Imran Khan: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಭವಿಷ್ಯ ಏನಾಗುತ್ತೆ?

ಇಮ್ರಾನ್ ಖಾನ್ ಈಗ ಜೈಲೂಟ ತಿನ್ನುತ್ತಿದ್ದಾರೆ, ಪಾಕಿಸ್ತಾನ ಸೇನೆ & ಐಎಸ್‌ಐ ವಿರುದ್ಧ ಮಾತನಾಡಿ ಪಾಕ್ ಮಾಜಿ ಪ್ರಧಾನಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ಚುನಾವಣೆಗೆ ಸಿದ್ಧತೆ ನಡೆದಿದೆ. ಹೀಗಾಗಿ ಹೇಗಾದರೂ ಮಾಡಿ ಇಮ್ರಾನ್ ಅವರನ್ನು ಹೊರಗಡೆ ಕರೆತರಬೇಕು ಎಂಬ ಪ್ರಯತ್ನ ಸಾಗಿದೆ. ಆದರೆ ಇಲ್ಲಿ ಯಾವುದೂ ವರ್ಕೌಟ್ ಆಗ್ತಿಲ್ಲ. ಹೀಗಿದ್ದಾಗಲೇ ಮಹತ್ವದ ತೀರ್ಪನ್ನು ಕೋರ್ಟ್ ಕೂಡ ಕಾಯ್ದಿರಿಸಿದೆ.

ಅಂದಹಾಗೆ ಇಮ್ರಾನ್ ವಿರುದ್ಧ ಕಠಿಣವಾದ ಪ್ರಕರಣ ದಾಖಲಾಗಿದೆ. ರಹಸ್ಯ ದಾಖಲೆಗಳ ಸೋರಿಕೆ ಪ್ರಕರಣದಲ್ಲಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನ ಕಾರಾಗೃಹದಲ್ಲಿಯೇ ವಿಚಾರಣೆ ನಡೆಸಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ಇನ್ನು ಈ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದೆ ಇಸ್ಲಾಮಾಬಾದ್‌ ಹೈಕೋರ್ಟ್‌. ಅರ್ಜಿಯ ವಿಚಾರಣೆ ಪೂರ್ಣವಾಗಿದ್ದರೂ ಈಗ ತೀರ್ಪನ್ನು ಕಾಯ್ದಿರಿಸಿದೆ. ಹೀಗಾಗಿ ಇಮ್ರಾನ್ ಖಾನ್ ಭವಿಷ್ಯ ಏನಾಗಲಿದೆ? ಎಂಬ ಕುತೂಹಲ ಮನೆಮಾಡಿದೆ.

case-against-imran-khan

ಜೈಲು ಸೇರಿದ್ದು ಏಕೆ ಇಮ್ರಾನ್?

ಮೊದಲಿಗೆ ಭ್ರಷ್ಟಾಚಾರ ಆರೋಪದಡಿ ಜೈಲಿಗೆ ಸೇರಿದ್ದ ಇಮ್ರಾನ್ ಖಾನ್‌ಗೆ ರಿಲೀಫ್ ಸಿಕ್ಕು ಬಿಡುಗಡೆ ಆಗಿದ್ದರು. ಆದರೆ ರಿಲೀಸ್ ಆಗುತ್ತಿದ್ದಂತೆ ಅವರನ್ನು ಮತ್ತೆ ಬಂಧಿಸಲಾಗಿತ್ತು. ಭ್ರಷ್ಟಾಚಾರ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಇಮ್ರಾನ್‌ ಆಗಸ್ಟ್‌ 5ರಿಂದ ಪಂಜಾಬ್‌ ಪ್ರಾಂತ್ಯದ ಅಟ್ಟೋಕ್‌ ಕಾರಾಗೃಹದಲ್ಲಿ ಇದ್ದಾರೆ. ಆದರೆ ಆಗಸ್ಟ್‌ 29ರಂದು ಇಸ್ಲಾಮಾಬಾದ್‌ ಹೈಕೋರ್ಟ್‌ ಭ್ರಷ್ಟಾಚಾರ ಪ್ರಕರಣದ ಶಿಕ್ಷೆಯ ತೀರ್ಪನ್ನೇ ಅಮಾನತು ಮಾಡಿತ್ತು. ಆದರೆ ರಹಸ್ಯ ದಾಖಲೆ ಸೋರಿಕೆ ಪ್ರಕರಣದ ಅಡಿ ಇಮ್ರಾನ್ ಖಾನ್ ಜೈಲಿನಲ್ಲಿಯೇ ಉಳಿಯುವ ಸ್ಥಿತಿ ನಿರ್ಮಾಣವಾಗಿತ್ತು.

ಇಮ್ರಾನ್ ಪರ ವಕೀಲರ ವಾದ ಏನು?

