ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಲವು ದೇಶಗಳಲ್ಲಿ ಚೀನಾ ಪ್ರಯಾಣಿಕರಿಗೆ ನಿರ್ಬಂಧ: ಎಚ್ಚರಿಕೆ ನೀಡಿದ ಚೀನಾ

|
Google Oneindia Kannada News

ಬೀಚಿಂಗ್, ಜ. 03: ಚೀನಾದಲ್ಲಿ ಏಕಾಏಕಿ ಕೊರೊನಾ ಸೋಂಕಿತ ಪ್ರಕರಣಗಳು ಏರಿಕೆಯಾಗಿರುವ ಕಾರಣದಿಂದ ಚೀನಾ ದೇಶದಿಂದ ಬರುವ ಪ್ರಯಾಣಿಕರ ಮೇಲೆ ಹಲವು ದೇಶಗಳು ನಿರ್ಬಂಧಗಳನ್ನು ಜಾರಿಗೊಳಿಸಿವೆ. ಈ ನಿರ್ಧಾರಕ್ಕೆ ಚೀನಾ ಕಿಡಿಕಾರಿದ್ದು, ಎಚ್ಚರಿಕೆ ನೀಡಿದೆ.

ಮಂಗಳವಾರ ಈ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾ ತನ್ನ ಭೂಪ್ರದೇಶದಿಂದ ವಿದೇಶಕ್ಕೆ ಪ್ರಯಾಣಿಸುವ ಪ್ರಯಾಣಿಕರ ಮೇಲೆ ಸುಮಾರು ಹನ್ನೆರಡು ದೇಶಗಳು ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಿರುವುದನ್ನು ಖಂಡಿಸಿದೆ. ಜೊತೆಗೆ ಇದಕ್ಕೆ ಪ್ರತಿಕ್ರಿಯೆಯಾಗಿ ಪ್ರತಿಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಎಚ್ಚರಿಕೆ ರವಾನಿಸಿದೆ.

ಸಂಡೂರು: ತೋರಣಗಲ್‌ನ 42 ವರ್ಷದ ವ್ಯಕ್ತಿಗೆ ಕೊರೊನಾ ದೃಢ, ಅಗತ್ಯ ಕ್ರಮಕ್ಕೆ ಡಿಸಿ ಸೂಚನೆಸಂಡೂರು: ತೋರಣಗಲ್‌ನ 42 ವರ್ಷದ ವ್ಯಕ್ತಿಗೆ ಕೊರೊನಾ ದೃಢ, ಅಗತ್ಯ ಕ್ರಮಕ್ಕೆ ಡಿಸಿ ಸೂಚನೆ

ಭಾರತ, ಅಮೆರಿಕಾ, ಕೆನಡಾ, ಫ್ರಾನ್ಸ್ ಮತ್ತು ಜಪಾನ್ ಸೇರಿದಂತೆ ಹಲವಾರು ದೇಶಗಳಲ್ಲಿ ಈ ನಿರ್ಬಂಧ ಜಾರಿಯಾಗಿದೆ. ಚೀನಾದಿಂದ ಬರುವ ಪ್ರಯಾಣಿಕರು ಕೊರೊನಾ ನೆಗೆಟಿವ್ ಪ್ರಮಾನಪತ್ರ ಹೊಂದಿರಬೇಕು ಎಂದಿವೆ. ಕೆಲವೆಡೆ ಕೊರೊನಾ ಪರೀಕ್ಷೆ, ಕ್ವಾರಮಟೈನ್ ಕಡ್ಡಾಯ ಮಾಡಲಾಗಿದೆ.

Covid Test For Chinese Travellers: China Condemned Dozen Countries Action

"ಕೆಲವು ದೇಶಗಳು ಚೀನಾದ ಪ್ರಯಾಣಿಕರನ್ನು ಮಾತ್ರ ಗುರಿಯಾಗಿಸಿಕೊಂಡು ಪ್ರವೇಶ ನಿರ್ಬಂಧಗಳನ್ನು ತೆಗೆದುಕೊಂಡಿವೆ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

"ಈ ನಿರ್ಬಂಧಗಳು ವೈಜ್ಞಾನಿಕ ಆಧಾರವನ್ನು ಹೊಂದಿಲ್ಲ. ಇಂತಹ ಕೆಲವು ಅಭ್ಯಾಸಗಳು ಸ್ವೀಕಾರಾರ್ಹವಲ್ಲ ಎಂದಿರುವ ಅವರು, ಚೀನಾ ಪರಸ್ಪರ ತತ್ವದ ಆಧಾರದ ಮೇಲೆ ಪ್ರತಿಕ್ರಮಗಳನ್ನು ತೆಗೆದುಕೊಳ್ಳಬಹುದು" ಎಂದು ಎಚ್ಚರಿಸಿದ್ದಾರೆ.

ಕಳೆದ ತಿಂಗಳು ಚೀನಾದಲ್ಲಿ ಹಠಾತ್ ಕೊರೊನಾ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ, ಯಾಔಉದೇ ನಿರ್ಬಂಧಗಳು ಇಲ್ಲದ ಕಾರಣ ಚೀನಾದಲ್ಲಿ ಕೋವಿಡ್ ಏಕಾಏಕಿ ಉಲ್ಬಣಗೊಂಡಿದ್ದು, ಆಸ್ಪತ್ರೆಗಳು ಮತ್ತು ಸ್ಮಶಾನಗಳು ತುಂಭಿ ಹೋಗಿವೆ ಎಂದು ವರದಿಯಾಗಿದೆ.

Covid Test For Chinese Travellers: China Condemned Dozen Countries Action

ಡಿಸೆಂಬರ್ ಅಂತ್ಯದಲ್ಲಿ, ಚೀನಾಗೆ ಬರುವ ಪ್ರಯಾಣಿಕರು ಇನ್ನು ಮುಂದೆ ಕ್ವಾರಂಟೈನ್ ಇರಬೇಕಿಲ್ಲ ಎಂದು ತಿಳಿಸಿದ್ದಾರೆ. ಮೂರು ವರ್ಷಗಳ ನಂತರ ಕೋವಿಡ್ ನಿರ್ಬಂಧಗಳನ್ನು ತೆರಗೆದುಹಾಕಿದ್ದು, ಅನೇಕ ಚೀನೀ ಜನರು ವಿದೇಶಗಳಿಗೆ ಪ್ರವಾಸ ಹೋಗತೊಡಗಿದ್ದಾರೆ.

ಇನ್ನು, ಕೊರೊನಾ ಸೋಂಕಿನ ಪ್ರಕರಣಗಳ ಸರಿಯಾದ ಅಂಕಿ ಸಂಖ್ಯೆಗಳನ್ನು ಚೀನಾ ನೀಡುತ್ತಿಲ್ಲ ಎಂದು ಆರೋಪಿಸಿರುವ ಹಲವು ದೇಶಗಳು, ಚೀನಾದಿಂದ ಬರುವ ಪ್ರಯಾಣಿಕರ ಮೇಲೆ ಹಲವು ನಿರ್ಬಂಧಗಳನ್ನು ಹೇರಿದೆ.

ರಾಜ್ಯದಲ್ಲಿಯೂ ಚೀನಾ, ಹಾಂಕಾಂಗ್, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ್ ಮತ್ತು ಥಾಯ್ಲೆಂಡ್ ನಂತಹ ಸೋಂಕಿನ ಪ್ರಕರಣ ದಾಖಲಿಸಿರುವ ದೇಶಗಳಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ಏಳು ದಿನಗಳ ಹೋಂ ಕ್ವಾರಂಟೈನ್ ಅನ್ನು ಸರ್ಕಾರ ಆದೇಶಿಸಿದೆ.

English summary
Covid 19 in China: China condemned fresh Covid test requirements by around a dozen countries on Chinese Travellers. china gave warning to this countries. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X