ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಸರಕಾರದ 'ಒಂದು ಆದೇಶ': ವಿಚ್ಛೇದನ ಪ್ರಮಾಣದಲ್ಲಿ ಭಾರಿ ಕುಸಿತ

|
Google Oneindia Kannada News

ಹಾಂಗ್‌ಕಾಂಗ್‌, ಮೇ 19: ಚೀನಾದಲ್ಲಿ ಈ ವರ್ಷದ ಆರಂಭದಲ್ಲಿ ಕಡ್ಡಾಯವಾಗಿ ಮಧ್ಯಂತರ ಅವಧಿಯನ್ನು ಘೋಷಿಸಿದ ಬಳಿಕ ಚೀನಾದಲ್ಲಿ ವಿಚ್ಛೇದನ ಪ್ರಮಾಣ ಶೇ. 70 ಕ್ಕಿಂತಲೂ ಕಡಿಮೆಯಾಗಿದೆ.

ಚೀನಾದ ದೇಶದ ನಾಗರಿಕ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, 2021 ರ ಮೊದಲ ತ್ರೈಮಾಸಿಕದಲ್ಲಿ 2,96,000 ವಿಚ್ಛೇದನಗಳು ನೋಂದಾವಣೆ ಆಗಿದೆ. ಇದಕ್ಕೂ ಮೊದಲು ಕಳೆದ ವರ್ಷದ ಅಂತಿಮ ತ್ರೈಮಾಸಿಕದಲ್ಲಿ 1.06 ಮಿಲಿಯನ್‌ ವಿಚ್ಛೇದನ ಪ್ರಮಾಣ ಇದ್ದವು. ಇದನ್ನು ಹೋಲಿಕೆ ಮಾಡಿದಾಗ ಶೇ. 72 ರಷ್ಟು ವಿಚ್ಛೇದನ ಪ್ರಮಾಣ ಕುಸಿತವಾಗಿದೆ. ವರ್ಷ ಕಳೆದಂತೆ ಶೇ. 52 ರಷ್ಟು ವಿಚ್ಛೇದನ ಪ್ರಮಾಣ ಕಡಿಮೆಯಾಗುತ್ತಲಿದೆ.

ಜನವರಿ 1 ರಿಂದ ಜಾರಿಗೆ ಬಂದ ಹೊಸ ನೀತಿಯ ಪ್ರಕಾರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ದಂಪತಿಗಳು ತಮ್ಮ ಅರ್ಜಿಯನ್ನು ಸಲ್ಲಿಸಿದ 30 ದಿನಗಳವರೆಗೂ ಕಾಯಬೇಕಾಗಿದೆ. ಈ ಕಾಲಾವಧಿಯಲ್ಲಿ ಪತಿ ಅಥವಾ ಪತ್ನಿ ತಮ್ಮ ಅರ್ಜಿಯನ್ನು ಹಿಂಪಡೆಯಲು ಅವಕಾಶವಿದೆ. ಇನ್ನು ಒಂದು ತಿಂಗಳವರೆಗೂ ಈ ದಂಪತಿಗಳು ವಿಚ್ಛೇದನ ನಿರ್ಧಾರದಿಂದ ಹಿಂದಕ್ಕೆ ಸರಿಯದಿದ್ದಲ್ಲಿ ಒಂದು ತಿಂಗಳ ನಂತರ ಪುನಃ ವಿಚ್ಛೇದನ ಅರ್ಜಿ ಸಲ್ಲಿಸಬೇಕು.

