ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ; 3000ರ ಗಡಿದಾಟಿದ ಸಾವಿನ ಸಂಖ್ಯೆ

|
Google Oneindia Kannada News

ಬೀಜಿಂಗ್, ಮಾರ್ಚ್ 02 : ಕೊರೊನಾ ವೈರಸ್‌ನಿಂದಾಗಿ ವಿಶ್ವದಾದ್ಯಂತ ಮೃತಪಟ್ಟವರ ಸಂಖ್ಯೆ 3000ರ ಗಡಿ ದಾಟಿದೆ. ಚೀನಾದಲ್ಲಿಯೇ 2,870 ಜನರು ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಘೋಷಣೆ ಮಾಡಿದೆ.

Recommended Video

ದಿನದಿಂದ ದಿನಕ್ಕೆ ಏರುತ್ತಿದೆ ಕೊರೊನ ಸಾವಿನ ಪ್ರಕರಣ | Corona Virus | China | Oneindia Kannada

ಜಾಗತಿಕವಾಗಿ ಕೊರೊನಾ ವೈರಸ್‌ಗೆ ಬಲಿಯಾದವರ ಸಂಖ್ಯೆ ಸೋಮವಾರ 3000ರ ಗಡಿ ದಾಟಿದೆ. ಚೀನಾದಲ್ಲಿಯೇ ಹೊಸದಾಗಿ 42 ಸಾವಿನ ಪ್ರಕರಣಗಳು ವರದಿಯಾಗಿವೆ. ಡಿಸೆಂಬರ್‌ನಲ್ಲಿ ಮೊದಲು ಕೊರೊನಾ ವೈರಸ್ ಪ್ರಕರಣ ಬೆಳಕಿಗೆ ಬಂದಿತ್ತು.

ಕೊರೊನಾ ಜಾಗೃತಿಗಾಗಿ ಸಾರ್ವಜನಿಕ ಸಭೆಯಲ್ಲೇ ಚಿಕನ್ ಪೀಸ್ ತಿಂದ ಸಚಿವಕೊರೊನಾ ಜಾಗೃತಿಗಾಗಿ ಸಾರ್ವಜನಿಕ ಸಭೆಯಲ್ಲೇ ಚಿಕನ್ ಪೀಸ್ ತಿಂದ ಸಚಿವ

ಚೀನಾದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂಬ ವರದಿಗಳು ಬರುತ್ತಿವೆ. ಹುಬೇ ಹೊರಭಾಗದಲ್ಲಿ ಕೇವಲ 6 ಹೊಸ ಪ್ರಕರಣ ದಾಖಲಾಗಿದೆ. ಪ್ರಸ್ತುತ 60 ದೇಶಗಳಲ್ಲಿ ಮಾರಕ ವೈರಸ್ ಪತ್ತೆಯಾಗಿದೆ.

ಕೊರೊನಾ ವೈರಸ್ ಎಫೆಕ್ಟ್: ಚಿಕನ್ ಮಾರುಕಟ್ಟೆ ತತ್ತರಕೊರೊನಾ ವೈರಸ್ ಎಫೆಕ್ಟ್: ಚಿಕನ್ ಮಾರುಕಟ್ಟೆ ತತ್ತರ

Coronavirus

ಅಮೆರಿಕ ಮತ್ತು ಆಸ್ಟೇಲಿಯಾದಲ್ಲಿ ಕಳೆದ 48 ಗಂಟೆಯಲ್ಲಿ ತಲಾ ಒಂದೊಂದು ಸಾವಿನ ಪ್ರಕರಣ ವರದಿಯಾಗಿದೆ. ಇಟಲಿಯಲ್ಲಿ ಸಹ ವೈರಸ್ ಪತ್ತೆಯಾಗಿದೆ. ಕೊರೊನಾ ಭೀತಿ ಹಿನ್ನಲೆಯಲ್ಲಿ ಫ್ರಾನ್ಸ್‌ನ ಲೌವ್ರೆ ಮ್ಯೂಸಿಯಂ ಮುಚ್ಚಾಗಿದೆ.

ಕೊರೊನಾ ವೈರಸ್‌ನಿಂದ ಭಾರತಕ್ಕೆ ಭಾರಿ ಅಪಾಯದ ಎಚ್ಚರಿಕೆಕೊರೊನಾ ವೈರಸ್‌ನಿಂದ ಭಾರತಕ್ಕೆ ಭಾರಿ ಅಪಾಯದ ಎಚ್ಚರಿಕೆ

ವಾಷಿಂಗ್ಟನ್‌ನಲ್ಲಿ ಕೊರೊನಾಗೆ ಮೊದಲ ಬಲಿಯಾಗಿದೆ. ಇರಾನ್‌ನಿಂದ ಅಮೆರಿಕಕ್ಕೆ ಜನರು ಆಗಮಿಸುವುದನ್ನು ನಿರ್ಬಂಧಿಸಲಾಗಿದೆ. ದಕ್ಷಿಣ ಕೊರಿಯಾ, ಇಟಲಿಗೆ ಪ್ರಯಾಣಿಸದಂತೆ ಅಮೆರಿಕ ಜನರಿಗೆ ಸಲಹೆ ನೀಡಿದೆ.

ಚೀನಾದಲ್ಲಿ ಶನಿವಾರ ಕೊರೊನಾ ಸೋಂಕಿಗೆ 35 ಜನರು ಮೃತಪಟ್ಟಿದ್ದಾರೆ. ದೇಶದಲ್ಲಿನ 79,824 ಜನರಲ್ಲಿ ಸೋಂಕ ದೃಢಪಟ್ಟಿದೆ. ಜಾಗತಿಕವಾಗಿ 90 ಸಾವಿರ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

ಕೊರೊನಾದಿಂದ ಮೃತಪಟ್ಟವರಲ್ಲಿ 80ಕ್ಕೂ ಅಧಿಕ ವರ್ಷದವರೇ ಅಧಿಕವಾಗಿದ್ದಾರೆ. 50 ರಿಂದ 80ರ ವಯೋಮಾನದವರು ಹೆಚ್ಚಾಗಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಬಹುತೇಕರು ಪುರುಷರಾಗಿದ್ದಾರೆ.

English summary
The number of people killed worldwide by the coronavirus has exceeded 3,000. China reported 42 new death cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X