ಚೀನಾದ ದೊಡ್ಡ ನಗರ ಶಾಂಘೈಗೆ ಅಪ್ಪಳಿಸಿದ ಕೋವಿಡ್ 4ನೇ ಅಲೆ!
ಶಾಂಘೈ, ಮಾರ್ಚ್ 31: ಜಗತ್ತಿಗೆ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗನ್ನು ಹರಡಿಸಿರುವ ಚೀನಾದಲ್ಲಿ ಇದೀಗ ಮತ್ತೊಂದು ಅಲೆ ಶುರುವಾಗಿದೆ. ದೇಶದ ಅತಿದೊಡ್ಡ ನಗರ ಶಾಂಘೈನಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದ್ದು, ನಾಲ್ಕನೇ ಅಲೆ ಭೀತಿ ಹುಟ್ಟಿಕೊಳ್ಳುತ್ತಿದೆ.
ಕೋವಿಡ್ ಪ್ರಕರಣಗಳಲ್ಲಿ ಭಾರಿ ಏರಿಕೆಯಿಂದಾಗಿ, ವೈರಸ್ ಹರಡುವುದನ್ನು ತಡೆಯಲು ಚೀನಾ ಶಾಂಘೈ ಅನ್ನು ಈಗಾಗಲೇ ಲಾಕ್‌ಡೌನ್ ಮಾಡಲಾಗಿದೆ. 2019ರಲ್ಲಿ ವುಹಾನ್‌ನಲ್ಲಿ ಮೊದಲ ಬಾರಿಗೆ ವೈರಸ್ ಪತ್ತೆಯಾದಾಗಿನಿಂದ ಮೊದಲ ಬಾರಿಗೆ ಓಮಿಕ್ರಾನ್ ರೂಪಾಂತರಿಯು ಏಕಾಏಕಿ ದೇಶದಲ್ಲಿ ಅತಿದೊಡ್ಡ ಅಲೆಯನ್ನು ಉಂಟುಮಾಡಿದೆ.
ಕಳೆದ ಮಾರ್ಚ್‌ನಲ್ಲಿ ಚೀನಾ 70,000ಕ್ಕೂ ಹೆಚ್ಚು ದೇಶೀಯ ಕೋವಿಡ್ -19 ಪ್ರಕರಣಗಳನ್ನು ದಾಖಲಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ. ಅಲ್ಲದೇ ಇದು ಕೊರೊನಾವೈರಸ್ ಪ್ರಾರಂಭದಿಂದಲೂ ಅತಿಹೆಚ್ಚು ಸೋಂಕಿತ ಪ್ರಕರಣಗಳು ಎಂದು ಹೇಳಲಾಗುತ್ತಿದೆ. "ಈ ಅಲ್ಪಾವಧಿಯಲ್ಲಿ ಕೊವಡ್-19 ಪ್ರಕರಣಗಳ ಏಕಾಏಕಿ ಏರಿಕೆಯಿಂದಾಗಿ ಈ ಅಲೆಯನ್ನು ನಿಗ್ರಹಿಸುವ ಮತ್ತು ಹಿಂದಿನ ರೀತಿ ಕೋವಿಡ್-19 ಮುಕ್ತಗೊಳಿಸುವಂತೆ ಮಾಡುವುದು ತೀರಾ ಕಷ್ಟ ಎಂಬುದನ್ನು ಸೂಚಿಸುತ್ತದೆ," ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಚೀನಾದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಈ ಕುರಿತು ಪ್ರಮುಖ ಅಂಶಗಳು ಹೀಗಿವೆ.

ಚೀನಾದಲ್ಲಿ ಸೋಂಕು ಹೆಚ್ಚಲು ಉಪ ರೂಪಾಂತರಿ ಕಾರಣ:
ಶಾಂಘೈ ನಗರದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬರಲು ಬಿಎ.2 ಎಂಬ ಉಪ ರೂಪಾಂತರಿ ವೈರಸ್ ಕಾರಣ ಎಂದು ಹೇಳಲಾಗುತ್ತಿದೆ. ಕಳೆದ 2019ರ ಕೊನೆಯಲ್ಲಿ ಮಧ್ಯ ಚೀನಾದ ನಗರವಾದ ವುಹಾನ್‌ನಲ್ಲಿ ಮೊದಲು ಪತ್ತೆಯಾದ ಸಾಂಕ್ರಾಮಿಕ ರೋಗದಿಂದ ಇಡೀ ಜಗತ್ತು ತತ್ತರಿಸಿ ಹೋಗಿದೆ.
ಸಾರ್ವಜನಿಕ ಮಾರುಕಟ್ಟೆಗಳಲ್ಲಿ ಆಹಾರ ಖರೀದಿಸುವುದಕ್ಕೆ ಜನರು ಭಯಪಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ತಾಜಾ ಮಾಂಸ ಮತ್ತು ತರಕಾರಿಗಳ ಕೊರತೆಯ ಬಗ್ಗೆ ಕೆಲವು ನಿವಾಸಿಗಳು ಆನ್‌ಲೈನ್ ವೇದಿಕೆಯಲ್ಲಿ ದೂರಿದ್ದಾರೆ. ಈ ಹಿನ್ನೆಲೆ ಅಧಿಕಾರಿಗಳು ಆಹಾರ ಸರಬರಾಜುಗಳನ್ನು ಸುಸೂತ್ರಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್-19 ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಜಿಮ್ನಾಷಿಯಂ ಮತ್ತು ಪ್ರದರ್ಶನ ಕೇಂದ್ರಗಳನ್ನು ರೋಗಿಗಳ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ. ಅದಾಗ್ಯೂ, ಅವರಲ್ಲಿ ಹೆಚ್ಚಿನವರು ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲ ಎಂದು ತಿಳಿದು ಬಂದಿದೆ.