Divorces fall 70% in China after government orders couples to cool off

ಇನ್ನು ದೇಶದ ಹಲವಾರು ಭಾಗಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ಈ ಕಾನೂನಿನ ವಿರುದ್ದ ವ್ಯಾಪಕ ಟೀಕೆಯೂ ವ್ಯಕ್ತವಾಗಿದೆ. ಈ ಕಾನೂನು "ವೈಯಕ್ತಿಕ ಸ್ವಾತಂತ್ರ್ಯಗಳಿಗೆ ಅಡ್ಡಿಯುಂಟುಮಾಡುತ್ತದೆ. ಜನರನ್ನು ಅತೃಪ್ತಿ ಅಥವಾ ಹಿಂಸಾತ್ಮಕ ವಿವಾಹಗಳಲ್ಲಿ ಸಿಲುಕವಂತೆ ಮಾಡುತ್ತದೆ" ಎಂದು ದೂರಲಾಗಿದೆ. ಆದರೆ ಈ ಕಾನೂನಿಗೆ ಬೆಂಬಲ ಸೂಚಿಸಿರುವವರು ಈ ಕಾನೂನು "ಕುಟುಂಬ ಸ್ಥಿರತೆ ಮತ್ತು ಸಾಮಾಜಿಕ ವ್ಯವಸ್ಥೆ ಗಟ್ಟಿಗೊಳಿಸಲು ದಾರಿ" ಎಂದು ಸಮರ್ಥಿಸಿಕೊಂಡಿದೆ. ಈ ನಡುವೆ ಹಿಂಸಾಚಾರದ ಹಿನ್ನೆಲೆ ವಿಚ್ಛೇದನ ನೀಡುವ ಸಂದರ್ಭದಲ್ಲಿ ಶೀಘ್ರ ವಿಚ್ಚೇದನ ಪಡೆಯಲು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಬಹುದು ಎಂದು ಹೇಳುವ ಮೂಲಕ ಚೀನಾ ಅಧಿಕಾರಿಗಳು ಈ ನಿಯಮವನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಇದಕ್ಕೆ ಇನ್ನಷ್ಟು ದೀಘ್ರ ಸಮಯ ತಗುಲುತ್ತದೆ ಎಂದು ಹೇಳಲಾಗಿದೆ.

ಆದರೆ ಆಲ್-ಚೀನಾ ಮಹಿಳಾ ಒಕ್ಕೂಟದ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಚೀನಾದಲ್ಲಿ ವಿಚ್ಛೇದನೆ ಪ್ರಕರಣ ಹೆಚ್ಚುತ್ತಿವೆ. ಇದಕ್ಕೆ ಮಹಿಳೆಯರಿಗೆ ಇಲ್ಲಿರುವ ಅಧಿಕ ಸ್ವಾಯತ್ತತೆ, ಸಾಮಾಜಿಕ ಸಮಸ್ಯೆಗಳು ಕುಂಠಿತವಾಗಿರುವುದು ಕಾರಣ ಎಂಬುದು ಆಲ್-ಚೀನಾ ಮಹಿಳಾ ಒಕ್ಕೂಟದ ವಾದವಾಗಿದೆ. ಹಾಗೆಯೇ ಶೇ. 70 ಕ್ಕಿಂತ ಅಧಿಕ ವಿಚ್ಛೇದನೆಯು ಮಹಿಳೆಯರೇ ನೀಡಿರುವುದಾಗಿದೆ ಎಂದು ಹೇಳಿದ್ದಾರೆ.

ಇನ್ನು ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ನಾಗರಿಕ ವ್ಯವಹಾರಗಳ ಸಚಿವಾಲಯದ ಅಧಿಕಾರಿ ಯಾಂಗ್ ಝೋಗ್ಟಾವ್‌, ವಿವಾಹ ಮತ್ತು ಸಂತಾನೋತ್ಪತ್ತಿ ನಿಕಟ ಸಂಬಂಧ ಹೊಂದಿದೆ. ಆದರೆ ಈಗ ವಿವಾಹ ದರವು ಕುಸಿತ ಕಾಣುತ್ತಿರುವುದು ಜನಸಂಖ್ಯೆಯ ಮೇಲೆ ಪರಿಣಾಮ ಬೀರುತ್ತಿದೆ. ಇದು ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆಯನ್ನು ಮುನ್ನಲೆಗೆ ತರಬೇಕು ಎಂದು ಕೂಡಾ ಹೇಳಿದ್ದಾರೆ.

ಇನ್ನು ಈ ಮಧ್ಯಂತರ ಅವಧಿಯು ವಿಚ್ಛೇದನ ಪ್ರಮಾಣದಲ್ಲಿ ಗಣನೀಯ ಪ್ರಮಾಣದ ಇಳಿಕೆಗೆ ಕಾರಣವಾಗಿದೆ. ಚೀನಾ ಮಾತ್ರ ವಿಚ್ಛೇದನ ನೀಡುವವರಿಗೆ ಮಧ್ಯಂತರ ಅವಧಿಯ ಆಯ್ಕೆ ನೀಡಿಲ್ಲ. ಫ್ರಾನ್ಸ್ ಮತ್ತು ಯುಕೆಯಲ್ಲಿಯೂ ಈ ಕಾನೂನು ಇದೆ.

English summary
After declaring mandatory cooling-off period in China earlier this year, the divorce rate in China is decreased to Less than 70 percent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X