೆ ಆ ಎರಡೂ ತಿಂಗಳೂ ಯಾವುದೇ ಅಹಿತಕರ ಘಟನೆಯಾಗದೆ ಕಳೆಯಿತು. ಇಂಥ ವದಂತಿಗಳೆಲ್ಲ ಹುಟ್ಟಿಕೊಳ್ಳೋದು ಕೇವಲ ಪ್ರಚಾರದ ಆಸೆಗಾ ಎಂಬ ಪ್ರಶ್ನೆಯೂ ಈ ಸಂದರ್ಭದಲ್ಲಿ ಹುಟ್ಟಿತ್ತು!

  2013 ಆಗಸ್ಟ್ 23

  2013 ಆಗಸ್ಟ್ 23

  ಗ್ರಿಗೋರಿ ರಾಸ್ಪುಟಿನ್ ಎಂಬ ವ್ಯಕ್ತಿ 2013 ಆಗಸ್ಟ್ 23 ಬೆಂಕಿಯ ಮೂಲಕ ಇಡೀ ಜಗತ್ತೂ ನಾಶವಾಗುತ್ತೆ. ನಂತರ ಜೀಸಸ್ ಮತ್ತೆ ಅವತಾರ ಎತ್ತುತ್ತಾರೆ ಎಂದಿದ್ದರು.

  2012 ಡಿಸೆಂಬರ್ 21

  2012 ಡಿಸೆಂಬರ್ 21

  ಕ್ಷುದ್ರಗ್ರಹದ ಮೂಲಕ 2012 ಡಿಸೆಂಬರ್ 21 ರಂದು ಭೂಮಿ ನಾಶವಾಗುತ್ತದೆ ಎಂದು ಹಲವು ಧಾರ್ಮಿಕ ಮುಖಂಡರು, ಸಂಖ್ಯಾಶಾಸ್ತ್ರಜ್ಞರು ಹೇಳಿದ್ದರು. ಇಡೀ ಜಗತ್ತನ್ನೂ ಈ ಸುದ್ದಿ ತಲ್ಲಣಿಸಿತ್ತು. ಆದರೆ ಇವೆಲ್ಲ ಸುಳ್ಳು ಎಂದು ನಾಸಾ ಎಷ್ಟೊ ದಿನ ಮೊದಲೇ ಹೇಳಿತ್ತು. ಕೊನೆಗೂ ಡಿಸೆಂಬರ್ 21 ಬಂತು. ಆ ದಿನದ ಬೆಳಗು ಎಲ್ಲದಿನಕ್ಕಿಂತ ಸುಂದರವಾಗಿಯೇ ಆರಂಭವಾಯ್ತು! ಎಲ್ಲವೂ ಕಟ್ಟುಕತೆ, ವದಂತಿ ಎಂಬುದು ಮತ್ತೊಮ್ಮೆ ಸಾಬೀತಾಯ್ತು.

  2012 ಜೂನ್ 30

  2012 ಜೂನ್ 30

  ಜೊಸೆ ಲುಯಿಸ್ ಡೆ ಜೀಸಸ್ ಎಂಬುವವರು 2012 ಜೂನ್ 30 ರಂದು ಜಗತ್ತಿನ ಎಲ್ಲಾ ಅರ್ಥವ್ಯವಸ್ಥೆಗಳೂ ಮಕಾಡೆ ಮಲಗುತ್ತವೆ. ಹೊಸ ಪರಿವರ್ತನೆಯ ಯುಗ ಆರಂಭವಾಗುತ್ತದೆ ಎಂದಿದ್ದರು. ಅದೂ ಶುದ್ಧ ಸುಳ್ಳಾಗಿತ್ತು!

  2012 ಮೇ 27

  2012 ಮೇ 27

  ರೋನಾಲ್ಡ್ ವಿನ್ಲೆಂಡ್ ಎಂಬುವವರು ಜೀಸಸ್ ಕ್ರಿಸ್ಟ್ ಮತ್ತೆ ಅವತಾರ ತಾಳುತ್ತಾನೆ. ಆದ್ದರಿಂದ 2012 ಮೇ 27 ರಂದು ಜಗತ್ತು ಅಂತ್ಯವಾಗುತ್ತದೆ ಎಂದಿದ್ದರು!