ಅಷ್ಟಕ್ಕೂ ರಾಜತಾಂತ್ರಿಕ ದಾಖಲೆಗಳನ್ನ ಸೋರಿಕೆ ಮಾಡಿದ ಆರೋಪದ ಹಿನ್ನೆಲೆ ಪಾಕಿಸ್ತಾನದ ಅಧಿಕೃತ ರಹಸ್ಯ ದಾಖಲೆ ಕಾಯ್ದೆಯಡಿ ಇಮ್ರಾನ್ ಖಾನ್ ವಿರುದ್ಧ ಕೇಸ್ ದಾಖಲಾಗಿದೆ. ಇನ್ನು ವಿಚಾರಣೆ ಸ್ಥಳವನ್ನ ಬದಲಾವಣೆ ಮಾಡಿದ ವಿಚಾರವಾಗಿ ಮತ್ತು ಜೈಲಿನಲ್ಲೇ ಇಮ್ರಾನ್‌ರ ವಿಚಾರಣೆ ನಡೆಸಿದ್ದಕ್ಕೆ ಅರ್ಜಿ ಸಲ್ಲಿಸಿದ್ದರು ಇಮ್ರಾನ್ ಖಾನ್ ಪರ ವಕೀಲರು. ಇದೀಗ ಆ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಕೋರ್ಟ್, ತೀರ್ಪು ಕಾಯ್ದಿರಿಸಿದೆ.

case-against-imran-khan

ಕೋರ್ಟ್‌ನಲ್ಲಿ ವಾದ ಮಂಡಿಸಿದ್ದ ಇಮ್ರಾನ್ ಖಾನ್ ಪರ ವಕೀಲರು ಇಸ್ಲಾಮಾಬಾದ್‌ನಿಂದ ಪಂಜಾಬ್‌ಗೆ ಸ್ಥಳಾಂತರಿಸಿದ್ದು ಏಕೆ? ಬೇರೆ ಪ್ರಾಂತ್ಯದಲ್ಲಿ ವಿಚಾರಣೆ ನಡೆಸಲು ಪಾಕ್ ಸುಪ್ರೀಂ ಕೋರ್ಟ್‌ ಅನುಮತಿ ಪಡೆಯಬೇಕು. ಮುಖ್ಯ ಆಯುಕ್ತರು ಅಥವಾ ಗೃಹ ಕಾರ್ಯದರ್ಶಿಯ ಸೂಚನೆ ಹಿನ್ನೆಲೆ ಸ್ಥಳಾಂತರ ಮಾಡುವಂತಿಲ್ಲ. ಸ್ಥಳ ಬದಲಾಯಿಸಲು ನಿರ್ಧಾರ ಮಾಡಿದರೆ ವಿಚಾರಣೆ ನಡೆಯುವ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಒಪ್ಪಿಗೆ ಪಡೆಯಬೇಕಾಗುತ್ತೆ ಎಂಬ ವಾದ ಮಂಡಿಸಲಾಗಿತ್ತು. ಇಮ್ರಾನ್ ಪರ ವಕೀಲ ಶೇರ್ ಅಫ್ಜಲ್ ಮಾರ್ವತ್ ಕೋರ್ಟ್ ಎದುರು ಈ ಅಂಶ ಪ್ರಸ್ತಾಪಿಸಿದ್ದರು.

ಹೆಂಗೆ ಲಾಕ್ ಆಗಿದ್ದು ಇಮ್ರಾನ್?

ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿ ಹುದ್ದೆಗೆ ಏರಿದ್ದರು. ಆದ್ರೆ ಸೇನೆ ಹಾಗೂ ಪಾಕಿಸ್ತಾನದ ಐಎಸ್‌ಐ ವಿರೋಧ ಕಟ್ಟಿಕೊಂಡು ಮಾಜಿ ಪ್ರಧಾನಿ ಆಗಿದ್ದಾರೆ. ಇಷ್ಟೆಲ್ಲದರ ಮಧ್ಯೆ ಇಮ್ರಾನ್ ಖಾನ್ ತಮ್ಮನ್ನು ಪ್ರಧಾನ ಮಂತ್ರಿಯ ಹುದ್ದೆಯಿಂದ ಕೆಳಗಿಳಿಸಲು ಅಮೆರಿಕ ಬೆಂಬಲಿತ ಪಿತೂರಿ ನಡೆದಿತ್ತು ಎಂದು ಆರೋಪಿಸಿದ್ದರು. ಈ ಆರೋಪ ಇಮ್ರಾನ್‌ ಖಾನ್‌ಗೆ ಮುಳುವಾಗಿದೆ. ಪಿಎಂ ಹುದ್ದೆಯಿಂದ ಕೆಳಗೆ ಇಳಿಸುವ ಮುನ್ನ ಕೆಲ ದಾಖಲೆಗಳನ್ನ ಇಮ್ರಾನ್ ಪ್ರದರ್ಶನ ಮಾಡಿದ್ದರು, ಅದೇ ಈಗ ಸಂಕಷ್ಟ ತಂದೊಡ್ಡಿದೆ ಎನ್ನಲಾಗುತ್ತಿದೆ.

ಇದೆಲ್ಲವನ್ನೂ ನೋಡುತ್ತಿದ್ದರೆ ಪಾಕಿಸ್ತಾನದ ರಾಜಕೀಯ ಪರಿಸ್ಥಿತಿ ಬದಲಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಇತ್ತೀಚೆಗೆ ಪಾಕಿಸ್ತಾನದ ಸಂಸತ್ ಕೂಡ ವಿಸರ್ಜನೆಯಾಗಿದ್ದು, ಇನ್ನು ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಅದಕ್ಕೂ ಮುನ್ನ ಜೈಲಿನಿಂದ ಹೊರಗೆ ಬರಲು ಇಮ್ರಾನ್ ಖಾನ್ ಯತ್ನಿಸುತ್ತಿದ್ದಾರೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಈ ಪರಿಸ್ಥಿತಿಯಲ್ಲಿ ಇಮ್ರಾನ್ ಖಾನ್ ಬೆಂಬಲಿಗರ ಪ್ರತಿಭಟನೆ ಜೋರಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+