ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವುಹಾನ್ ನಲ್ಲಿ ಹೊಸ ಸೋಂಕಿತ ಪ್ರಕರಣಗಳು 'ಸೊನ್ನೆ': ಹಿಂದಿದೆ ಕರಾಳ ಸತ್ಯ!

|
Google Oneindia Kannada News

ಬೀಜಿಂಗ್, ಮಾರ್ಚ್ 24: ''ಕೊರೊನಾ ವೈರಸ್ ತವರೂರು ವುಹಾನ್ ನಲ್ಲಿ ಹೊಸ ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗುತ್ತಿಲ್ಲ. ಮಾರ್ಚ್ 18 ರಿಂದ ಮಾರ್ಚ್ 21 ರವರೆಗೂ (ಸತತ ನಾಲ್ಕು ದಿನಗಳ ಕಾಲ) ಕೋವಿಡ್-19 ಜನ್ಮಸ್ಥಳ ವುಹಾನ್ ನಲ್ಲಿ ಯಾವುದೇ ಕೊರೊನಾ ಶಂಕಿತ ಅಥವಾ ಸೋಂಕಿತ ಪ್ರಕರಣಗಳು ದಾಖಲಾಗಿಲ್ಲ'' ಎಂಬ ಸುದ್ದಿ ವುಹಾನ್ ನಿಂದಲೇ ಬಂದಿತ್ತು.

ಆದ್ರೀಗ, ಈ ಬೆಳವಣಿಗೆಯ ಹಿಂದೆ ಒಂದು ಕರಾಳ ಸತ್ಯ ಅಡಗಿರುವುದು ಬಟಾ ಬಯಲಾಗಿದೆ. Infectious disease and Prevention control Team ನ ಸದಸ್ಯರೊಬ್ಬರು ನೀಡಿರುವ ಮಾಹಿತಿ ಪ್ರಕಾರ, ವುಹಾನ್ ನಲ್ಲಿ ಈಗಲೂ ಪ್ರತಿ ದಿನ ಡಜನ್ ಗಟ್ಟಲೆ ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗುತ್ತಿವೆ. ಆದ್ರೆ, ಕೋವಿಡ್-19 ರೋಗ ಹೊಂದಿದ್ದರೂ, ಕೆಲವರಲ್ಲಿ ಅದರ ಲಕ್ಷಣಗಳು (ಜ್ವರ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ) ಕಾಣಿಸುತ್ತಿಲ್ಲ. ಅಂಥವರನ್ನು (Asymptomatic Infected Individuals) ಅಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ.

ನೀವೆಲ್ಲ ಕಣ್ಣರಳಿಸುವ ಸುದ್ದಿಯೊಂದು ಕೊರೊನಾ ತವರು ವುಹಾನ್ ನಿಂದ ಬಂದಿದೆ!ನೀವೆಲ್ಲ ಕಣ್ಣರಳಿಸುವ ಸುದ್ದಿಯೊಂದು ಕೊರೊನಾ ತವರು ವುಹಾನ್ ನಿಂದ ಬಂದಿದೆ!

ಟೆಸ್ಟ್ ನಲ್ಲಿ 'ಕೋವಿಡ್-19 ಪಾಸಿಟಿವ್' ಎಂದು ಕಂಡುಬಂದರೂ, ಅನಾರೋಗ್ಯದ ಲಕ್ಷಣ ಹೊಂದಿಲ್ಲದವರನ್ನು 'ಸೋಂಕಿತ ಪ್ರಕರಣಗಳ ಪಟ್ಟಿ'ಗೆ ಸೇರಿಸುತ್ತಿಲ್ಲ. ಹೀಗಾಗಿ, ವುಹಾನ್ ನಲ್ಲಿ ಹೊಸ ಸೋಂಕಿತ ಪ್ರಕರಣಗಳ ಸಂಖ್ಯೆ 'ಸೊನ್ನೆ'ಯಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಆತಂಕಕಾರಿ ಮಾಹಿತಿ ಬಹಿರಂಗ

ಆತಂಕಕಾರಿ ಮಾಹಿತಿ ಬಹಿರಂಗ

ಕೊರೊನಾ ವೈರಸ್ ಹುಟ್ಟೂರು ವುಹಾನ್ ನಲ್ಲಿ ಇದೀಗ ಸೋಂಕು ನಿಯಂತ್ರಣಕ್ಕೆ ಬಂದಿದೆ.... ಹೀಗಾಗಿ ಕ್ರಮೇಣ ಇತರೆ ದೇಶಗಳಲ್ಲೂ ಕೋವಿಡ್-19 ತಡೆಗಟ್ಟಬಹುದು ಎಂದು ಜನ ನಿಟ್ಟುಸಿರು ಬಿಡುವಾಗಲೇ... ವುಹಾನ್ ನಲ್ಲಿ ನಡೆಯುತ್ತಿರುವ 'ಲಕ್ಷಣ ರಹಿತ ರೋಗಿಗಳ ಲೆಕ್ಕಾಚಾರ'ದ ಕುರಿತು ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ.

ಸೋಂಕು ತಗುಲಿದರೂ, ಲಕ್ಷಣ ಇಲ್ಲ!

ಸೋಂಕು ತಗುಲಿದರೂ, ಲಕ್ಷಣ ಇಲ್ಲ!