ಚೀನಾಗೆ ಅಪ್ಪಳಸಿದ ಕೋವಿಡ್ 4ನೇ ಅಲೆ:
ಕಳೆದ ಮಾರ್ಚ್ 29ರಂದು ನಗರದಲ್ಲಿ 5,656 ಲಕ್ಷಣರಹಿತ ಮತ್ತು 326 ರೋಗಜ ಲಕ್ಷಣಗಳನ್ನು ಹೊಂದಿರುವ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ತದನಂತರ ಶಾಂಘೈ ಅಧಿಕಾರಿಗಳು ನಿಗದಿತ ಸಮಯಕ್ಕಿಂತ ಎರಡು ದಿನಗಳ ಮುಂಚಿತವಾಗಿ ಕೆಲವು ಪಶ್ಚಿಮ ಪ್ರದೇಶಗಳಲ್ಲಿ ಲಾಕ್ ಡೌನ್ ಮಾಡಲು ಪ್ರಾರಂಭಿಸಿದರು.

ಬುಧವಾರ ಬೆಳಿಗ್ಗೆ 10 ಗಂಟೆಯ ವೇಳೆಗೆ, ನಗರದ ಹಲವು ಪ್ರದೇಶಗಳಲ್ಲಿ ಸುಮಾರು 9.1 ಮಿಲಿಯನ್ ನಿವಾಸಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಹುವಾಂಗ್ಪು ನದಿಯ ಪೂರ್ವದಲ್ಲಿ ಲಾಕ್‌ಡೌನ್ ಮಾಡಲಾಗಿದೆ.
ಬುಧವಾರದಿಂದ ಶಾಂಘೈನ ಪ್ರಮುಖ ಕಚೇರಿ ಕಟ್ಟಡಗಳು, ನಿರ್ಮಾಣ ಸ್ಥಳಗಳು, ಸಾರಿಗೆ ವಾಹನಗಳು, ಕೃಷಿ ಮಾರುಕಟ್ಟೆಗಳು ಮತ್ತು ವಸತಿ ಸಮುದಾಯಗಳು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಒಂದು ತಿಂಗಳ ಕಾಲ ಲಾಕ್ ಡೌನ್ ಘೋಷಿಸಿದೆ.
ವ್ಯಾಪಾರ ಮತ್ತು ವ್ಯವಹಾರದ ಮೇಲೆ ಶಾಂಘೈ ಲಾಕ್‌ಡೌನ್‌ನ ಆರ್ಥಿಕ ಹೊಡೆತವನ್ನು ಮಿತಿಗೊಳಿಸಲು ಚೀನಾ ಸರ್ಕಾರ ಪ್ರಯತ್ನಿಸುತ್ತಿದೆ. ಈ ನಷ್ಟವನ್ನು ಕಡಿತಗೊಳಿಸಲು ಕೋವಿಡ್ -19 ನಿಂದ ಸಂಕಷ್ಟಕ್ಕೆ ತುತ್ತಾದ ಉದ್ಯಮಗಳಿಗೆ ಸಹಾಯ ಮಾಡಲು 21 ಕ್ರಮಗಳನ್ನು ಘೋಷಿಸಿದೆ.
ತಾತ್ಕಾಲಿಕ ಕೇಂದ್ರಗಳಲ್ಲಿ ಕ್ವಾರಂಟೈನ್‌ಗೆ ಒಳಗಾದ ನಿವಾಸಿಗಳು ತಮ್ಮ ಸ್ಥಿತಿಯ ಬಗ್ಗೆ ದೂರು ನೀಡಿದ್ದಾರೆ. ಶಿಬಿರಗಳು 2,500 ಹಾಸಿಗೆಗಳವರೆಗೆ ಕಿಕ್ಕಿರಿದು ಕೆಲವು ಗುಂಪುಗಳಲ್ಲಿ ಒಟ್ಟುಗೂಡಿಸಲ್ಪಟ್ಟಿವೆ ಮತ್ತು ಹಲವಾರು ಜನರು ಒಂದೇ ಸ್ಥಳದಲ್ಲಿರುವುದರಿಂದ ನೈರ್ಮಲ್ಯ ಸಮಸ್ಯೆ ಸೃಷ್ಟಿಯಾಗಿದೆ ಎಂದು ದೂಷಿಸಲಾಗುತ್ತಿದೆ.
ವಿಶ್ವದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹಲವು ರಾಷ್ಟ್ರಗಳಲ್ಲಿ ತೀವ್ರತೆಯನ್ನು ಪಡೆದುಕೊಳ್ಳುತ್ತಿದೆ. ಜಗತ್ತಿನಲ್ಲಿ ಈವರೆಗೂ 486,282,025 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಮಹಾಮಾರಿಗೆ ಈವರೆಗೂ 6,159,278 ಮಂದಿ ಪ್ರಾಣ ಬಿಟ್ಟಿದ್ದಾರೆ. 421,470,928 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದರೆ, ಇನ್ನೂ 58,651,819 ಸಕ್ರಿಯ ಪ್ರಕರಣಗಳಿವೆ ಎಂದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications