• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಕ್ಷಿಣ ಆಫ್ರಿಕಾದಲ್ಲಿ ವಿಶ್ವದ ಮೂರನೇ ಅತಿ ದೊಡ್ಡ ವಜ್ರ ಪತ್ತೆ

|
Google Oneindia Kannada News

ಬೋಟ್ಸ್‌ವಾನಾ, ಜೂನ್ 17: ವಿಶ್ವದ ಮೂರನೇ ಅತಿ ದೊಡ್ಡ ವಜ್ರವನ್ನು ಪತ್ತೆ ಮಾಡಿರುವುದಾಗಿ ವಜ್ರ ಸಂಸ್ಥೆ ಡಿ ಬೀರ್ಸ್‌ನ ಡೆಬ್‌ಸ್ವಾನಾ ಡೈಮಂಡ್ ಕೋ ಘಟಕ ತಿಳಿಸಿದೆ.

ಬೋಟ್ಸ್‌ವಾನಾದಲ್ಲಿ ಜೂನ್ 1ರಂದು, ಜ್ವಾನೆಂಗ್ ಎಂಬಲ್ಲಿ 1098 ಕ್ಯಾರೆಟ್ ತೂಕದ ವಜ್ರದ ಹರಳು ಪತ್ತೆ ಮಾಡಿರುವುದಾಗಿ ಸಂಸ್ಥೆ ತಿಳಿಸಿದೆ. "ಪ್ರಾಥಮಿಕ ವಿಶ್ಲೇಷಣೆಯಲ್ಲಿ, ಈ ಅಮೂಲ್ಯ ಹರಳು ವಿಶ್ವದ ಮೂರನೇ ಅತಿ ದೊಡ್ಡ ವಜ್ರ ಎನ್ನಬಹುದಾಗಿದೆ" ಎಂದು ಡೆಬ್‌ಸ್ವಾನಾ ವ್ಯವಸ್ಥಾಪಕ ನಿರ್ದೇಶಕ ಲಿನೆಟ್ ಆರ್ಮ್‌ಸ್ಟ್ರಾಂಗ್ ಹೇಳಿದ್ದಾರೆ.

ಇತಿಹಾಸ ಪುಟ ಸೇರಿದ ಜಗತ್ತಿನ ಅತಿ ದೊಡ್ಡ ಗುಲಾಬಿ ವಜ್ರದ ಗಣಿಇತಿಹಾಸ ಪುಟ ಸೇರಿದ ಜಗತ್ತಿನ ಅತಿ ದೊಡ್ಡ ಗುಲಾಬಿ ವಜ್ರದ ಗಣಿ

ಈ ಮುನ್ನ 1905ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಅತಿ ದೊಡ್ಡ ವಜ್ರದ ಹರಳು ಕುಲಿನನ್ ಪತ್ತೆಯಾಗಿತ್ತು. ಇದು 3106 ಕ್ಯಾರೆಟ್‌ನದ್ದಾಗಿತ್ತು. 2015ರಲ್ಲಿ ಆಗ್ನೇಯ ಬೋಟ್ಸುವಾನಾದ ಕರೋವೆಯಲ್ಲಿ 1109 ಕ್ಯಾರೆಟ್‌ನ ಲೆಸಿಡಿ ಲಾ ರೋನಾ ಎಂಬ ವಜ್ರದ ಹರಳು ಪತ್ತೆಯಾಗಿತ್ತು. ಇದೀಗ ಮೂರನೇ ಅತಿ ದೊಡ್ಡ ವಜ್ರ ಪತ್ತೆಯಾಗಿದೆ.

ಡೆಬ್‌ಸ್ವಾನಾ ಕಂಪನಿ ಬೋಟ್ಸುವಾನ ಸರ್ಕಾರ ಮತ್ತು ಜಾಗತಿಕ ವಜ್ರ ಕಂಪನಿ ಡಿ ಬೀರ್ಸ್ ನಡುವಿನ ಸಹಭಾಗಿತ್ವದ ಕಂಪನಿಯಾಗಿದೆ. ಬಿಕ್ಕಟ್ಟಿನಲ್ಲಿರುವ ದಕ್ಷಿಣಾ ಆಫ್ರಿಕಾಗೆ ಈ ಒಂದು ವಜ್ರದಿಂದ ಆರ್ಥಿಕವಾಗಿ ನೆರವಾಗುವ ನಿರೀಕ್ಷೆ ವ್ಯಕ್ತವಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ವಜ್ರ ಮಿಲಿಯನ್‌ ಡಾಲರ್‌ಗಳಷ್ಟು ಹಣವನ್ನು ತಂದುಕೊಡುವಂಥದ್ದಾಗಿದೆ.

   Weather forecast ಧಾರಾಕಾರ ಮಳೆ ಜನ ಜೀವನ ಅಸ್ತವ್ಯಸ್ತ !! | Oneindia Kannada

   ಬೋಟ್ಸ್‌ವಾನಾ ಅಧ್ಯಕ್ಷ ಮಾಕ್‌ವೀಸಿ ಮಸಿಸಿ ಈ ವಜ್ರವನ್ನು ಪ್ರದರ್ಶನ ಮಾಡಿದ್ದಾರೆ.

   English summary
   Debswana Diamond Co., a unit of De Beers Plc, unearthed a 1,098 carat stone in Botswana on June 1. It could be the worlds biggest diamond
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X