ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನದ ಮತ್ತೆ ಅವಳಿ ಬಾಂಬ್ ಸ್ಪೋಟ, 10 ಬಲಿ

By Sachhidananda Acharya
|
Google Oneindia Kannada News

ಕಾಬೂಲ್, ಜೂನ್ 6: ಅಫ್ಘಾನಿಸ್ತಾನ ಮತ್ತೆ ಉಗ್ರರ ದಾಳಿಗೆ ಗುರಿಯಾಗಿದೆ. ಹೆರಾತ್ ನಗರದ ಪೊಲೀಸ್ ಕಚೇರಿ ಮತ್ತು ಮಸೀದಿ ಸಮೀಪ ಸಂಭವಿಸಿದ ಬಾಂಬ್ ಸ್ಪೋಟದಲ್ಲಿ ಕನಿಷ್ಠ 10 ಜನ ಸಾವನ್ನಪ್ಪಿದ್ದಾರೆ.

12ನೇ ಶತಮಾನದಷ್ಟು ಹಳೆಯ ಜಾಮಾ ಮಸೀದಿ ಸಮೀಪ ರಿಕ್ಷಾದಲ್ಲಿಟ್ಟಿದ್ದ ಬಾಂಬ್ ಸ್ಪೋಟಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಘಟನೆಯಲ್ಲಿ ಹಲವಾರು ಜನ ಗಾಯಗೊಂಡಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

Deadly explosion in Afghanistan's Herat, 10 killed

ಮಸೀದಿಯಲ್ಲಿ ಹೊಗೆ ಮೇಲೇಳುತ್ತಿರುವ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದು, ಬಾಂಬ್ ಸ್ಪೋಟ ಭೀಕರವಾಗಿರುವಂತೆ ಕಾಣಿಸುತ್ತಿದೆ.

ಅಫ್ಗಾನಿಸ್ತಾನದ ಕಾಬೂಲ್ ಮೇಲೆ ಮೇ 31 ರಂದು ನಡೆದ ದಾಳಿಗೆ 150 ಜನ ಬಲಿಯಾಗಿದ್ದರು. ಈ ದಾಳಿಗೆ ಸಂಬಂಧಿಸಿದಂತೆ ಅಧ್ಯಕ್ಷ ಅಶ್ರಫ್ ಘನಿ ಇಂದು ಉನ್ನತ ಮಟ್ಟದ ಸಭೆ ನಡೆಸಿದ್ದರು. ಈ ಸಭೆ ಮುಗಿಯುತ್ತಿದ್ದಂತೆ ಮತ್ತೆ ಅಫ್ಘಾನಿಸ್ತಾನದಲ್ಲಿ ಬಾಂಬ್ ಸ್ಪೋಟದ ಸದ್ದು ಕೇಳಿಸಿದೆ.

ಇನ್ನು ಇಂದು ಬೆಳಿಗ್ಗೆ ಅಫ್ಘಾನಿಸ್ತಾನದಲ್ಲಿರುವ ಭಾರತ ರಾಯಭಾರ ಕಚೇರಿಯನ್ನು ಗುರಿಯಾಗಿಸಿ ರಾಕೆಟ್ ದಾಳಿ ನಡೆಸಲಾಗಿತ್ತು. ಇದು ರಾಯಭಾರ ಕಚೇರಿಯ ನಿವಾಸದ ಸಮೀಪವಿದ್ದ ಟೆನಿಸ್ ಕೋರ್ಟ್ ನಲ್ಲಿ ಬಂದು ಬಿದ್ದಿತ್ತು. ಇದರಿಂದ ಸಾಂಭಾವ್ಯ ಅಪಾಯವೊಂದು ಕೂದಲೆಳೆ ಅಂತರದಲ್ಲಿ ತಪ್ಪಿತ್ತು.

English summary
At least 10 people were killed and several wounded in an explosion near police offices and a mosque in Afghanistan's Herat province.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X