ಹೆಲಿಕಾಪ್ಟರ್ ದುರಂತ: ನೇಪಾಳ ಪ್ರವಾಸೋದ್ಯಮ ಸಚಿವ ಮೃತ

ಕಠ್ಮಂಡು, ಫೆಬ್ರವರಿ 27: ನೇಪಾಳದ ಪ್ರವಾಸೋದ್ಯಮ ಸಚಿವ ರಬೀಂದ್ರ ಅಧಿಕಾರಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಬುಧವಾರ ಮಧ್ಯಾಹ್ನ ಅಪಘಾತಕ್ಕೀಡಾಗಿದೆ. ನೇಪಾಳದ ಪೂರ್ವ ಭಾಗದಲ್ಲಿ ಹವಾಮಾನ ವೈಪರೀತ್ಯಕ್ಕೆ ತುತ್ತಾಗಿ ಹೆಲಿಕಾಪ್ಟರ್ ನಿಯಂತ್ರಣಕ್ಕೆ ಸಿಗದೆ ನೆಲಕ್ಕಳಿಸಿರುವ ಸುದ್ದಿ ಬಂದಿದೆ.

ಹೆಲಿಕಾಪ್ಟರ್ ಅಪಘಾತವಾಗಿರುವುದನ್ನು ಖಚಿತಪಡಿಸಿರುವ ಗೃಹ ಕಾರ್ಯದರ್ಶಿ ಪ್ರೇಮ್ ಕುಮಾರ್ ರಾಯ್, ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ ಎಂದಿದ್ದಾರೆ.

Chopper Carrying Nepals Tourism Minister Crashes: Official

ಪ್ರವಾಸೋದ್ಯಮ ಹಾಗೂ ನಾಗರಿಕ ಪ್ರವಾಸೋದ್ಯಮ ಸಚಿವ ರಬೀಂದ್ರ ಅಧಿಕಾರಿ ಸೇರಿದಂತೆ 6 ಮಂದಿ ಪ್ರಯಾಣಿಕರು ಹೆಲಿಕಾಪ್ಟರ್ ನಲ್ಲಿದ್ದರು. ವಿಮಾನಯಾನದ ಉದ್ಯಮಿ ಅಂಗ್ ತ್ಸೆರಿಂಗ್ ಶೇರ್ಪಾ, ಪ್ರಧಾನಿ ಕೆಪಿ ಓಲಿ ಅವರ ಆಪ್ತ ಸಹಾಯಕ ಯುವರಾಜ್ ದಹಾಲ್, ನೇಪಾಳ ಪೊಲೀಸ್ ಇನ್ಸ್ ಪೆಕ್ಟರ್ ಜನರಲ್ ಸರ್ಬೇಂದ್ರ ಖನಾಲ್ ಅವರು ಪ್ರಯಾಣಿಸುತ್ತಿದ್ದರು.

ಕ್ಯಾಪ್ಟನ್ ಪ್ರಭಾಕರ್ ಕೆಸಿ ಜತೆಗೆ ಡೆಪ್ಯುಟಿ ಡೈರೆಕ್ಟರ್ ಜನರಲ್ (ನಾಗರಿಕ ವಿಮಾನಯಾನ) ಬೀರೇಂದ್ರ ಪ್ರಸಾದ್ ಶ್ರೇಷ್ಠ ಹಾಗೂ ಅರ್ಜುನ್ ಕುಮಾರ್ ಘಿಮಿರೆ ಅವರು ಇದ್ದರು.

ಏರ್ ಡೈನಸ್ಟಿ ಹಾಗೂ ಯೇತಿ ವಿಮಾನಯಾನದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶೆರ್ಪಾ ಅವರು ಪ್ರಯಾಣಿಸುತ್ತಿದ್ದ ಬಗ್ಗೆ ವಿಮಾನಯಾನ ಸಂಸ್ಥೆ ಕೂಡಾ ಖಚಿತಪಡಿಸಿದೆ. ಪಥಿಬಾರ ಪ್ರದೇಶದಲ್ಲಿ ಹೆಲಿಕಾಪ್ಟರ್ ನೆಲಕ್ಕೆ ಅಪ್ಪಳಿಸಿದೆ. ದೊಡ್ಡ ಮಟ್ಟದ ಹೊಗೆ ಕಾಣಿಸಿಕೊಂಡ ಬಳಿಕ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+