ಭಾರತದ ವಿರುದ್ಧ ಆರೋಪವಿರುವ ಅಧ್ಯಯನ ವರದಿ ಹಿಂಪಡೆದ ಚೀನಾ
ಬೀಜಿಂಗ್, ಡಿಸೆಂಬರ್ 15: ಕೊರೊನಾ ವೈರಸ್ ಮೊದಲು ಮನುಷ್ಯರಿಂದ ಮನುಷ್ಯರಿಗೆ ಹರಡಿದ ಘಟನೆಯು ಭಾರತದಲ್ಲಿಯೇ ಮೊದಲು ನಡೆದಿರಬಹುದು ಎಂಬ ಆರೋಪದ ಅಧ್ಯಯನ ವರದಿಯನ್ನು ಚೀನಾ ವೈದ್ಯಕೀಯ ಪತ್ರಿಕೆ 'ದಿ ಲ್ಯಾನ್ಸೆಟ್'ನಿಂದ ಹಿಂದಕ್ಕೆ ಪಡೆದುಕೊಂಡಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ಅಧ್ಯಯನ ವರದಿಯನ್ನು ಮೊದಲು ವೈದ್ಯಕೀಯ ಪತ್ರಿಕೆಯ ಮುದ್ರಣಪೂರ್ವ ವೇದಿಕೆಯಾದ ಎಸ್‌ಎಸ್‌ಆರ್‌ಎನ್ ಡಾಟ್ ಕಾಂನಲ್ಲಿ ನವೆಂಬರ್ 17ರಂದು ಪೋಸ್ಟ್ ಮಾಡಲಾಗಿತ್ತು. ಆದರೆ ಅದನ್ನು ಹಿಂಪಡೆಯಲಾಗಿದೆ ಎಂದು ಚೀನಾ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ವರದಿ ತಿಳಿಸಿದೆ.
ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್‌ನ ಅಡಿಯಲ್ಲಿರುವ ನ್ಯೂರೋಸೈನ್ಸ್ ಸಂಸ್ಥೆಯ ಸಿಬ್ಬಂದಿಯೊಬ್ಬರು ಕೂಡ ಆ ಲೇಖನವನ್ನು ಹಿಂದಕ್ಕೆ ಪಡೆದುಕೊಂಡಿರುವುದಾಗಿ ಖಚಿತಪಡಿಸಿದ್ದಾರೆ. ಸಿಎಎಸ್ ಅಧೀನದಲ್ಲಿರುವ ನ್ಯೂರೋಸೈನ್ಸ್ ಸಂಸ್ಥೆ, ಶಾಂಘೈ ಮೂಲದ ಫುಡಾನ್ ವಿಶ್ವವಿದ್ಯಾಲಯ ಮತ್ತು ಹ್ಯೂಸ್ಟನ್‌ನ ಟೆಕ್ಸಾಸ್ ವಿಶ್ವವಿದ್ಯಾಲಯದ ಸಂಶೋಧಕರು ಈ ಅಧ್ಯಯನ ನಡೆಸಿದ್ದರು.

ಚೈನೀಸ್ ಅಕಾಡೆಮಿ ಆಫ್ ಸೈನ್ಸ್‌ನ ಒಂದು ತಂಡದ ವಾದದ ಪ್ರಕಾರ 2019ರ ಬೇಸಿಗೆ ಕಾಲದಲ್ಲಿ ವೈರಸ್ ಭಾರತದಲ್ಲಿ ಹುಟ್ಟಿದೆ. ಕಲುಷಿತ ನೀರಿನ ಮೂಲಕ ಪ್ರಾಣಿಗಳಿಂದ ಮಾನವನಿಗೆ ಹರಡಿದೆ. ಇದಾದ ಬಳಿಕ ವುಹಾನ್‌ಗೆ ವ್ಯಕ್ತಿಯೊಬ್ಬರ ಪ್ರಯಾಣದ ಮೂಲಕ ಹರಡಿದ್ದು, ಅದನ್ನು ಮೊದಲಿಗೆ ಪತ್ತೆ ಹೆಚ್ಚಲಾಯಿತು ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿತ್ತು.












Click it and Unblock the Notifications