ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಚರ: ಚಳಿಗಾಲದಲ್ಲಿ ಮನೆಯಲ್ಲಿದ್ದರೂ ಅಂಟುತ್ತೆ ಕೊರೊನಾವೈರಸ್!

|
Google Oneindia Kannada News

ವಾಶಿಂಗ್ಟನ್, ನವೆಂಬರ್.16: ಕೊರೊನಾವೈರಸ್ ಸೋಂಕಿನಿಂದ ಪಾರಾಗಬೇಕಾ. "Stay Home, Stay Safe" ಎಂದು ಜಾಗೃತಿ ಮೂಡಿಸುತ್ತಿರುವುದರ ನಡುವೆ ಆಘಾತಕಾರಿ ವಿಷಯ ಹೊರ ಬಿದ್ದಿದೆ. ಚಳಿಗಾಲದ ಅವಧಿಯಲ್ಲಿ ಹೊರಗಡೆ ಸುತ್ತಾಡುವ ಜನರಿಗಿಂತ ಮನೆಯಲ್ಲಿರುವ ಜನರಿಗೆ ಹೆಚ್ಚಾಗಿ ಕೊವಿಡ್-19 ಸೋಂಕು ತಗುಲುವ ಆಪಾಯವಿದೆ ಎಂದು ಅಂತಾರಾಷ್ಟ್ರೀಯ ವೈದ್ಯಕೀಯ ಸಲಹೆಗಾರ ಡಾ.ವಿವೇಕ್ ಮೂರ್ತಿ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬಿಡೆನ್ ಅವರ ಆಪ್ತ ಸಲಹೆಗಾರರು ಹಾಗೂ ಕೊವಿಡ್-19 ಸಲಹಾಗಾರರ ಮಂಡಳಿ ಸದಸ್ಯರೂ ಆಗಿರುವ 43 ವರ್ಷದ ತಜ್ಞವೈದ್ಯ ಡಾ.ವಿವೇಕ್ ಮೂರ್ತಿ ಕೊರೊನಾವೈರಸ್ ಸೋಂಕಿನ ಬಗ್ಗೆ ಬೆರಗು ಹುಟ್ಟಿಸುವಂತಾ ಮಾಹಿತಿಯನ್ನು ನೀಡಿದ್ದಾರೆ.

Coronavirus in India Live Updates: Live: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 30,548 ಪ್ರಕರಣ ಪತ್ತೆ
ಮುಂಬರುವ ಚಳಿಗಾಲದ ಸಂದರ್ಭದಲ್ಲಿ ಮನೆಗಳಲ್ಲೇ ಹೆಚ್ಚು ಕಾಲ ಕಳೆಯುವ ಜನರಿಗೆ ಹೆಚ್ಚಾಗಿ ಕೊರೊನಾವೈರಸ್ ಸೋಂಕು ತಗುಲುವ ಅಪಾಯವಿದೆ. ಈ ಪ್ರಮಾಣ ಹೊರಭಾಗಗಳಲ್ಲಿ ಸುತ್ತಾಡಿ ಬರುವ ಜನರಿಗಿಂತ ಹೆಚ್ಚಾಗಿರುತ್ತದೆ ಎಂದು ಡಾ.ವಿವೇಕ್ ಮೂರ್ತಿ ತಿಳಿಸಿದ್ದಾರೆ.

Coronavirus Will Spread Easier Indoor Than Outdoor In Winter Time: American Senior Dr. Vivek Murthy

ಕೊವಿಡ್-19 ಏರಿಕೆಗೆ ಔತಣಕೂಟಗಳೇ ಕಾರಣ?

ಕೊವಿಡ್-19 ಏರಿಕೆಗೆ ಔತಣಕೂಟಗಳೇ ಕಾರಣ?

ಅಮೆರಿಕಾದಲ್ಲಿ ಸಾಂಕ್ರಾಮಿಕ ಪಿಡುಗಿನಿಂದ ಸಾಕಷ್ಟು ಪರಿತಪಿಸುವಂತಾ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೊವಿಡ್-19 ಸೋಂಕು ತಗುಲಿರುವ ಸೋಂಕಿತರು ಕೂಡಾ ಹಲವೆಡೆ ಔತಣಕೂಟ, ನೈಟ್ ಔಟ್ ಪಾರ್ಟಿಗಳಲ್ಲಿ ಭಾಗವಹಿಸಿದ್ದರು. ಇದರಿಂದಾಗಿ ಕೊರೊನಾವೈರಸ್ ಸೋಂಕಿನ ಸ್ಪೋಟ ಸಂಭವಿಸಿದೆ ಎಂದು ಡಾ. ವಿವೇಕ್ ಮೂರ್ತಿ ತಿಳಿಸಿದ್ದಾರೆ.

 ಯುಎಸ್ಎನಲ್ಲಿ ಹದಗೆಟ್ಟ ಪರಿಸ್ಥಿತಿ

ಯುಎಸ್ಎನಲ್ಲಿ ಹದಗೆಟ್ಟ ಪರಿಸ್ಥಿತಿ

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಕೊರೊನಾವೈರಸ್ ಸೋಂಕಿನ ವಿಚಾರದಲ್ಲಿ ತೀರಾ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. 1 ಕೋಟಿ 10 ಲಕ್ಷ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, 2.46 ಲಕ್ಷ ಮಂದಿಯು ಮಹಾಮಾರಿಗೆ ಬಲಿಯಾಗಿದ್ದಾರೆ. ಕೊವಿಡ್-19 ಪರಿಸ್ಥಿತಿ ನಿಯಂತ್ರಿಸುವಲ್ಲಿ ಡೊನಾಲ್ಡ್ ಟ್ರಂಪ್ ವಿಫಲರಾಗಿದ್ದರು. ಮುಂದೆ ಜೋ ಬಿಡೆನ್ ಮತ್ತು ಕಮಲಾ ಹ್ಯಾರಿಸ್ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬರಲಿದ್ದು, ಕೊರೊನಾವೈರಸ್ ನಿಯಂತ್ರಣ ಮತ್ತು ನಿರ್ವಹಣೆಗೆ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಡಾ.ವಿವೇಕ್ ಮೂರ್ತಿ ತಿಳಿಸಿದ್ದಾರೆ.

