ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾಗೆ ಬಲಿಯಾದ ಪುರುಷ-ಮಹಿಳೆಯರ ಮಧ್ಯೆ ಯಾಕಿಷ್ಟು ವ್ಯತ್ಯಾಸ?

|
Google Oneindia Kannada News

ಬೀಜಿಂಗ್, ಮೇ.01: ನೊವೆಲ್ ಕೊರೊನಾ ವೈರಸ್ ಮಹಾಮಾರಿ ಅಂಟಿಕೊಳ್ಳೋದಕ್ಕೆ ವಯಸ್ಸು, ಗಂಡು, ಹೆಣ್ಣು ಎಂಬ ಯಾವುದೇ ವ್ಯತ್ಯಾಸವಿಲ್ಲ. ಆದರೆ ಸೋಂಕಿತರ ಸಾವಿನ ಅಂಕಿ-ಸಂಖ್ಯೆಗಳನ್ನೊಮ್ಮೆ ಅವಲೋಕಿಸಿದಾಗ ಆಘಾತಕಾರಿ ಅಂಶವೊಂದು ಹೊರ ಬಿದ್ದಿದೆ.

ನೊವೆಲ್ ಕೊರೊನಾ ವೈರಸ್ ಸೋಂಕಿತರ ಪೈಕಿ ಮಹಿಳೆಯರಿಗಿಂತ ಪುರುಷರೇ ಹೆಚ್ಚಾಗಿ ಪ್ರಾಣ ಬಿಟ್ಟಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ. ಕೊವಿಡ್-19 ಸೋಂಕಿಗೆ ಬಲಿಯಾದವರಲ್ಲಿ ಪುರುಷರ ಸಂಖ್ಯೆಯೇ ಹೆಚ್ಚು ಎಂದು ಅಧ್ಯಯನದಿಂದ ತಿಳಿದು ಬಂದಿದ್ದು, ಈ ಕುರಿತು ಜರ್ನಲ್ ಫ್ರೆಂಟೀಯರ್ಸ್ ಇನ್ ಪಬ್ಲಿಕ್ ಹೆಲ್ತ್ ವರದಿ ಮಾಡಿದೆ.

ವಿಶ್ವವಿದ್ಯಾಲಯಗಳಿಗೆ ವೇಳಾಪಟ್ಟಿ: ಯುಜಿಸಿ ಮಹತ್ವದ ಆದೇಶವಿಶ್ವವಿದ್ಯಾಲಯಗಳಿಗೆ ವೇಳಾಪಟ್ಟಿ: ಯುಜಿಸಿ ಮಹತ್ವದ ಆದೇಶ

ಭಾರತದಲ್ಲಿ ಗುರುವಾರ ಅಂಕಿ-ಅಂಶಗಳ ಪ್ರಕಾರ, 34,864ಕ್ಕೂ ಅಧಿಕ ಮಂದಿಗೆ ಸೋಂಕು ತಗಲಿದ್ದು, ಈ ಪೈಕಿ 1,154 ಮಂದಿ ಮಹಾಮಾರಿಗೆ ಪ್ರಾಣ ಬಿಟ್ಟಿದ್ದಾರೆ. 9,059 ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. 24,648 ಮಂದಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತಿಳಿಸಿದೆ.

ಹೆಣ್ಮಕ್ಳೆ ಸ್ಟ್ರಾಂಗ್ ಗುರೂ ಎಂದ ಅಧ್ಯಯನ ವರದಿ

ಹೆಣ್ಮಕ್ಳೆ ಸ್ಟ್ರಾಂಗ್ ಗುರೂ ಎಂದ ಅಧ್ಯಯನ ವರದಿ

ಚೀನಾದ ಬೀಜಿಂಗ್ ತೊಂಗ್ರೆನ್ ಆಸ್ಪತ್ರೆಯಲ್ಲಿ ಜಿನ್-ಕುಯ್-ಯಾಂಗ್ ನೇತೃತ್ವದ ವಿಜ್ಞಾನಿಗಳ ತಂಡವು ಅಧ್ಯಯನ ನಡೆಸಿದೆ. ಜನವರಿ ತಿಂಗಳಿನಲ್ಲಿ ಕೊರೊನಾ ಸೋಂಕಿತರ ಪೈಕಿ ಮಹಿಳೆಯರು ಮತ್ತು ಪುರುಷರ ನಡುವಿನ ವ್ಯತ್ಯಾಸದ ಬಗ್ಗೆ ಅಧ್ಯಯನ ನಡೆಯಿತು. ಈ ವೇಳೆ ಕೊರೊನಾ ವೈರಸ್ ಸೋಂಕಿನಿಂದ ಪ್ರಾಣ ಬಿಟ್ಟವರಲ್ಲಿ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಎಂಬ ಆಘಾತಕಾರಿ ಅಂಶವು ತಿಳಿದು ಬಂದಿದೆ.

