ಚೀನಿ ಉತ್ಪನ್ನಗಳ ಬಹಿಷ್ಕಾರ: ಭಾರತಕ್ಕೆ ಚೀನಾ ಎಚ್ಚರಿಕೆ

Posted By:
Subscribe to Oneindia Kannada

ನವದೆಹಲಿ, ಅಕ್ಟೋಬರ್, 27: ಚೀನಿ ಉತ್ಪನ್ನಗಳನ್ನು ಭಾರತ ಬಹಿಷ್ಕರಿಸಿದರೆ ಉಭಯ ದೇಶಗಳ ಬಾಂಧ್ಯವದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಭಾರತಕ್ಕೆ ಚೀನಾ ಗಂಭೀರ ಎಚ್ಚರಿಕೆ ನೀಡಿದೆ.

ಚೀನಿ ಉತ್ಪನ್ನಗಳ ಮೇಳೆ ನಿಷೇಧ ಹೇರುವುದರಿಂದ ಉಭಯ ದೇಶಗಳ ಬಂಡವಾಳ ಹೂಡಿಕೆಯ ಮೇಲೂ ಅದು ತೀವ್ರ ಪ್ರಭಾವ ಬೀರುತ್ತದೆ ಎಂದು ಚೀನಾ ಹೇಳಿದೆ.

china-warns-that-boycoit-its-goods-will-hurt-ties

ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡಲು ನಿರ್ಧರಿಸಿರುವ ಚೀನಾ ಕಂಪೆನಿಗಳ ವಸ್ತುಗಳ ಮೇಲೆ ಭಾರತ ನಿಷೇಧ ಹೇರಿದರೆ ಭವಿಷ್ಯದಲ್ಲಿ ಅದು ಗಂಭೀರ ಪರಿಣಾಮ ಬೀರಲಿದೆ ಎಂದು ನವದೆಹಲಿಯಲ್ಲಿರುವ ಚೀನಾ ರಾಯಭಾರಿ ಜೀ ಲಿಯಾನ್ ಎಚ್ಚರಿಸಿದ್ದಾರೆ.

ಉಭಯ ದೇಶಗಳ ಬಾಂಧ್ಯವ ಸೂಕ್ಷ್ಮ ವಿಷಯವಾಗಿದ್ದು, ಈ ವಿಷಯದಲ್ಲಿ ಭಾರತವು ವಿವೇಚನಾಯುತವಾಗಿ ವ್ಯವಹರಿಸಬೇಕು ಎಂದು ಅವರು ಹೇಳಿದರು. ಚೀನಿ ಉತ್ಪನ್ನಗಳನ್ನು ನಿಷೇಧಿಸಬಾರದು ಎಂಬುದು ಉಭಯ ದೇಶಗಳ ಜನರ ಅಭಿಪ್ರಾಯವಾಗಿದೆ ಎಂದು ಅವರು ಹೇಳಿದರು.

ದಕ್ಷಿಣ ಏಷ್ಯಾದಲ್ಲೇ ಚೀನಾದ ದೊಡ್ಡ ವಾಣಿಜ್ಯವಲಯವಾಗಿ ಚೀನಾ ಗುರುತಿಸಲ್ಪಟ್ಟಿದೆ. ಚೀನಾ ಉತ್ಪನ್ನಗಳನ್ನು ಕೊಳ್ಳುವ ರಾಷ್ಟ್ರಗಳ ಪೈಕಿ ಭಾರತ 9ನೇ ಸ್ಥಾನದಲ್ಲಿದೆ ಎಂದು ಅವರು ಹೇಳಿದರು.

ಚೀನಾದ ಪರಮ ಮಿತ್ರನಾಗಿ ವ್ಯವಹರಿಸುತ್ತಿರು ಚೀನಿ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡುತ್ತಿದೆ. ಈ ಪರಿಣಾಮ ದೀಪಾವಳಿ ಸಂಭ್ರಮದಲ್ಲಿ ಚೀನಿ ಪಟಾಕಿಗಳನ್ನು ಕೊಳ್ಳಲು ಜನ ಹಿಂದೇಟು ಹಾಕುವ ಸಾದ್ಯತೆ ಇದೆ.

china-warns-that-boycoit-its-goods-will-hurt-ties

ಈ ಹಿನ್ನೆಲೆಯಲ್ಲಿ ಚೀನಾ ರಾಯಭಾರಿ ಜೀ ಲಿಯಾನ್ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಭಾರತ ಸರ್ಕಾರ ಅಧಿಕಾರಯುತವಾಗಿ ಚೀನಿ ವಸ್ತುಗಳ ಮೇಲೆ ನಿಷೇಧ ಹೇರದಿದ್ದರೂ ಸಹ ಭಾರತೀಯರೇ ಸ್ವಯಂಪ್ರೇರಿತರಾಗಿ ಚೀನಾ ವಸ್ತುಗಳ ಕಡೆ ಒಲವು ತೋರಿಸುತ್ತಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
China is more concerned that the boycott will negatively affect Chinese enterprises to invest in India and the bilateral cooperation, which both Chinese and Indian people are not willing to see, said Xie Liyan.
Please Wait while comments are loading...