ಮಾಸ್ಕ್, ಸಾಮಾಜಿಕ ಅಂತರ, ಶುದ್ಧತೆಗೆ ಆದ್ಯತೆ ಮುಖ್ಯ

ಮಾಸ್ಕ್, ಸಾಮಾಜಿಕ ಅಂತರ, ಶುದ್ಧತೆಗೆ ಆದ್ಯತೆ ಮುಖ್ಯ

ಮುಖಕ್ಕೆ ಮಾಸ್ಕ್ ಧರಿಸುವುದು, ಆಗಾಗ ಕೈಗಳನ್ನು ಶುದ್ಧವಾಗಿ ತೊಳೆದುಕೊಳ್ಳುವುದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು. ಹೀಗೆ ಇವೆಲ್ಲ ಸಾಮಾನ್ಯ ಕ್ರಮಗಳು ಎನಿಸಿದರೂ ಕೂಡಾ ಕೊರೊನಾವೈರಸ್ ಸೋಂಕಿನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದಕ್ಕೆ ಬಹಳ ಪರಿಣಾಮಕಾರಿ ಎನಿಸುತ್ತವೆ. ಇದರ ಜೊತೆಗೆ ಕೊರೊನಾವೈರಸ್ ಸೋಂಕಿನ ತಪಾಸಣೆ ವೇಗ ಹಾಗೂ ಸೋಂಕಿನ ಮೂಲವನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಶಿಸ್ತುಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಡಾ.ವಿವೇಕ್ ಮೂರ್ತಿ ಹೇಳಿದ್ದಾರೆ.

ವೈದ್ಯಕೀಯ ಸಿಬ್ಬಂದಿಗೆ ಪಿಪಿಇ ಕಿಟ್ ಅತ್ಯಗತ್ಯ

ವೈದ್ಯಕೀಯ ಸಿಬ್ಬಂದಿಗೆ ಪಿಪಿಇ ಕಿಟ್ ಅತ್ಯಗತ್ಯ

ಅಮೆರಿಕಾದಲ್ಲಿ ಕೊವಿಡ್-19 ಸೋಂಕಿನ ಹರಡುವಿಕೆ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ವೈದ್ಯಕೀಯ ಸಿಬ್ಬಂದಿಗೆ ಅಗತ್ಯವಿರುವ ಪಿಪಿಇ ಕಿಟ್ ಗಳನ್ನು ಅಗತ್ಯ ಪ್ರಮಾಣದಲ್ಲಿ ಒದಗಿಸಬೇಕು. ಮಾರ್ಗಸೂಚಿ ಅನ್ವಯ ಶಾಲಾ-ಕಾಲೇಜು, ವ್ಯಾಪಾರ, ಸಂಘಟನೆ, ಕ್ರೀಡಾ ಚಟುವಟಿಕೆಗಳನ್ನು ನಡೆಸಬೇಕಿದೆ ಎಂದು ಡಾ.ವಿವೇಕ್ ಮೂರ್ತಿ ಹೇಳಿದ್ದಾರೆ.

ಕೊರೊನಾವೈರಸ್ ಲಸಿಕೆ ಮೇಲೆ ವಿಶ್ವಾಸ

ಕೊರೊನಾವೈರಸ್ ಲಸಿಕೆ ಮೇಲೆ ವಿಶ್ವಾಸ

ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ವಿರುದ್ಧ ಲಸಿಕೆಯನ್ನು ನೀಡುವುದಕ್ಕಾಗಿ ಅಮೆರಿಕಾದಲ್ಲಿ ಹೊಸ ಅಭಿಯಾನವನ್ನೇ ಆರಂಭಿಸಲಾಗಿದೆ. ಜನರಿಗೆ ಈಗಾಗಲೇ ಹಲವು ರೀತಿಯ ಲಸಿಕೆಗಳನ್ನು ನೀಡುವ ಪ್ರಯತ್ನವನ್ನು ಮೊದಲೆಲ್ಲ ಮಾಡಲಾಗಿದೆ. ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ನಿಟ್ಟಿನಲ್ಲಿ ಹಲವು ಬಗೆಯ ಲಸಿಕೆಗಳನ್ನು ವಿತರಿಸಲಾಗಿದೆ. ಈ ನಿಟ್ಟಿನಲ್ಲಿ ನಡೆಸಿದ ಅಭಿಯಾನವು ದೇಶದ ಇತಿಹಾಸದಲ್ಲಿ ಬಹುಮುಖ್ಯ ಎನಿಸಿದೆ. ಆದರೆ ಇದರ ನಡುವೆ ಲಸಿಕೆಯು ಹೆಚ್ಚು ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬುದನ್ನು ಜನರು ವಿಶ್ವಾಸಕ್ಕೆ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಡಾ.ವಿವೇಕ್ ಮೂರ್ತಿ ತಿಳಿಸಿದ್ದಾರೆ.

English summary
Coronavirus Will Spread Easier Indoor Than Outdoor In Winter Time: American Senior Dr. Vivek Murthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X