ಕೊರೊನಾ ವೈರಸ್ ನಿಂದ ದೂರವಿರಲು ಹೀಗೊಂದು ಐಡಿಯ!
ಕೋಪನ್ ಹೇಗನ್, ಮಾರ್ಚ್ 18: ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ಇಡೀ ವಿಶ್ವದಲ್ಲಿ ತಲ್ಲಣ ಸೃಷ್ಟಿಯಾಗಿದೆ. ವಿಶ್ವದಾದ್ಯಂತ 8 ಸಾವಿರಕ್ಕೂ ಅಧಿಕ ಮಂದಿಯನ್ನ ಡೆಡ್ಲಿ ಕೊರೊನಾ ವೈರಸ್ ಬಲಿ ಪಡೆದಿದೆ. ಕ್ರೂರ ಕೊರೊನಾದಿಂದ ಭಾರತದಲ್ಲೂ ಮೂರು ಮಂದಿ ಸಾವನ್ನಪ್ಪಿದ್ದಾರೆ.
ಕೊರೊನಾದಿಂದಾಗಿ ವಿಶ್ವದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ವ್ಯಾಪಾರ ವಹಿವಾಟು ನೆಲಕಚ್ಚುವ ಹಂತಕ್ಕೆ ಬಂದಿದೆ. ಮಾರಾಟವನ್ನೇ ನಂಬಿಕೊಂಡಿರುವ ಅದೆಷ್ಟೋ ಮಂದಿಯ ಬದುಕು ಸಂಕಷ್ಟಕ್ಕೆ ಸಿಲುಕಿದೆ.
ಈ ನಡುವೆಯೇ ಹಳಿತಪ್ಪಿರುವ ದೈನಂದಿನ ವ್ಯಾಪಾರ-ವಹಿವಾಟನ್ನು ಮರಳಿ ಕಟ್ಟಿಕೊಳ್ಳುವ ಸಲುವಾಗಿ ಹತ್ತು ಹಲವು ಪ್ರಯತ್ನಗಳನ್ನು ವ್ಯಾಪಾರಿಗಳು ಮಾಡುತ್ತಿದ್ದಾರೆ. ಸಾಮಾಜಿಕ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ತಮ್ಮ ಮಳಿಗೆಗಳತ್ತ ಗ್ರಾಹಕರನ್ನು ಸೆಳೆಯುವ ಕಾರ್ಯ ನಡೆಯುತ್ತಿದೆ.

ಡೆನ್ಮಾರ್ಕ್ ನ ಸೂಪರ್ ಮಾರ್ಕೆಟ್ ವೊಂದು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಕೊರೊನಾ ಸೋಂಕು ಹರಡದಂತೆ ತಡೆಯುವ ಭಾಗವಾಗಿ ತನ್ನ ಮಳಿಗೆಗೆ ಬರುವ ಗ್ರಾಹಕರಿಗೆ ಸೂಕ್ತ ಸುರಕ್ಷತೆ ಒದಗಿಸುವತ್ತ ಹೆಜ್ಜೆ ಇಟ್ಟಿದೆ.
Distancing solution in a Danish supermarket
— Urban Planning & Mobility (@urbanthoughts11) March 17, 2020
via Henrik Schou pic.twitter.com/qs856kESn6
ಕೊರೊನಾ ಸೋಂಕು ತಾಗದಂತಿರಲು, ಸಾರ್ವಜನಿಕ ಪ್ರದೇಶಗಳಲ್ಲಿ ಒಬ್ಬರಿಂದ ಮತ್ತೊಬ್ಬರು ಅಂತರ ಕಾಯ್ದುಕೊಳ್ಳಬೇಕು. ಹೀಗಾಗಿ, ಡೆನ್ಮಾರ್ಕ್ ಸೂಪರ್ ಮಾರ್ಕೆಟ್ ನಲ್ಲಿ ಒಬ್ಬರಿಂದ ಒಬ್ಬರು ಅಂತರ ಕಾಯ್ದುಕೊಳ್ಳಲು ಸ್ಟಿಕ್ಕರ್ ಗಳನ್ನು ಅಂಟಿಸಲಾಗಿದೆ. ಆರು ಮೀಟರ್ ಅಂತರಕ್ಕೆ ಒಂದೊಂದು ಸ್ಟಿಕ್ಕರ್ ಗಳನ್ನು ಅಂಟಿಸಿ ಅವುಗಳ ಮೇಲೆ ನಿಂತು ಖರೀದಿ ಮಾಡುವಂತೆ ಸೂಚಿಸಿದೆ.
ಡೆನ್ಮಾರ್ಕ್ ನ ಸೂಪರ್ ಮಾರ್ಕೆಟ್ ಮಾಡಿರುವ ಈ ಐಡಿಯಾಗೆ ಹಲವರು ಭೇಷ್ ಎನ್ನುತ್ತಿದ್ದಾರೆ. ಭಾರತದ ಐಎಎಸ್ ಅಧಿಕಾರಿ ದೇವ್ ಚೌಧರಿ ಕೂಡ ಈ ಐಡಿಯಾಗೆ ಫಿದಾ ಆಗಿದ್ದು, ''ಕೊರೊನಾದಿಂದ ಅಂತರ ಕಾಯ್ದುಕೊಳ್ಳಲು, ಅಂತರ ಕಾಪಾಡಿಕೊಳ್ಳಿ'' ಎಂದು ಟ್ವೀಟ್ ಮಾಡಿದ್ದಾರೆ.
Keep distance to keep #Corona at distance.
— Dev Choudhary IAS (@DevChoudharyIAS) March 17, 2020
PC @urbanthoughts11 pic.twitter.com/IB5CIf64pu
ಈ ತರಹ ಸಾಮಾಜಿಕ ಅಂತರದ ವ್ಯವಸ್ಥೆ ಭಾರತದಲ್ಲೂ ಬರಬೇಕು ಎಂದು ಹಲವರು ಒತ್ತಾಯಿಸುತ್ತಿದ್ದಾರೆ.












Click it and Unblock the Notifications