ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯರು ಇಂದು ಟ್ವಿಟ್ಟರ್ ನಿಂದ ದೂರ ಉಳಿದಿರೋದ್ಯಾಕೆ?!

|
Google Oneindia Kannada News

ಜಗತ್ತಿನ ನಾನಾ ದೇಶದ ಮಹಿಳೆಯರು ಇವತ್ತೊಂದಿನ ಟ್ವಿಟ್ಟರ್ ಗೆ ಬಾಯ್ ಬಾಯ್ ಹೇಳುತ್ತಿದ್ದಾರೆ. #WomenBoycottTwitter ಎಂಬ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಟ್ವೀಟ್ ಮಾಡಿ, ಇವತ್ತಿಡೀ ತಾವು ಯಾವ ಟ್ವೀಟ್ ಅನ್ನೂ ಮಾಡುವುದಿಲ್ಲವೆಂದು ಹೇಳಿ ಅಜ್ಞಾತರಾಗಿದ್ದಾರೆ. ಅಷ್ಟಕ್ಕೂ ಇಂದು #WomenBoycottTwitter ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿರುವುದಕ್ಕೆ ಕಾರಣವೇನು? ಮಹಿಳೆಯರು ಟ್ವೀಟ್ ಮಾಡದೆ ಇರುವ ನಿರ್ಧಾರಕ್ಕೆ ಬಂದಿದ್ದೇಕೆ?

ಅಮೆರಿಕದ ಪ್ರಸಿದ್ಧ ನಟಿ, ನಿರ್ದೇಶಕಿ, ನಿರ್ಮಾಪಕಿ ಮತ್ತು ಗಾಯಕಿ ರೋಸ್ ಮ್ಯಾಕ್ ಗೊವನ್ ಅವರ ಟ್ವಿಟ್ಟರ್ ಖಾತೆಯನ್ನು ಟ್ವಿಟ್ಟರ್ ಆಡಳಿತ ಮಂಡಳಿ ಅಮಾನತು ಮಾಡಿರುವುದೇ ಮಹಿಳಾವಾದಿಗಳು ಈ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಕಾರಣ.

'ಮಹಿಳೆಗೆ ಸ್ವಾತಂತ್ರ್ಯದೊಂದಿಗೆ ಸ್ವಾವಲಂಬಿ ಬದುಕು ಅಗತ್ಯ''ಮಹಿಳೆಗೆ ಸ್ವಾತಂತ್ರ್ಯದೊಂದಿಗೆ ಸ್ವಾವಲಂಬಿ ಬದುಕು ಅಗತ್ಯ'

ಅಮೆರಿಕದ ಖ್ಯಾತ ಚಿತ್ರ ನಿರ್ದೇಶಕ ಹಾರ್ವಿ ವಿನ್ ಸ್ಟೇನ್ ಮೇಲೆ ರೀಸ್ ಅವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದಾದ ನಂತರ ಟ್ವಿಟ್ಟರ್ ನಲ್ಲಿ ರೋಸ್ ಅವರು ಒಬ್ಬರ ಖಾಸಗಿ ಫೋನ್ ಸಂಖ್ಯೆಯೊಂದನ್ನು ಹಾಕಿದ್ದರು. ಹೀಗೆ ಒಬ್ಬರ ಖಾಸಗಿ ದೂರವಾಣಿ ಸಂಖ್ಯೆಗಳನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡುವುದು ಟ್ವಿಟ್ಟರ್ ನ ನಿಯಮಕ್ಕೆ ಬಾಹಿರ. ಆದ್ದರಿಂದ ಅವರ ಖಾತೆಯನ್ನು ಕೆಲದಿನಗಳ ಮಟ್ಟಿಗೆ ಅಮಾನತು ಮಾಡಲಾಗಿದೆ ಎಂದು ಟ್ವಿಟ್ಟರ್ ತಿಳಿಸಿದೆ.

