• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ: ಕ್ವಾರಂಟೈನ್ ಗೆ ಸೇರಿಕೊಂಡ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು

|

ಜೆರುಸಲಂ, ಮಾರ್ಚ್ 30: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅವರ ಸಹಾಯಕರು ಕ್ವಾರಂಟೈನ್ ಗೆ ಸೇರಿಕೊಂಡಿದ್ದಾರೆಂದು ಜೆರುಸಲಂ ಪೋಸ್ಟ್ ವರದಿ ಮಾಡಿದೆ.

ಕಳೆದ ವಾರ ಪಾರ್ಲಿಮೆಂಟ್ ನಲ್ಲಿನ ಸಭೆಯೊಂದರಲ್ಲಿ ನೆತನ್ಯಾಹು ಭಾಗವಹಿಸಿದ್ದರು. ಅವರ ಜೊತೆಗಿದ್ದ ಸಹಾಯಕರೊಬ್ಬರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ನಂತರ, ಕ್ವಾರಂಟೈನ್ ಗೆ ಸೇರಿಕೊಳ್ಳುವ ನಿರ್ಧಾರ ಮಾಡಿದ್ದಾರೆ.

ಇಸ್ರೇಲ್ ಕಂಡು ಹಿಡಿದ ಹೊಸ ಕೊರೊನಾ ವೈರಸ್ ಟೆಸ್ಟ್‌ ಕಿಟ್ ವಿಶೇಷವೇನು?ಇಸ್ರೇಲ್ ಕಂಡು ಹಿಡಿದ ಹೊಸ ಕೊರೊನಾ ವೈರಸ್ ಟೆಸ್ಟ್‌ ಕಿಟ್ ವಿಶೇಷವೇನು?

ಅತಂತ್ರ ಸ್ಥಿತಿಯಲ್ಲಿರುವ ಪಾರ್ಲಿಮೆಂಟ್ ನಲ್ಲಿ ವಿರೋಧ ಪಕ್ಷದೊಂದಿಗೆ ಸಮ್ಮಿಶ್ರ ಸರಕಾರ ರಚಿಸುವ ಸಂಬಂಧ ನೆತನ್ಯಾಹು ವಿರೋಧ ಪಕ್ಷದ ಮುಖಂಡರ ಜೊತೆ ಸಭೆ ನಡೆಸಿದ್ದರು.

ದೇಶಲ್ಲಿ ಕೊರೊನಾ ಪರಿಸ್ಥಿತಿಯನ್ನು ನಿಭಾಯಿಸಲು ಸರಕಾರದ ಅವಶ್ಯಕತೆಯಿರುವುದರಿಂದ ಪಾರ್ಲಿಮೆಂಟ್ ನಲ್ಲಿ ವಿಪಕ್ಷ ನಾಯಕರ ಜೊತೆ ಸಭೆ ನಡೆಸಿದ ಒಂದು ವಾರದ ನಂತರ, ಅವರ ಜೊತೆಗಿದ್ದ ಸಹಾಯಕನಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ.

ಈ ಹಿನ್ನಲೆಯಲ್ಲಿ ಪ್ರಧಾನಿ ಮತ್ತು ಅವರ ಸಹಾಯಕರು ಕ್ವಾರಂಟೈನ್ ಸೇರಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಕೊರೊನಾ ಸಂಬಂಧ ಸಂಪೂರ್ಣ ವರದಿ ಬಂದ ನಂತರವಷ್ಟೇ ಇವರುಗಳು ಹೊರಬರಲಿದ್ದಾರೆ.

ಕೊರೊನಾ ಕಟ್ಟಿಹಾಕುವಲ್ಲಿ ಸಫಲವಾಯಿತೇ ಇಸ್ರೇಲ್: ಲಸಿಕೆ ತಯಾರು?ಕೊರೊನಾ ಕಟ್ಟಿಹಾಕುವಲ್ಲಿ ಸಫಲವಾಯಿತೇ ಇಸ್ರೇಲ್: ಲಸಿಕೆ ತಯಾರು?

ಇತ್ತೀಚೆಗೆ, ಒಂದೇ ಬಾರಿಗೆ 12ಕ್ಕೂ ಹೆಚ್ಚು ಕೊರೊನಾ ವೈರಸ್ ಸೋಂಕಿತರನ್ನು ತಪಾಸಣೆ ಮಾಡುವ ಕಿಟ್ ಒಂದನ್ನು ಇಸ್ರೇಲ್ ವಿದ್ಯಾರ್ಥಿಗಳು ಕಂಡು ಹಿಡಿದಿದ್ದಾರೆ. ಇಸ್ರೇಲ್‌ನ ಟೆಕ್ನಿಯನ್ ಯೂನಿವರ್ಸಿಟಿ ಮತ್ತು ರಂಬನ್ ಹೆಲ್ತ್ ಕೇರ್ ಕ್ಯಾಂಪಸ್ ಈ ಹೊಸ ಪ್ರಯೋಗವನ್ನು ಮಾಡಿದೆ.

English summary
Coronavirus: Israel PM Netanyahu enters quarantine after aide tests positive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X