ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನುಷ್ಯನಿಂದ ಅಂಟಿದ ಕೊರೊನಾವೈರಸ್ ನಿಂದ 10000 ಪ್ರಾಣಿಗಳು ಬಲಿ!

|
Google Oneindia Kannada News

ವಾಶಿಂಗ್ಟನ್, ಅಕ್ಟೋಬರ್.10: ಕೊರೊನಾವೈರಸ್ ಸೋಂಕು ಮನುಷ್ಯರಿಂದ ಪ್ರಾಣಿಗಳಿಗೂ ಅಂಟಿಕೊಳ್ಳುತ್ತಿದೆಯಾ ಎಂಬ ಆತಂಕ ಹುಟ್ಟಿಕೊಳ್ಳುತ್ತಿದೆ. ಅಮೆರಿಕಾದ ಉತಾಹ್ ಮತ್ತು ವಿಸ್ ಕನ್ಸಿನ್ ನಲ್ಲಿರುವ ತುಪ್ಪಳ ಕೇಂದ್ರದಲ್ಲಿ 10 ಸಾವಿರ ಮಿಂಕ್ ಗಳು ಪ್ರಾಣ ಬಿಟ್ಟಿವೆ.
ಕೊರೊನಾವೈರಸ್ ಸೋಂಕು ಮನುಷ್ಯರಿಂದ ಮಿಂಕ್ ಗಳಿಗೆ ಅಂಟಿಕೊಂಡಿರುವುದೇ ಈ ಅನಾಹುತಕ್ಕೆ ಕಾರಣ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಉತಾಹ್ ತುಪ್ಪಳ ಕೇಂದ್ರವೊಂದರಲ್ಲೇ ಕೊವಿಡ್-19 ನಿಂದಾಗಿ 8,000 ಮಿಂಕ್ ಗಳು ಬಲಿಯಾಗಿವೆ ಎಂದು ಸಿಎನ್ಎನ್ ವರದಿ ಮಾಡಿದೆ.

ಕೊರೊನಾ ಸೋಂಕಿನ ಭೀತಿ: 1,00,000 ಮಿಂಕ್‌ಗಳನ್ನು ಕೊಲ್ಲಲು ಸ್ಪೇನ್ ಆದೇಶ
ಆಗಸ್ಟ್ ತಿಂಗಳಿನಲ್ಲಿ ಮೊದಲ ಬಾರಿಗೆ ಮಿಂಕ್ ಗಳಲ್ಲಿ ಕೊವಿಡ್-19 ಸೋಂಕು ಕಾಣಿಸಿಕೊಂಡಿದ್ದು, ಇದಕ್ಕೂ ಮೊದಲು ಜುಲೈನಲ್ಲಿ ತುಪ್ಪಳ ಕೇಂದ್ರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕೊರೊನಾವೈರಸ್ ತಗುಲಿರುವ ಬಗ್ಗೆ ವರದಿಯಾಗಿತ್ತು ಎಂದು ಉತಾಹ್ ರಾಜ್ಯ ಪಶುವೈದ್ಯ ಡಾ. ಡೀನ್ ಟೈಲರ್ ತಿಳಿಸಿದ್ದಾರೆ.

ಮನುಷ್ಯರಿಂದ ಪ್ರಾಣಿಗಳಿಗೆ ಕೊರೊನಾವೈರಸ್

ಮನುಷ್ಯರಿಂದ ಪ್ರಾಣಿಗಳಿಗೆ ಕೊರೊನಾವೈರಸ್

ಕೊರೊನಾವೈರಸ್ ಸೋಂಕು ಮನುಷ್ಯರಿಂದಲೇ ಪ್ರಾಣಿಗಳಿಗೆ ತಲುಗಿರುವುದು ಪ್ರಾರಂಭಿಕ ಸಂಶೋಧನೆಗಳಿಂದಲೇ ತಿಳಿದು ಬಂದಿತ್ತು. ಆದರೆ ಪ್ರಾಣಿಗಳಿಂದ ಮನುಷ್ಯರಿಗೆ ವೈರಸ್ ಅಂಟಿಕೊಂಡಿತು ಎಂದು ಹೇಳುವ ಒಂದೇ ಒಂದು ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಸಂಶೋಧಕರು ಹೇಳುತ್ತಾರೆ. ಉತಾಹ್ ನಲ್ಲಿ ನಡೆದಿರುವ ಘಟನೆಯನ್ನು ಗಮನಿಸಿದಾಗ ಮನುಷ್ಯರಿಂದ ಪ್ರಾಣಿಗಳಿಗೆ ವೈರಸ್ ಅಂಟಿಕೊಂಡಿರುವುದು ಗೊತ್ತಾಗುತ್ತದೆ. ಆದರೆ ಪ್ರಾಣಿಗಳಿಂದ ಮನುಷ್ಯರಿದೆ ವೈರಸ್ ತಗುಲಿರುವ ಉದಾಹರಣೆಗಳಿಲ್ಲ. ಬಹುಶಃ ಇದು ಏಕಮುಖ ಪರಿಚಲನೆ ಎಂದು ಕಾಣಿಸುತ್ತದೆ ಎಂದು ಪಶುವೈದ್ಯ ಡಾ. ಡೀನ್ ಟೈಲರ್ ಹೇಳಿರುವ ಬಗ್ಗೆ ಸಿಎನ್ಎನ್ ವರದಿ ಮಾಡಿದೆ.
ಉತಾಹ್ ಅಷ್ಟೇ ಅಲ್ಲದೇ ವಿಸ್ ಕನ್ಸಿನ್ ನಲ್ಲಿರುವ ತುಪ್ಪಳ ಕೇಂದ್ರದಲ್ಲೂ 2,000 ಮಿಂಕ್ ಗಳು ಕೊವಿಡ್-19 ಸೋಂಕಿನಿಂದಲೇ ಪ್ರಾಣ ಬಿಟ್ಟಿವೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ ತುಪ್ಪಳ ಕೇಂದ್ರಗಳನ್ನು ಕ್ವಾರೆಂಟೈನ್ ಮಾಡಲಾಗಿದೆ.