  ಹಲವರು

  ಹಲವರು

  2011 ಆಗಸ್ಟ್- ಅಕ್ಟೋಬರ್ ಆಕಾಶಕಾಯಗಳು ಡಿಕ್ಕಿ ಹೊಡೆಯುವುದರಿಂದ ಜಗತ್ತು ನಾಶವಾಗುತ್ತೆ ಎಂದು 2011ರ ಆಗಸ್ಟ್ ಮತ್ತು ಅಕ್ಟೋಬರ್ ಹೊತ್ತಿಗೆ ಎದ್ದಿದ್ದ ವದಂತಿ ಜನರ ನಿದ್ದೆ ಕೆಡಿಸಿತ್ತು. ಇಂಥ ವಿದ್ಯಮಾನಗಳು ಖಗೋಳದಲ್ಲಿ ಘಟಿಸುವುದೇ ಸುಳ್ಳು ಎಂದು ಜನರನ್ನು ನಂಬಿಸಲು ಖಗೋಳಶಾಸ್ತ್ರಜ್ಞರು ಹರಸಾಹಸ ಪಡಬೇಕಾಯ್ತು.

  2011 ಅಕ್ಟೋಬರ್ 21

  2011 ಅಕ್ಟೋಬರ್ 21

  ಹರೋಲ್ಡ್ ಕ್ಯಾಂಪಿಂಗ್ ಎನ್ನುವವರು, 2011 ಅಕ್ಟೋಬರ್ 21 ರಂದು ಒಂದು ಮಹತ್ವದ 'ಧಾರ್ಮಿಕ ತೀರ್ಪು' ಹೊರಬೀಳುತ್ತದೆ. ಆಗ ಜಗತ್ತು ಅಂತ್ಯವಾಗುತ್ತದೆ ಎಂದಿದ್ದರು. ಯಾವ ತೀರ್ಪೂ ಬರಲಿಲ್ಲ ಅನ್ನೋದು ಬೇರೆ ಮಾತು!

  2011 ಸೆಪ್ಟೆಂಬರ್ 29

  2011 ಸೆಪ್ಟೆಂಬರ್ 29

  ಅಣುಸ್ಫೋಟವೊಂದರಿಂದ 2011 ಸೆಪ್ಟೆಂಬರ್ 29 ರಂದು ಜಗತ್ತು ನಾಶವಾಗುತ್ತದೆ ಮತ್ತು ಜೀಸಸ್ ಕ್ರಿಸ್ಟ್ ಮತ್ತೆ ಅವತಾರ ಎತ್ತುತ್ತಾರೆ ಎಂದು ರೋನಾಲ್ಡ್ ವಿನ್ಲೆಂಡ್ ಹೇಳಿದ್ದರು!

  2011 ಮೇ 2

  2011 ಮೇ 2

  ಭೀಕರ ಭೂಕಂಪವೊಂದರಿಂದಾಗಿ 2011 ಮೇ 21 ಜಗತ್ತಿನ ಬಹುಪಾಲು ಜನಸಂಖ್ಯೆಯನ್ನು ದೇವರು ಸ್ವರ್ಗಕ್ಕೆ ಕರೆಸಿಕೊಳ್ಳುತ್ತಾನೆ ಎಂದು ಹರೋಲ್ಡ್ ಕ್ಯಾಂಪಿಂಗ್ ಹೇಳಿದ್ದರು. ಅದೂ ಶುದ್ಧ ಸುಳ್ಳು ಎಂಬುದು ನಂತರ ತಿಳಿದುಬಂದಿತ್ತು.

  2010

  2010

  ಹರ್ಮೆಟಿಕ್ ಆರ್ಡರ್ ಆಫ್ ದಿ ಗೋಲ್ಡನ್ ಡಾನ್ ಎಂಬ ಸಂಸ್ಥೆಯೊಂದು 2010 ರಲ್ಲಿ ಜಗತ್ತು ನಾಶವಾಗುತ್ತೆ ಎಂದಿತ್ತು. ಇವೆಲ್ಲ 2010 ರಿಂದೀಚೆ ಬಂದ ವದಂತಿಗಳು. ಇದಕ್ಕೂ ಮೊದಲು ಮತ್ತು 2017 ರ ನಂತರವೂ ಜಗತ್ತು ನಾಶವಾಗುವ ದಿನಾಂಕಗಳನ್ನು ಹಲವರು ನೀಡಿದ್ದಾರೆ. ಆದರೆ ಈ ಎಲ್ಲವೂ ಸುಳ್ಳು, ಯಾವುದಕ್ಕೂ ವೈಜ್ಞಾನಿಕ ತಳಹದಿ ಇಲ್ಲ ಎಂಬುದನ್ನು ವಿಜ್ಞಾನಿಗಳೇ ತಿಳಿಸಿದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Is it true that 23rd September is World end day? David Meade a christian numerologist has told that Sep 23rd 2017 is world end day. But these type of predictions are there from so many years. Here are 10 predictions which became a lie later.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more