• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

140 ವರ್ಷಗಳಲ್ಲೇ ಕ್ರೊಯೇಷಿಯಾ ಕಂಡ ಅತಿ ಪ್ರಬಲ ಭೂಕಂಪ

|

ಕ್ರೊಯೇಷಿಯಾ, ಡಿಸೆಂಬರ್ 30: ಮಂಗಳವಾರ ಕ್ರೊಯೇಷಿಯಾದಲ್ಲಿ ಸಂಭವಿಸಿದ ಭೂಕಂಪ, ದೇಶದಲ್ಲಿ 140 ವರ್ಷಗಳಲ್ಲೇ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪ ಎನ್ನಲಾಗಿದೆ. 2020ರಲ್ಲಿ ಸಂಭವಿಸಿದ ಎರಡನೇ ಭೂಕಂಪ ಇದಾಗಿದ್ದು, ಏಳು ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಮತ್ತಷ್ಟು ಜನರು ಸಾವನ್ನಪ್ಪಿರುವ ಶಂಕೆ ವ್ಯಕ್ತಗೊಂಡಿದೆ.

ಮಂಗಳವಾರ ಕ್ರೊಯೇಷಿಯಾದ ಪೆಟ್ರಿಂಝಾ ನಗರದಲ್ಲಿ ಭೂಕಂಪ ಸಂಭವಿಸಿದ್ದು, ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರದ ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆ ದಾಖಲಾಗಿತ್ತು. ಇದರ ಮುನ್ನಾ ದಿನವಷ್ಟೇ 5.2 ತೀವ್ರತೆಯ ಭೂಕಂಪ ಸಂಭವಿಸಿದ್ದು, ಪದೇ ಪದೇ ಭೂಕಂಪ ಸಂಭವಿಸಿರುವುದು ಜನರನ್ನು ಭೀತಿಗೆ ದೂಡಿದೆ. ನೆರೆ ರಾಷ್ಟ್ರಗಳಾದ ಸರ್ಬಿಯಾ, ಬೋಸ್ನಿಯಾ ಹಾಗೂ ದಕ್ಷಿಣ ಆಸ್ಟ್ರಿಯಾದಲ್ಲೂ ಭೂಕಂಪಿಸಿರುವುದಾಗಿ ತಿಳಿದುಬಂದಿದೆ.

ಕ್ರೊಯೇಷಿಯಾದಲ್ಲಿ ಪ್ರಬಲ ಭೂಕಂಪ; ಹಲವು ಜನರಿಗೆ ಗಾಯ

ಪೆಟ್ರಿಂಝಾ ಪಟ್ಟಣದಲ್ಲಿ ಹಲವು ಕಟ್ಟಡಗಳು ನೆಲಕ್ಕುರುಳಿವೆ. ಇಪ್ಪತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಏಳು ಜನರ ಮೃತದೇಹಗಳು ಪತ್ತೆಯಾಗಿವೆ. ಸಿಸಾಕ್ ನಗರದ ಆಸ್ಪತ್ರೆಯಲ್ಲಿ ಗಾಯಗೊಂಡವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಭೂಕಂಪದಿಂದ ಝಾಗ್ರೆಬ್ ನಗರದಲ್ಲೂ ಕಟ್ಟಡಗಳಿಗೆ ಹಾನಿಯಾಗಿದೆ.

"2020 ನಮಗೆ ದುರಂತಗಳ ಮೇಲೆ ದುರಂತ ತಂದೊಡ್ಡಿದೆ. ದೇಶ ಮೊದಲೇ ಕೊರೊನಾದಿಂದ ತತ್ತರಿಸಿದ್ದು, ವರ್ಷದಲ್ಲಿ ಎರಡನೇ ಬಾರಿ ಭೂಕಂಪ ಸಂಭವಿಸಿದೆ. ಇದು ಆರ್ಥಿಕತೆಗೆ ಭಾರೀ ಹೊಡೆತ ಕೊಟ್ಟಿದೆ' ಎಂದು ಉಪಾಧ್ಯಕ್ಷ ಡೇವರ್ ಬೊಝಿನೋವಿಕ್ ತಿಳಿಸಿದ್ದಾರೆ. ಈ ವರ್ಷದ ಮಾರ್ಚ್ ತಿಂಗಳಿನಲ್ಲೂ ಇದೇ ರೀತಿ ಭೂಕಂಪ ಸಂಭವಿಸಿದ್ದು, ಆಗಲೂ ಸುಮಾರು 20,000 ಕಟ್ಟಡಗಳು ನಾಶವಾಗಿದ್ದವು. ಅವುಗಳನ್ನು ದುರಸ್ತಿ ಮಾಡಿ ನಿಟ್ಟುಸಿರುಬಿಡುವ ಈ ಹೊತ್ತಿನಲ್ಲಿ ಮತ್ತೆ ಹಾನಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸ್ಲೊವೇನಿಯಾದ ಪರಮಾಣು ಘಟಕವನ್ನೂ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ನಿರಾಶ್ರಿತರಿಗೆ ಪರಿಹಾರ ಕೇಂದ್ರ ತೆರೆಯಲಾಗಿದೆ. ಹಂಗೇರಿ ಹಾಗೂ ಸ್ಲೋವೆನಿಯಾ ನಿರಾಶ್ರಿತರಿಗೆ ನೆರವು ಘೋಷಿಸಿವೆ. ಮುಂಜಾಗ್ರತಾ ಕ್ರಮವಾಗಿ ಹಳೆಯ ಕಟ್ಟಡಗಳಿಂದ ಜನರು ಸ್ಥಳಾಂತರಗೊಳ್ಳುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

1963ರಲ್ಲಿ ಕ್ರೊಯೇಷಿಯಾದಲ್ಲಿ ಅತಿ ಪ್ರಬಲ ಭೂಕಂಪ ಸಂಭವಿಸಿದ್ದು, ಯುಗೋಸ್ಲೋವ್ ನಲ್ಲಿ ಸುಮಾರು ಸಾವಿರ ಮಂದಿ ಸಾವನ್ನಪ್ಪಿ, ನಗರದ ಶೇ 80ರಷ್ಟು ಭಾಗ ನಾಶವಾಗಿತ್ತು.

English summary
Croatia suffered its worst earthquake in 140 years with the tremor killing at least seven people
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X