ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂತನ ಭೂ ಗಡಿ ಕಾನೂನನ್ನು ಅಂಗೀಕರಿಸಿದ ಚೀನಾ

|
Google Oneindia Kannada News

ಬೀಜಿಂಗ್, ಅಕ್ಟೋಬರ್ 25: ನೂತನ ಭೂ ಗಡಿ ಕಾನೂನಿಗೆ ಚೀನಾ ಒಪ್ಪಿಗೆ ನೀಡಿದೆ. ಚೀನಾ ದೇಶದ ಅಖಂಡತೆ ಹಾಗೂ ಸಾರ್ವಭೌಮತ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಚೀನಾ ತಾನು ನೂತನ ಭೂ ಗಡಿ ಕಾನೂನನ್ನು ಜಾರಿಗೆ ತರುತ್ತಿರುವುದಾಗಿ ಘೋಷಿಸಿದೆ.

ಚೀನಾ ಸಂಸತ್ತಿನಲ್ಲಿ ಈ ಕಾನೂನಿಗೆ ಒಪ್ಪಿಗೆ ದೊರೆತಿದ್ದು ಮುಂದಿನ ವರ್ಷ ಜನವರಿ1 ರಿಂದ ಅನುಷ್ಠಾನಕ್ಕೆ ಬರಲಿದೆ. ಈ ನೂತನ ಕಾನೂನಿನಲ್ಲಿ ಗಡಿ ಬಲವರ್ಧನೆ ಮಾತ್ರವಲ್ಲದೆ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಗಡಿ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ನಿರ್ಮಾಣ ಹಾಗೂ ಅಲ್ಲಿನ ಜನರ ಜೀವನ ಸದೃಢಗೊಳಿಸುವ ಕಾರ್ಯಕ್ರಮಗಳ ಕುರಿತಾಗಿ ಉಲ್ಲೇಖವಿದೆ.

ಭಾರತ-ಚೀನಾ ಗಡಿ ಬಿಕ್ಕಟ್ಟು: ಪ್ರತಿಬಾರಿಯೂ ಅನುಕೂಲಕರ ಫಲಿತಾಂಶ ಸಿಗದು ಎಂದ ಸೇನಾ ಮುಖ್ಯಸ್ಥರು! ಭಾರತ-ಚೀನಾ ಗಡಿ ಬಿಕ್ಕಟ್ಟು: ಪ್ರತಿಬಾರಿಯೂ ಅನುಕೂಲಕರ ಫಲಿತಾಂಶ ಸಿಗದು ಎಂದ ಸೇನಾ ಮುಖ್ಯಸ್ಥರು!

ಭಾರತದೊಂದಿಗೆ ಗಡಿ ಬಿಕ್ಕಟ್ಟನ್ನು ಹೊಂದಿರುವ ಚೀನಾ ನೂತನ ಕಾನೂನನ್ನು ತಂದಿರುವುದು ಭಾರತಕ್ಕೆ ಪರೋಕ್ಷ ಎಚ್ಚರಿಕೆಯಾಗಿದೆ ಎಂದು ರಾಜಕೀಯ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

China’s New Law Formalises Its LAC Actions

ಚೀನಾ ಭೂಗಡಿಯಲ್ಲಿ ಯಾವುದೇ ರೀತಿಯಲ್ಲಿ ಉಲ್ಲಂಘನೆ ಕಂಡುಬಂದರೆ ಹಾಗೂ ತನ್ನ ದೇಶದ ಅಖಂಡತೆಗೆ ಧಕ್ಕೆ ಒದಗಿಬಂಡರೆ ತನ್ನ ರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳಲು ಈ ಕಾನೂನು ಚೀನಾಗೆ ಅನುವು ಮಾಡಿಕೊಡಲಿದೆ.

ಚೀನಾದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಪ್ರತಿಪಾದಿಸಿರುವ ದೇಶದ ರಾಷ್ಟ್ರೀಯ ಶಾಸಕಾಂಗವು, ಭೂ ಗಡಿ ಪ್ರದೇಶಗಳ ರಕ್ಷಣೆ ಕುರಿತ ಹೊಸ ಕಾನೂನೊಂದನ್ನು ಅಂಗೀಕರಿಸಿದೆ.

ದೇಶವು ಪ್ರಾದೇಶಿಕ ಸಮಗ್ರತೆ ಮತ್ತು ಭೂ ಗಡಿಗಳನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಪ್ರಾದೇಶಿಕ ಸಾರ್ವಭೌಮತ್ವ ಮತ್ತು ಭೂ ಗಡಿಗಳನ್ನು ದುರ್ಬಲಗೊಳಿಸುವ ಯಾವುದೇ ಕೃತ್ಯದ ವಿರುದ್ಧ ಹೋರಾಡುತ್ತದೆ ಎಂದು ವರದಿ ಹೇಳಿದೆ.