ಇದರಿಂದ ರೊಚ್ಚಿಗೆದ್ದ ರೋಸ್ ಅಭಿಮಾನಿಗಳು ಟ್ವಿಟ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ #WomenBoycottTwitter ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದ್ದು, ಸಾವಿರಾರು ಮಹಿಳೆಯರು ತಾವಿಂದು ಯಾವುದೇ ಟ್ವೀಟ್ ಮಾಡುವುದಿಲ್ಲ ಎಂದು ತಿಳಿಸಿ ಅಜ್ಞಾತರಾಗಿದ್ದಾರೆ. ಆದರೆ ರೋಸ್ ಟ್ವಿಟ್ಟರ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ಟ್ವಿಟ್ಟರ್ ಖಾತೆಯನ್ನು ಅಮಾನತುಗೊಳಿಸಲಾಗಿದೆ. ಉಳಿದವರು ಅದಕ್ಕೆ ಬೆಂಬಲ ನೀಡುವುದು ಸರಿಯೇ ಎಂಬ ಮಾತುಗಳೂ ಕೇಳಿಬರುತ್ತಿವೆ. ಒಟ್ಟಿನಲ್ಲಿ ಪರ-ವಿರೋಧದ ನಡುವೆಯೇ #WomenBoycottTwitter ಹ್ಯಾಶ್ ಟ್ಯಾಗ್ ಟಾಪ್ ಟ್ರೆಂಡಿಂಗ್ ಆಗಿದೆ.

ಕೆಲ್ಲಿ ಎಲ್ಲಿಸ್

#WomenBoycottTwitter ಗೆ ಬೆಂಬಲ ನೀಡಿ. ಈ ಮೂಲಕ ಮಹಿಳೆಯರ ಮೇಲೆ ನಡೆವ ದೌರ್ಜನ್ಯವನ್ನು ತಡೆಯಲು ಟ್ವಿಟ್ಟರ್ ವಿಫಲವಾಗಿದೆ ಎಂಬುದನ್ನು ಸಾಬೀತುಪಡಿಸಿ ಎಂದು ಕೆಲ್ಲಿ ಎಲ್ಲಿಸ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಅಲಿಸಾ ಮಿಲ್ಯಾನೋ

ಕಳೆದ ಹತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ಅಕ್ಟೋಬರ್ 13, 2017 ರಂದು ನಾನು ಟ್ವೀಟ್ ಮಾಡಬಾರದೆಂದು ನಿಶ್ಚಯಿಸಿದ್ದೇನೆ. ಎಲ್ಲರೂ ನಮ್ಮನ್ನು ಬೆಂಬಲಿಸಿ ಎಂದು ಅಲಿಸಾ ಮಿಲ್ಯಾನೋ ಎಂಬುವವರು ಟ್ವೀಟ್ ಮಾಡಿದ್ದಾರೆ.

ಗರಿಮಾ ಸಿಂಗ್

ಸಾಮಾಜಿಕ ಮಾಧ್ಯಮಗಳನ್ನು ಒಂದು ದಿನ ಬಹಿಷ್ಕರಿಸುವುದರಿಂದ ಹಿಂಸೆಯನ್ನು ತಡೆಯಬಹುದು, ನಿಲ್ಲಿಸಬಹುದು ಅಂತ ನಿಮಗನ್ನಿಸುತ್ತಾ? ಸ್ವಲ್ಪ ಮೆದುಳು ಉಪಯೋಗಿಸಿ! ಎಂದು ಗರಿಮಾ ಸಿಂಗ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ವಿಂಟನ್

ಒಂದು ದಿನ ಟ್ವಿಟ್ಟರ್ ಬಹಿಷ್ಕರಿಸುವುದರಿಂದ ಸಿಗುವ ಫಲಿತಾಂಶವೇನು? ಇದೊಂದು ಪ್ರತಿಭಟನೆಯೇ ಅಲ್ಲ್. ಅದರ ಬದಲು ಟ್ವಿಟ್ಟರ್ ಉಪಯೋಗವನ್ನೇ ನಿಲ್ಲಿಸಬೇಕು. ಆದರೆ ಅದು ಸಾಧ್ಯವಿಲ್ಲದ ಮಾತು ಎಂದು ವಿಂಟನ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಬಿಲ್ ಮೆ

ನಾನಿದನ್ನು ಬೆಂಬಲಿಸುತ್ತೇನೆ. ತನ್ನ ಗ್ರಾಹಕರನ್ನು ರಕ್ಷಿಸುವಲ್ಲಿ, ಭದ್ರತೆ ನೀಡುವಲ್ಲಿ ಟ್ವಿಟ್ಟರ್ ಮತ್ತಷ್ಟು ಸುಧಾರಿಸಬೇಕಿದೆ ಎಂದು ಬಿಲ್ ಮೆ ಎನ್ನುವವರು ಟ್ವೀಟ್ ಮಾಡಿದ್ದಾರೆ.

English summary
Actors and activists are calling for users to boycott Twitter for a day after the service suspended to American Actress, director, producer and singer Rose McGowan for violating its terms and policies. #WomenBoycottTwitter becoming a trending hashtag now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X