ಡಯಾಬಿಟಿಸ್, ಬಿಪಿ ರೋಗಿಗಳಿಗೆ ಅಪಾಯ ಹೆಚ್ಚು

ಡಯಾಬಿಟಿಸ್, ಬಿಪಿ ರೋಗಿಗಳಿಗೆ ಅಪಾಯ ಹೆಚ್ಚು

ನೊವೆಲ್ ಕೊರೊನಾ ವೈರಸ್ ಸೋಂಕು ಹಿರಿಯ ವಯಸ್ಸಿನವರಿಗೆ ಹೆಚ್ಚಿನ ಅಪಾಯವನ್ನು ತಂದೊಡುತ್ತದೆ. ಅದರಲ್ಲೂ ಸೋಂಕಿತರಲ್ಲಿ ಮೊದಲೇ ಡಯಾಬಿಟಿಸ್, ರಕ್ತದೊತ್ತಡ(ಬಿಪಿ) ಕಾಯಿಲೆಗೆ ತುತ್ತಾಗಿದ್ದರೆ ಅಂಥವರಿಗೆ ಕೊವಿಡ್-19 ನಿಂದ ಹೆಚ್ಚಿನ ಅಪಾಯವಿದೆ. ಕೆಲವರಲ್ಲಿ ಸೋಂಕು ಹೆಚ್ಚಾಗುತ್ತಿರುವುದಕ್ಕೆ ಕಾರಣ ಏನು ಎಂಬುದಕ್ಕೆ ಇಂದಿಗೂ ಉತ್ತರ ಸಿಕ್ಕಿಲ್ಲ. ಆದರೆ ಅಂಕಿ-ಅಂಶಗಳನ್ನು ಗಮನಿಸಿದಾಗ ಹಿರಿಯರು ಮತ್ತು ಅನಾರೋಗ್ಯಕ್ಕೆ ತುತ್ತಾಗಿರುವವರ ಬಗ್ಗೆ ಹೆಚ್ಚಿನ ಲಕ್ಷ್ಯ ವಹಿಸುವಂತೆ ವಿಜ್ಞಾನಿ ಜಿನ್-ಕುಯ್-ಯಾಂಗ್ ತಿಳಿಸಿದ್ದಾರೆ.

ಸಾರ್ಸ್ ಲಕ್ಷಣಗಳನ್ನೇ ಹೊಂದಿರುವ ಕೊವಿಡ್-19

ಸಾರ್ಸ್ ಲಕ್ಷಣಗಳನ್ನೇ ಹೊಂದಿರುವ ಕೊವಿಡ್-19

ನೊವೆಲ್ ಕೊರೊನಾ ವೈರಸ್ ಸೋಂಕು ತಗಲಿರುವ 43 ವೈದ್ಯರು ಸೇರಿದಂತೆ ಒಟ್ಟು 1045 ಸೋಂಕಿತರನ್ನು ಅಧ್ಯಯನದಲ್ಲಿ ಬಳಸಿಕೊಳ್ಳಲಾಗಿತ್ತು. ಕಳೆದ 2003ರಲ್ಲಿ ಕಾಣಿಸಿಕೊಂಡ ಸಾರ್ಸ್ ರೋಗದ 524 ಸೋಂಕಿತರ ಮಾದರಿಯನ್ನು ಅಧ್ಯಯನದಲ್ಲಿ ಬಳಸಿಕೊಳ್ಳಲಾಗಿದ್ದು, ಈ ವೇಳೆ ಎರಡೂ ಸೋಂಕಿತರಲ್ಲಿ ಒಂದೇ ರೀತಿಯ ಲಕ್ಷಣಗಳೇ ಹೆಚ್ಚಾಗಿ ಕಂಡು ಬಂದಿವೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.

ಶೇ.70ರಷ್ಟು ಪುರುಷರೇ ಕೊರೊನಾ ವೈರಸ್ ನಿಂದ ಸಾವು

ಶೇ.70ರಷ್ಟು ಪುರುಷರೇ ಕೊರೊನಾ ವೈರಸ್ ನಿಂದ ಸಾವು

ವಿಶ್ವವನ್ನೇ ವ್ಯಾಪಿಸಿರುವ ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟವರ ಪೈಕಿ ಶೇ.70ರಷ್ಟು ಪುರುಷರೇ ಎಂದು ತಿಳಿದು ಬಂದಿದೆ. ಅಂದರೆ ಸೋಂಕಿನಿಂದ ಮೃತಪಟ್ಟ ಮಹಿಳೆಯರ 2.5ಪಟ್ಟು ಪುರುಷರು ಸೋಂಕಿಗೆ ಬಲಿಯಾಗಿದ್ದಾರೆ. ಕಳೆದ 2003ರಲ್ಲಿ ಕಾಣಿಸಿಕೊಂಡಿದ್ದ ಸಾರ್ಸ್ ರೋಗಕ್ಕೂ ಕೂಡಾ ಮಹಿಳೆಯರಿಗಿಂತ ಪುರುಷರೇ ಹೆಚ್ಚಾಗಿ ಮೃತಪಟ್ಟಿದ್ದರು.

ಪುರುಷ-ಮಹಿಳೆಯರ ಸಾವಿನ ನಡುವಿನ ವ್ಯತ್ಯಾಸ ನಿಗೂಢ

ಪುರುಷ-ಮಹಿಳೆಯರ ಸಾವಿನ ನಡುವಿನ ವ್ಯತ್ಯಾಸ ನಿಗೂಢ

ಕೊರೊನಾ ವೈರಸ್ ಸೋಂಕಿಗೆ ಪುರುಷರೇ ಹೆಚ್ಚಾಗಿ ಪ್ರಾಣ ಬಿಡುತ್ತಿರುವುದು ಏಕೆ, ಮಹಿಳೆಯರು ಮತ್ತು ಪುರುಷರ ನಡುವಿನ ಈ ಸಾವಿನ ಅಂತರಕ್ಕೇನು ಕಾರಣ ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಮತ್ತಷ್ಟು ಹೆಚ್ಚಿನ ಅಧ್ಯಯನಗಳು ನಡೆಯಬೇಕಿದೆ ಎಂದು ಜಿನ್-ಕುಯ್-ಯಾಂಗ್ ತಿಳಿಸಿದ್ದಾರೆ.

English summary
Coronavirus Death Rate: Mens And Old People Death More Than Womens.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X