ದೇಶದ ಗಡಿಗಳನ್ನು ಬಲಪಡಿಸುವುದು, ಗಡಿ ಪ್ರದೇಶಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಆದ್ಯತೆ, ಈ ಪ್ರದೇಶಗಳಲ್ಲಿ ಮೂಲಸೌಕರ್ಯ ಸುಧಾರಣೆ ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲು ಕಾನೂನಿನಲ್ಲಿ ಷರತ್ತು ವಿಧಿಸಲಾಗಿದೆ ಎಂದೂ ತಿಳಿಸಲಾಗಿದೆ.

ಭಾರತ ಮತ್ತು ಭೂತಾನ್‌ನೊಂದಿಗೆ ಚೀನಾ ಇನ್ನೂ ಗಡಿ ಒಪ್ಪಂದಗಳನ್ನು ಅಂತಿಮಗೊಳಿಸಿಲ್ಲ. ಚೀನಾವು ಇತರ 12 ದೇಶಗಳೊಂದಿಗಿನ ಗಡಿ ವಿವಾದವನ್ನು ಈಗಾಗಲೇ ಬಗೆಹರಿಸಿಕೊಂಡಿದೆ.
ಈ ಹೊಸ ಕಾನೂನು ಭಾರತದೊಂದಿಗಿನ ಚೀನಾದ ಗಡಿ ವಿವಾದದ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ.

ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್‌ನ (ಎನ್‌ಪಿಸಿ) ಸ್ಥಾಯಿ ಸಮಿತಿಯ ಸದಸ್ಯರು ಶನಿವಾರ ನಡೆದ ಶಾಸಕಾಂಗ ಅಧಿವೇಶನದ ಸಮಾರೋಪ ಸಭೆಯಲ್ಲಿ ಕಾನೂನನ್ನು ಅನುಮೋದಿಸಿದರು ಎಂದು ಸರ್ಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

'ಮುಂದಿನ ವರ್ಷ ಜನವರಿ 1ರಿಂದ ಕಾನೂನು ಜಾರಿಗೊಳ್ಳಲಿದೆ. ಚೀನಾದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯು ಪವಿತ್ರವಾಗಿದ್ದು, ಇದನ್ನು ಯಾರಿಂದಲೂ ಉಲ್ಲಂಘಿಸಲು ಸಾಧ್ಯವಿಲ್ಲ' ಎಂದು ವರದಿ ಹೇಳಿದೆ.

ಭಾರತ-ಚೀನಾ ಗಡಿ ಪ್ರದೇಶದಲ್ಲಿ ಐಟಿಬಿಪಿಯ ಹೊಸ ಗಡಿ ಠಾಣೆ ಸ್ಥಾಪಿಸಲು ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಕೇಂದ್ರ ಸಚಿವ ನಿತ್ಯಾನಂದ ರಾಯ್ ಹೇಳಿದ್ದಾರೆ. ಗ್ರೇಟರ್ ನೋಯ್ಡಾದಲ್ಲಿ ಆಯೋಜಿಸಲಾಗಿದ್ದ ಐಟಿಬಿಪಿಯ 60ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, '' ಕಳೆದ ವರ್ಷ ಸರ್ಕಾರ 47 ಗಡಿ ಠಾಣೆ ಸ್ಥಾಪಿಸಲು ಅನುಮೋದನೆ ನೀಡಿತ್ತು. 8 ಸಾವಿರ ಯೋಧರನ್ನು ಒಳಗೊಂಡ 7 ನೂತನ ಬೆಟಾಲಿಯನ್ ಕೂಡ ಶೀಘ್ರದಲ್ಲಿಯೇ ಸ್ಥಾಪನೆಯಾಗಲಿದೆ'' ಎಂದಿದ್ದಾರೆ.

ಹಲವು ಸುತ್ತುಗಳ ಮಾತುಕತೆ ಬಳಿಕವೂ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ತನ್ನ ದುಸ್ಸಾಹಸ ಮುಂದುವರೆಸಿದ ಚೀನಾ , ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೊಸ ಭೂಗಡಿ ಕಾನೂನಿಗೆ ಅಂಗೀಕಾರ ಪಡೆದುಕೊಂಡಿದೆ.

English summary
China’s legislature has adopted a new border law, to take effect on January 1, that calls on the state and military to safeguard territory and “combat any acts” that undermine China’s territorial claims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X