ನಾನೇನು ಭಾರತದಿಂದ ಓಡಿ ಬಂದಿಲ್ಲ : ವಿಜಯ್ ಮಲ್ಯ

Posted By:
Subscribe to Oneindia Kannada

ಲಂಡನ್, ಡಿಸೆಂಬರ್ 04: ಎಸ್ಬಿಐ ಸೇರಿದಂತೆ ವಿವಿಧ ಬ್ಯಾಂಕ್‌ ‌ಗಳಲ್ಲಿ 9,000 ಕೋಟಿ ರುಗಳಿಗೂ ಹೆಚ್ಚು ಸಾಲ ಮಾಡಿ ದೇಶ ತೊರೆದಿರುವ ಉದ್ಯಮಿ ಮಲ್ಯ ಅವರು ಇಂದು ಇಲ್ಲಿನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ವಿಚಾರಣೆಗಾಗಿ ಹಾಜರಾದರು.

ವಿಜಯ್‌ ಮಲ್ಯರನ್ನು ಭಾರತಕ್ಕೆ ಹಸ್ತಾಂತರ ಕುರಿತಂತೆ ಲಂಡನ್ನಿನ ವೆಸ್ಟ್‌‌ ಮಿನಿಸ್ಟರ್‌‌ ಮ್ಯಾಜಿಸ್ಟ್ರೇಟ್‌‌‌‌‌‌ ಕೋರ್ಟ್‌‌ನಲ್ಲಿ ವಿಚಾರಣೆ ನಡೆಸಲಾಯಿತು.

'Did not escape India, all allegations fabricated': Mallya

'ನನ್ನ ವಿರುದ್ಧದ ಆರೋಪಗಳು ಸುಳ್ಳು, ನಿರಾಧಾರ ಮತ್ತು ಸೃಷ್ಟಿಸಲ್ಪಟ್ಟಿದ್ದು. ಈ ಹಿಂದೆ ಸಹ ನಾನು ಹೇಳಿಕೆ ನೀಡಿರುವೆ. ಇದರ ಹೊರತಾಗಿ ನನಗೆ ಬೇರೇನೂ ಹೇಳುವುದಕ್ಕಿಲ್ಲ. ನಾನು ಕೋರ್ಟಿಗೆ ಸಲ್ಲಿಸಿರುವ ಹೇಳಿಕೆಯಲ್ಲೇ ಇದು ಸ್ಪಷ್ಟವಿದೆ, ನಾನು ಭಾರತದಿಂದ ಇಲ್ಲಿಗೆ ಓಡಿ ಬಂದಿಲ್ಲ' ಎಂದು ಮಲ್ಯ ಹೇಳಿದರು.

ವಿಚಾರಣೆ ವೇಳೆ ಫೈರ್ ಅಲರಾಂ ಬಾರಿಸಿದ್ದರಿಂಡ ವಿಚಾರಣೆಯನ್ನು ಮಧ್ಯಕ್ಕೆ ನಿಲ್ಲಿಸಬೇಕಾದ ಘಟನೆ ನಡೆಯಿತು.ಸುಮಾರು 20 ನಿಮಿಷಗಳ ನಂತರ ವಿಚಾರಣೆ ಮತ್ತೆ ಆರಂಭವಾಯಿತು. ಮಲ್ಯ ವಿರುದ್ಧದ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 14ಕ್ಕೆ ಮುಂದೂಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Liquor baron Vijay Mallya has arrived at the London's Westminster Magistrates Court for the hearing in extradition case on Monday. The trial will last until December 14, with December 8 marked a non-sitting day.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