ಪಾಕಿಸ್ಥಾನ: ಮಾರುಕಟ್ಟೆಯಲ್ಲಿ ಬಾಂಬ್ ಸ್ಪೋಟ, 22 ಸಾವು

Subscribe to Oneindia Kannada

ಬೆಂಗಳೂರು, ಜನವರಿ 22: ಪಾಕಿಸ್ತಾನದ ಕುರ್ರಾಮ್ ಪ್ರಾಂತ್ಯದ ಪರಚಿನಾರ್ ನಗರದಲ್ಲಿ ಬಾಂಬ್ ಸ್ಪೋಟಿಸಿದ ಪರಿಣಾಯ 22 ಜನ ಅಸುನೀಗಿದ್ದಾರೆ. ಇಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ಸಂಭವಿಸಿದ ಸ್ಪೋಟದಲ್ಲಿ ಸುಮಾರು 90ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಶನಿವಾರ ಮಾರುಕಟ್ಟೆಯಲ್ಲಿ ಜನ ಹೆಚ್ಚಾಗಿ ಸೇರಿದ್ದರು. ಇದೇ ವೇಳೆಗೆ ಸರಿಯಾಗಿ ಬಾಂಬ್ ಸ್ಪೋಟ ಸಂಭವಿಸಿದೆ. ಗಾಯಗೊಂಡವರಲ್ಲಿ ಕೆಲವರ ಪರಿಸ್ಥಿತಿ ಚಿಂತಾಜನಕವಾಗಿದ್ದು ಪರಚಿನಾರ್ ಆಸ್ಪತ್ರೆಗೆ ಸೇರಿಸಲಾಗಿದೆ.

 Deadly blast in Pakistan’s, 22 lost life

ಪ್ರಾಂತ್ಯದ ಹೊರಗಿನಿಂದ ಬಂದ ತರಕಾರಿ ಗಾಡಿಯೊಂದರ ಬಾಕ್ಸ್ ನಲ್ಲಿ ಬಾಂಬ್ ಇಡಲಾಗಿತ್ತು ಎನ್ನಲಾಗಿದೆ. ಈ ಕುರಿತು ತನಿಖೆ ನಡೆಯುತ್ತಿದ್ದು, ನಂತರವಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ. ಶಿಯಾ ಮುಸ್ಲಿಮರನ್ನೆ ಗುರಿಯಾಗಿಸಿ ದಾಳಿ ನಡೆಸುವ ಲಷ್ಕರ್ ಇ ಝಂಗ್ವಿ ಸ್ಪೋಟದ ಹೊಣೆ ಹೊತ್ತಿದೆ. ಮಹಸೂದ್ ತಾಲಿಬಾನ್ ಗೆ ಸೇರಿದ ಶಹರ್ಯಾರ್ ಗುಂಪಿನ ಜತೆ ಸೇರಿ ಈ ಬಾಂಬ್ ದಾಳಿ ನಡೆಸಿರುವುದಾಗಿ ಅದು ಹೇಳಿಕೊಂಡಿದೆ.

ಕುರ್ರಾಮ್ ಪ್ರಾಂತ್ಯದಲ್ಲಿ ನೆಲೆ ನಿಂತಿರುವ ಉಗ್ರರ ವಿರುದ್ಧ ಪಾಕಿಸ್ತಾನ ಸೇನೆ ನಿರಂತರ ದಾಳಿಗಳನ್ನು ನಡೆಸುತ್ತಿದ್ದು, ಇದಕ್ಕೆ ಪ್ರತಿಕಾರ ತೀರಿಸಲು ಭಯೋತ್ಪಾದಕರು ಮೇಲಿಂದ ಮೇಲೆ ಜನರನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
22 people has been killed in deadly blast occurred at Eidgah Market in Parachinar city, the capital of Kurram Agency, Pakistan.
Please Wait while comments are loading...