ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಲ್ಲಾಸ್ ಪ್ರತಿಭಟನೆ ವೇಳೆ ಗುಂಡಿನ ದಾಳಿ: 5 ಅಧಿಕಾರಿಗಳು ಬಲಿ

By Madhusoodhan
|
Google Oneindia Kannada News

ಡಲ್ಲಾಸ್, ಜುಲೈ, 08: ಅಮೆರಿಕದ ಡಲ್ಲಾಸ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಪೊಲೀಸ್ ಅಧಿಕಾರಿಗಳ ಮೇಲೆ ಗುಂಡಿನ ದಾಳಿ ನಡೆದಿದೆ. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 5 ಜನ ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. 10 ಜನ ಪೊಲೀಸ್ ಅಧಿಕಾರಿಗಳು ಗಂಭೀರ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಯೂನಿಯನ್‌ ಚೌಕದ ಪಾರ್ಕ್‌ ಬಳಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಗುಂಡಿನ ಚಕಮಕಿ ನಡೆದಿದೆ. ಆಫ್ರಿಕನ್ ಅಮೆರಿನ್ ವ್ಯಕ್ತಿಗಳ ಹತ್ಯೆ ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಶೂಟೌಟ್ ನಡೆದಿದೆ.[ಢಾಕಾ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ತಾರಿಷಿ ಕುಟುಂಬ ಕಣ್ಣೀರಲ್ಲಿ]

america

ಪ್ರತಿಭಟನಾ ಮೆರವಣಿಗೆ ಸಂಚರಿಸುತ್ತಿದ್ದ ವೇಳೆ ಮಹಡಿ ಮೇಲಿನಿಂದ ಪೊಲೀಸರ ಮೇಲೆ ಗುಂಡಿನ ಸುರಿಮಳೆ ಗೈಯಲಾಗಿದೆ. ಅವಿತುಕೊಂಡಿದ್ದ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿರುವುದು ನೇರತ ಪ್ರಸಾರದಲ್ಲೇ ದಾಖಲಾಗಿದೆ.[ಐಎಸ್ಐಎಸ್ ಅಟ್ಟಹಾಸ: ಕತ್ತು ಕೊಯ್ದು 20 ವಿದೇಶಿಗರ ಹತ್ಯೆ]

ಗುಂಡಿನ ದಾಳಿ ಮಾಡಿದವರು ಪೂರ್ವನಿಯೋಜಿತವಾಗಿಯೇ ಸಿದ್ಧರಾಗಿದ್ದರು. ಪೊಲೀಸ್ ಅಧಿಕಾರಿಗಳನ್ನು ಕೊಲ್ಲಬೇಕು ಎಂಬ ಕಾರಣಕ್ಕೆ ಆಯುಧಗಳನ್ನು ಮೊದಲೇ ಸಿದ್ಧಮಾಡಿ ಇಟ್ಟುಕೊಂಡಿದ್ದರು ಎಂದು ಅಮೆರಿಕದ ಪೊಲೀಸ್ ಅಧಿಕಾರಿ ಬ್ರೌನ್ ತಿಳಿಸಿದ್ದಾರೆ. ಸದ್ಯ ಪರಿಸ್ಥಿತಿಯನ್ನು ನಿಯಂತ್ರಣ ಮಾಡಲಾಗಿದ್ದು ಗುಂಡಿನ ದಾಳಿ ನಡೆಸಿದ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.

English summary
A protest turned violent when two snipers killed at least 10 officers in Downtown Dallas at a protest of officer-involved shootings across the country. Five of them are reportedly dead. Dallas Police Chief David Brown said,"Tonight it appears that two snipers shot ten police officers from elevated positions during the protest/rally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X