''ಸೋಂಕು ಹರಡುವುದು ನಿಂತಿದೆ ಎಂದು ಈಗಲೇ ಹೇಳುವುದು ಅಸಾಧ್ಯ. ಯಾಕಂದ್ರೆ, ಸೋಂಕಿತರ ಸಂಪರ್ಕಕ್ಕೆ ಬಂದಿರುವ ಬಹುತೇಕರಿಗೆ ಸೋಂಕು ತಗುಲಿದ್ದರೂ, ಲಕ್ಷಣಗಳು ಕಾಣಿಸುತ್ತಿಲ್ಲ'' Infectious disease and Prevention control Team ನ ಸದಸ್ಯರೊಬ್ಬರು ಹೇಳಿದ್ದಾರೆ.

ನಿಟ್ಟುಸಿರು ಬಿಡಿ: ಇದೇ ಮೊದಲ ಬಾರಿಗೆ ವುಹಾನ್ ನಲ್ಲಿ ಹೊಸ ಸೋಂಕಿತ ಪ್ರಕರಣ ಇಲ್ಲ!ನಿಟ್ಟುಸಿರು ಬಿಡಿ: ಇದೇ ಮೊದಲ ಬಾರಿಗೆ ವುಹಾನ್ ನಲ್ಲಿ ಹೊಸ ಸೋಂಕಿತ ಪ್ರಕರಣ ಇಲ್ಲ!

ಹ್ಯುಬೆನಲ್ಲಿ ತಜ್ಞರ ತಂಡ!

ಹ್ಯುಬೆನಲ್ಲಿ ತಜ್ಞರ ತಂಡ!

ಸ್ಥಳೀಯವಾಗಿ ಹರಡುವ ಕೋವಿಡ್-19 ಪ್ರಕರಣಗಳು ಕ್ಷೀಣಿಸಿವೆ ಎಂದು ವರದಿಯಾಗುತ್ತಿದ್ದಂತೆಯೇ, ಹ್ಯುಬೆನಲ್ಲಿರುವ ಆಸ್ಪತ್ರೆಯ ಸಿಬ್ಬಂದಿಗೆ ಸಹಕಾರಿಯಾಗಲು ದೇಶಾದ್ಯಂತ ಕರೆತಂದಿದ್ದ ವೈದ್ಯಕೀಯ ತಂಡವನ್ನು ವಾಪಸ್ ಮನೆಗೆ ಕಳುಹಿಸಲು ಚೀನಾ ಸರ್ಕಾರ ಮುಂದಾಯಿತು. ಮಾರ್ಚ್ 17 ರಿಂದ 20 ರವರೆಗೆ ಸುಮಾರು 12 ಸಾವಿರ ವೈದ್ಯಕೀಯ ಸಿಬ್ಬಂದಿ ಹ್ಯುಬೆಯಿಂದ ತೆರಳಿದರು. ಆದ್ರೆ, ಲಕ್ಷಣ ರಹಿತ ಸೋಂಕಿತ ವ್ಯಕ್ತಿಗಳಿಂದ ಉಂಟಾಗಬಹುದಾದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಜ್ಞರನ್ನು ಮಾತ್ರ ಹ್ಯುಬೆನಲ್ಲೇ ಇರುವಂತೆ ಸರ್ಕಾರ ಸೂಚಿಸಿದೆ. ಹಾಗೂ, Infectious disease and Prevention control ತಂಡ ಕೂಡ ಹ್ಯುಬೆನಲ್ಲೇ ಬೀಡುಬಿಟ್ಟಿದ್ದು, ಸರ್ಕಾರ ಆದೇಶ ಬರುವವರೆಗೂ ಕದಲುವ ಹಾಗಿಲ್ಲ.

ವಿಧಿಸಿರುವ ಷರತ್ತು ಏನು.?

ವಿಧಿಸಿರುವ ಷರತ್ತು ಏನು.?

ಫೆಬ್ರವರಿ ತಿಂಗಳಿನಿಂದ, ಚೀನಾದ ನ್ಯಾಷನಲ್ ಹೆಲ್ತ್ ಕಮಿಷನ್ ಹೊರಡಿಸಿರುವ ಕೋವಿಡ್-19 ತಡೆಗಟ್ಟುವಿಕೆ ಮತ್ತು ನಿಯಂತ್ರಣದ ನೀತಿ ಪ್ರಕಾರ, ಲಕ್ಷಣ ರಹಿತ ಸೋಂಕಿತರನ್ನು 'ದೃಢಪಟ್ಟ ಪ್ರಕರಣ'ಗಳು ಎಂದು ಪರಿಗಣಿಸಬಾರದು ಮತ್ತು ಆ ಸಂಖ್ಯೆಯನ್ನು ಬಿಡುಗಡೆ ಮಾಡಬಾರದು ಎಂದು ಷರತ್ತು ವಿಧಿಸಿದೆ.

ಲಕ್ಷಣ ಇಲ್ಲದಿದ್ದರೂ, ಪ್ರತ್ಯೇಕವಾಗಿರಬೇಕು

ಲಕ್ಷಣ ಇಲ್ಲದಿದ್ದರೂ, ಪ್ರತ್ಯೇಕವಾಗಿರಬೇಕು

ಲಕ್ಷಣ ರಹಿತ ಸೋಂಕಿತರೂ ಕೂಡ 'Infectious' ಎಂದು ಹಲವಾರು ಅಧ್ಯಯನಗಳು ಸೂಚಿಸಿವೆ. ಒಮ್ಮೆ 'ಕೋವಿಡ್-19 ಪಾಸಿಟಿವ್' ಎಂದು ತಿಳಿದು ಬಂದರೆ, ಆ ವ್ಯಕ್ತಿ 14 ದಿನಗಳ ಕಾಲ ಪ್ರತ್ಯೇಕವಾಗಿ ಇರಲೇಬೇಕು.

English summary
Coronavirus: Wuhan continues to find new asymptomatic Covid-19 Cases Daily.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X