ತಾಲಿಬಾನ್ ಕೈಯಲ್ಲಿ ಏಟು ತಿಂದು ಪಾಕಿಸ್ತಾನ ಸೈಲೆಂಟ್, ಮುಂದೆ ಏನು ಪರಿಸ್ಥಿತಿ?

ತಾಲಿಬಾನ್ ಕೈಯಲ್ಲಿ ಸರಿಯಾಗಿ ಒದೆ ತಿಂದು ಮೂಲೆ ಸೇರಿರುವ ಪಾಕಿಸ್ತಾನ ಸೇನೆಗೆ ಈಗಲೂ ಆ ಭಯ ಕಾಡುತ್ತಲೇ ಇದೆ. ಯಾವ ಕ್ಷಣದಲ್ಲಿ ಮತ್ತೆ ತಾಲಿಬಾನ್ ಬಂದು ದಾಳಿ ಮಾಡುತ್ತೋ? ಈ ಮೂಲಕ ಪಾಕಿಸ್ತಾನಕ್ಕೆ ಎಲ್ಲಿ ಕಂಟಕ ಎದುರಾಗುತ್ತೋ? ಅನ್ನೋ ಭಯದ ನಡುವೆ ಈಗ ಪಾಪಿ ಪಾಕಿಸ್ತಾನ ನಲುಗಿ ಹೋಗಿದೆ. ಸೈಲೆಂಟ್ ಆಗಿ ಮೂಲೆ ಸೇರಿರುವ ಪಾಕಿಸ್ತಾನಕ್ಕೆ ಈಗ ಮತ್ತೊಂದು ಕಂಟಕ ಎದುರಾಗಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ತಾಲಿಬಾನ್ ರಿವೇಂಜ್ ತೆಗೆದುಕೊಳ್ಳಲು ಹೋರಾಟ ನಡೆಸುವ ಸಾಧ್ಯತೆ ಇದೆ. ಹಾಗಾದರೆ ಪಾಕಿಸ್ತಾನ ಸೇನೆಯ ಭವಿಷ್ಯ ಏನು?

ಕಾಬೂಲ್ ವಸತಿ ಪ್ರದೇಶದ ಮೇಲೆ ಭೀಕರ ಬಾಂಬ್ ದಾಳಿ ನಡೆಸಿದ ಪಾಪಿ ಪಾಕಿಸ್ತಾನ, ಕಂದಹಾರ್ ಬಳಿ ಮೊದಲು ಕಿರಿಕ್ ಶುರು ಮಾಡಿತ್ತು. ಆ ನಂತರ ತಾಲಿಬಾನ್ ಜೊತೆ ಗುದ್ದಾಡಲು ಬಂದು ದಿಢೀರ್ ಸೋತು ಸುಣ್ಣವಾಗಿ ಓಡಿ ಹೋಗಿತ್ತು. ಮತ್ತೊಂದು ಕಡೆ ಈ ಬೆಳವಣಿಗೆ ಬೆನ್ನಲ್ಲೇ ಎರಡೂ ದೇಶಗಳ ಅಕ್ಕಪಕ್ಕದ ಗಡಿಯಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿತ್ತು, ಇಷ್ಟಾದರೂ ಪಾಕಿಸ್ತಾನ ಸೇನೆ ಮಾತ್ರ ಅಫ್ಘಾನಿಸ್ತಾನದ ಸ್ಥಳೀಯರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಪರಿಸ್ಥಿತಿ ಹೀಗಿದ್ದರೂ ಸಂಧಾನ ಪ್ರಕ್ರಿಯೆ ನಡೆಯುವಾಗ ಕೂಡ ಪಾಕಿಸ್ತಾನ ಮತ್ತೆ ಕಿರಿಕ್ ಮಾಡಿರುವ ಆರೋಪ ಕೇಳಿಬಂದಿದೆ.

Consequences of Pakistan and Afghanistan Clashes on Regional Dynamics

ಹೆದರಿ ಓಡಿದ ಪಾಕ್ ಸೈನಿಕರು!

ಹೌದು, ತಾಲಿಬಾನ್ ಇದೀಗ ಕೊಡುತ್ತಿರುವ ಏಟು ಸಹಿಸಿಕೊಳ್ಳಲು ಆಗದೇ ಓಡಿ ಓಡಿ ಹೋಗುತ್ತಿದ್ದಾರೆ ಪಾಕಿಸ್ತಾನದ ಸೈನಿಕರು. ಅಲ್ಲದೆ ಹಲವು ಪಾಕ್ ಸೈನಿಕರು ರಜೆ ಕೂಡ ಹಾಕಿದ್ದಾರೆ, ಈ ಮೂಲಕ ತಾಲಿಬಾನ್ ಕೈಯಿಂದ ತಮ್ಮ ಜೀವ ಉಳಿಸಿಕೊಳ್ಳಲು ಓಡಿದ್ದಾರೆ ಎಂಬ ಮಾತು ಕೂಡ ಓಡಾಡುತ್ತಿದೆ. ಒಟ್ನಲ್ಲಿ ಹೀಗೆಲ್ಲಾ ಸರಿಯಾಗಿ ಏಟು ತಿಂದರೂ ಈ ಪಾಕಿಸ್ತಾನ ಮಾತ್ರ ತನ್ನ ಬುದ್ಧಿ ಬದಲಾವಣೆ ಮಾಡಿಕೊಳ್ಳದೇ ಇರುವುದು ವಿಪರ್ಯಾಸ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+