Breaking : ಕೋವಿಡ್ ನೆಪದಲ್ಲಿ ವಂಚನೆ, ಭಾರತ ಮೂಲದ ವ್ಯಕ್ತಿಗೆ ಜೈಲು

ನ್ಯೂಯಾರ್ಕ್, ಜುಲೈ 22: ಕೊರೊನಾ ಸಾಂಕ್ರಾಮಿಕದ ಮಧ್ಯೆ ಸಂತ್ರಸ್ತರಿಗೆ ಸುಳ್ಳು ಭರವಸೆಗಳನ್ನು ನೀಡುವ ಮೂಲಕ 2 ಮಿಲಿಯನ್ ಡಾಲರ್ ವಂಚಿಸಿದ್ದ 27 ವರ್ಷದ ಭಾರತೀಯ ಮೂಲದ ಅಮೆರಿಕಾದ ವಾಸವಿರುವ ವ್ಯಕ್ತಿಗೆ ಸುಮಾರು ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ನ್ಯೂಜೆರ್ಸಿಯ ಮಾಂಟ್ಗೊಮೆರಿಯ ನಿವಾಸಿ ಗೌರವ್ಜಿತ್ ರಾಜ್ ಸಿಂಗ್ ಅವರು ಈ ಹಿಂದೆ ಯುಎಸ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಪೀಟರ್ ಶೆರಿಡನ್ ಅವರ ಮುಂದೆ ಒಂದು ತಂತಿ ವಂಚನೆಯ ಆರೋಪದ ಬಗ್ಗೆ ಆರೋಪಿಸಿದ್ದರು. ಟ್ರೆಂಟನ್ ಫೆಡರಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಬುಧವಾರ 46 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ ಎಂದು ಯುಎಸ್ ಅಟಾರ್ನಿ ಫಿಲಿಪ್ ಸೆಲ್ಲಿಂಗರ್ ಹೇಳಿದ್ದಾರೆ.

ಪ್ರಕರಣದಲ್ಲಿ ದಾಖಲಿಸಲಾದ ದಾಖಲೆಗಳು ಮತ್ತು ನ್ಯಾಯಾಲಯದಲ್ಲಿ ನೀಡಿದ ಹೇಳಿಕೆಗಳ ಪ್ರಕಾರ, ಮೇ 2020 ರಿಂದ, ಕೋವಿಡ್-19 ಸಾಂಕ್ರಾಮಿಕದ ಮಧ್ಯೆ ಆರೋಪಿ ಗೌರವ್ಜಿತ್ ರಾಜ್ ಸಿಂಗ್ ಅವರು 10 ಮಂದಿ ಸಂತ್ರಸ್ತರಿಂದ ಮೋಸದಿಂದ 2 ಮಿಲಿಯನ್ ಯುಸ್ ಡಾಲರ್ ಪಡೆದಿದ್ದಾರೆ. ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ನೀಡುವುದಾಗಿ ಸುಳ್ಳು ಭರಸವಸೆ ನೀಡಿ ಹಣ ಕಳುಹಿಸಲು ಪ್ರೇರೇಪಿಸುವ ಮೂಲಕ ವಂಚನೆ ಮತ್ತು ವೈಯಕ್ತಿಕವಾಗಿ ಲಾಭ ಪಡೆಯುವ ಯೋಜನೆಯಲ್ಲಿ ತೊಡಗಿದ್ದರು. ಹಣ ಪಡೆದು ನಂತರ ಸಂತ್ರಸ್ತರಿಗೆ ಪಿಪಿಇಯನ್ನು ಒದಗಿಸದಿರುವುದು ಸಾಭೀತಾಗಿದೆ.

Covid Fraud: Indian Origin America Man Gets 4 Years In Jail

ಸಂತ್ರಸ್ತರಿಂದ ಈ ಹಣವನ್ನು ಪಡೆದ ನಂತರ ಆರೋಪಿ ಸಂತ್ರಸ್ತರಿಗೆ ಮತ್ತೆ ಮತ್ತೆ ಸುಳ್ಳು ಹೇಳುವುದು ಮತ್ತು ಕ್ಷಮೆ ಕೇಳುವುದು ಮಾಡಿದ್ದಾರೆ. ಅವರಿಗೆ ವೈಯಕ್ತಿಕ ರಕ್ಷಣಾ ಸಾಧನಗಳನ್ನು ನೀಡುವುದಾಗಿ ತಿಳಿಸಿದ್ದಾರೆ. ಹೀಗೆ ಪಡೆದ ಹಣವನ್ನು ವೈದ್ಯಕೀಯ ಗೌನ್‌ಗಳನ್ನು ಖರೀದಿಸುವ ಮತ್ತು ವಿತರಿಸುವ ಬದಲು, ಹಣವನ್ನು ವೈಯಕ್ತಿಕ ವೆಚ್ಚಗಳಿಗಾಗಿ ಬಳಸಿದ್ದಾರೆ.

ಆರೋಪ ಸಾಬೀತಾದ ಬಳಿಕ ಆರೋಪಿಗೆ ಸುಮಾರು ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+