ಪ್ರಾಣಿಗಳಿಗೂ ಅಂಟಿಕೊಳ್ಳುತ್ತೆ ಕೊರೊನಾವೈರಸ್ ಸೋಂಕು

ಪ್ರಾಣಿಗಳಿಗೂ ಅಂಟಿಕೊಳ್ಳುತ್ತೆ ಕೊರೊನಾವೈರಸ್ ಸೋಂಕು

ಯುಎಸ್ ಕೃಷಿ ಇಲಾಖೆಯ ರಾಷ್ಟ್ರೀಯ ಪಶುವೈದ್ಯಕೀಯ ಸೇವೆಗಳ ಪ್ರಯೋಗಾಲಯಗಳು ಪ್ರಾಣಿಗಳಿಗೂ ಕೊರೊನಾವೈರಸ್ ಸೋಂಕು ತಗುಲುವ ಅಪಾಯವಿರುತ್ತದೆ ಎಂಬುದನ್ನು ಖಾತ್ರಿಪಡಿಸಿವೆ. ಶ್ವಾನ, ಬೆಕ್ಕು, ಸಿಂಹ ಮತ್ತು ಹುಲಿಗಳಲ್ಲಿ ಕೊವಿಡ್-19 ಸೋಂಕು ಕಾಣಿಸಿಕೊಳ್ಳುತ್ತದೆ ಎಂಬುದನ್ನು ಪ್ರಯೋಗಾಲಯಗಳು ಖಚಿತಪಡಿಸಿವೆ.

ಕೊವಿಡ್-19 ಅಂಟಿಕೊಂಡರೆ ಪ್ರಾಣಿಗಳಲ್ಲೂ ಉಸಿರಾಟ ಸಮಸ್ಯೆ

ಕೊವಿಡ್-19 ಅಂಟಿಕೊಂಡರೆ ಪ್ರಾಣಿಗಳಲ್ಲೂ ಉಸಿರಾಟ ಸಮಸ್ಯೆ

ಒಮ್ಮೆ ಕೊರೊನಾವೈರಸ್ ಸೋಂಕು ಅಂಟಿಕೊಂಡರೆ ಮನುಷ್ಯರಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳೇ ಪ್ರಾಣಿಗಳಲ್ಲಿಯೂ ಕಾಣಿಸಿಕೊಳ್ಳುತ್ತದೆ ಎಂಬುದು ಪ್ರಾಥಮಿಕ ಸಂಶೋಧನೆಗಳಿಂದ ತಿಳಿದು ಬಂದಿದೆ. ಅಮೆರಿಕಾದಲ್ಲಿ ಕೊವಿಡ್-19 ಸೋಂಕಿಗೆ ಬಲಿಯಾದ ಸಾವಿರಾರು ಮಿಂಕ್ ಗಳಲ್ಲಿ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತ್ತು. ಮಿಂಕ್ ಗಳ ಕಣ್ಣಿನ ಸುತ್ತಲೂ ಕೆಂಪಾಗಿತ್ತು. ವೈರಸ್ ಪ್ರಮಾಣ ಹೆಚ್ಚಾದ ಮರು ದಿನವೇ ಮಿಂಕ್ ಗಳು ಪ್ರಾಣ ಬಿಟ್ಟಿರುವುದು ಇಲ್ಲಿ ಗೊತ್ತಾಗಿದೆ.

 ಕೊರೊನಾವೈರಸ್ ಗೆ 60 ಸಾವಿರ ಮಿಂಕ್ ಗಳು ಸಾವು

ಕೊರೊನಾವೈರಸ್ ಗೆ 60 ಸಾವಿರ ಮಿಂಕ್ ಗಳು ಸಾವು

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ 10 ಸಾವಿರ ಮಿಂಕ್ ಗಳು ಕೊರೊನಾವೈರಸ್ ನಿಂದ ಪ್ರಾಣ ಬಿಟ್ಟಿವೆ. ಇನ್ನೊಂದು ಕಡೆ ನೆದರ್ ಲ್ಯಾಂಡ್ ನಲ್ಲಿ ಈವರೆಗೂ ಕೊವಿಡ್-19 ಮಹಾಮಾರಿಗೆ ಬರೋಬ್ಬರಿ 60,000 ಮಿಂಕ್ ಗಳು ಬಲಿಯಾಗಿರುವುದು ವರದಿಯಾಗಿದೆ. ಕಳೆದ ಜೂನ್ ತಿಂಗಳಿನಲ್ಲೇ 10000 ತಾಯಿ ಮಿಂಕ್ ಗಳು ಮತ್ತು 5000 ಪುಟ್ಟ ಮಿಂಕ್ ಗಳು ಪ್ರಾಣ ಬಿಟ್ಟಿವೆ. ಪ್ರಾಣಿಗಳಲ್ಲಿ ಕೊರೊನಾವೈರಸ್ ಸೋಂಕು ತಗುಲುವ ಬಗ್ಗೆ ಏಪ್ರಿಲ್ ನಲ್ಲಿ ಮೊದಲ ಪ್ರಕರಣವು ವರದಿಯಾಗಿತ್ತು.

English summary
Coronavirus Spreading From Humans To Animals? 10,000 Minks Dead In US farm
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X