ತೈವಾನ್ ವಿಚಾರವಾಗಿ ಅಮೆರಿಕಕ್ಕೆ ಧಮ್ಕಿ ಹಾಕಿದ ಚೀನಾ

ಬೀಜಿಂಗ್, ಜನವರಿ 01: ತೈವಾನ್ ವಿಚಾರವಾಗಿ ಅಮೆರಿಕಕ್ಕೆ ಚೀನಾ ಧಮ್ಕಿ ಹಾಕಿದೆ. ತೈವಾನ್ ವಿಚಾರವಾಗಿ ಅತ್ಯಂತ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಚೀನಾ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ.

ಸಂದರ್ಶನವೊಂದರಲ್ಲಿ ವೆಂಗ್, 'ತೈವಾನ್ ವಿಚಾರದಲ್ಲಿ ಅಮೆರಿಕದ ವರ್ತನೆ ಪರಿಸ್ಥಿತಿಯನ್ನು ಉಲ್ಬಣಗೊಳಿಸುತ್ತಿದೆ. ಅಮೆರಿಕದ ನೀತಿ ಇದೇ ರೀತಿ ಮುಂದುವರಿದರೆ ಆ ರಾಷ್ಟ್ರ ಭಾರೀ ಬೆಲೆ ತೆರಬೇಕಾಗುತ್ತದೆ. ಯಾವಾಗಲೂ ತೈವಾನ್ ಚೀನಾದ ಅಂಗವಾಗಿರುತ್ತದೆ. ಇದನ್ನು ವಿಶ್ವದ ಬೇರೇ ಬೇರೆ ರಾಷ್ಟ್ರಗಳ ವೇದಿಕೆಯಲ್ಲಿ ಸ್ಪಷ್ಟಪಡಿಸಿದ್ದೇವೆ.

ಜಗತ್ತಿನ ಯಾವ ಶಕ್ತಿಯೂ ತೈವಾನ್ ಅನ್ನು ಚೀನಾದಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಅಮೆರಿಕ ಯತ್ನಿಸುತ್ತಿರುವ ಎಲ್ಲ ರೀತಿಯ ಕ್ರಮಗಳು ಆ ರಾಷ್ಟ್ರಕ್ಕೆ ಸಾಕಷ್ಟು ಹಾನಿ ಉಂಟು ಮಾಡಲಿದೆ. ನಾವು ಯಾವುದೇ ಒತ್ತಡಕ್ಕೆ ಮಣಿಯಲ್ಲ. ತೈವಾನ್ ಗೆ ಒಂದೇ ಒಂದು ಮಾರ್ಗವಿದ್ದು, ಚೀನಾದ ಭಾಗವಾಗಬೇಕು. ಬೇರೆ ದಾರಿ ಇಲ್ಲ. ಈ ವಿಚಾರವನ್ನು ಚೀನಾ ಹಾಗೂ ತೈವಾನ್ ಅರ್ಥ ಮಾಡಿಕೊಳ್ಳಬೇಕಿದೆ ಎಂಬ ನೇರ ಎಚ್ಚರಿಕೆಯನ್ನು ವಾಂಗ್ ನೀಡಿದ್ದಾರೆ.

China Warns America Will Face Unbearable Price On Taiwan

ಜೋ ಬೈಡನ್ ಅಮೆರಿಕದ ಚುಕ್ಕಾಣಿ ಹಿಡಿದ ಮೇಲೆ ಚೀನಾ ಪ್ರಭಾವ ಅಧಿಕಗೊಳ್ಳುತ್ತಿದೆ. ಶಸ್ತ್ರಾಸ್ತ್ರ, ಮಾರುಕಟ್ಟೆ, ಆರ್ಥಿಕತೆ, ವೈದ್ಯಕೀಯ, ಗಗನಯಾನ, ತಂತ್ರಜ್ಞಾನ ಸೇರಿದಂತೆ ಎಲ್ಲ ರಂಗದಲ್ಲೂ ಅಮೆರಿಕ ತನ್ನ ಹಿಡಿತ ಇದೆ. ಆದರೆ, ಪ್ರಸಕ್ತ ವಿದ್ಯಮಾನಗಳಲ್ಲಿ ಚೀನಾ, ಅಮೆರಿಕಕ್ಕೆ ತೀವ್ರ ಪೈಪೋಟಿ ನೀಡುತ್ತಿದೆ. ಮಾರುಕಟ್ಟೆ ವಿಸ್ತೀರ್ಣ, ಸಾಗರ ವ್ಯಾಪಾರ, ದಕ್ಷಿಣ ಏಷ್ಯಾದಲ್ಲಿ ಗಡಿ ಹಂಚಿಕೆ ವಿಚಾರದಲ್ಲಿ ನೆರೆ ರಾಷ್ಟ್ರಗಳೊಂದಿಗೆ ಚೀನಾ ಕ್ಯಾತೆ ತೆಗೆಯುತ್ತಿದೆ.

ಕಳೆದ ಹಲವು ವರ್ಷಗಳಿಂದ ತೈವಾನ್ ವಿಚಾರದಲ್ಲಿ ಚೀನಾ ಹಸ್ತಕ್ಷೇಪ ನಡೆಸುತ್ತಿದೆ. ಈ ಮಧ್ಯೆ ತೈವಾನ್ ವಿಷಯದಲ್ಲಿ ಚೀನಾ ವಿದೇಶಾಂಗ ಸಚಿವ ವೆಂಗ್ ಯಿ ಅಮೆರಿಕಕ್ಕೆ ನೇರ ಬೆದರಿಕೆ ಹಾಕಿದ್ದಾರೆ.

ಟೆಹ್ರಾನ್ ಟೈಮ್ಸ್ ಪ್ರಕಾರ, ಇರಾನ್ ಸರ್ಕಾರವು ಗುರುವಾರ ನಡೆಸಿದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ, ಬಂದರ್ ಅಬ್ಬಾಸ್‌ನಲ್ಲಿ ಕಾನ್ಸುಲೇಟ್ ತೆರೆಯಲು ಚೀನಾಕ್ಕೆ ಅನುಮೋದನೆ ನೀಡಲಾಯಿತು. ಕಳೆದ ಮಾರ್ಚ್ ನಲ್ಲಿ ಚೀನಾ ಮತ್ತು ಇರಾನ್ 25 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದವು. ಇದರಡಿ ಎರಡೂ ದೇಶಗಳು ಹಲವು ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸುವ ನಿರ್ಧಾರಕ್ಕೆ ಬಂದಿದ್ದವು. ಚೀನಾ ಹಾಗೂ ಇರಾನ್ ಮಧ್ಯೆದ ಒಪ್ಪಂದಗಳನ್ನು ಅಮೆರಿಕ ಗಮನಿಸುತ್ತಿದೆ.

ಇರಾನ್‌ನಲ್ಲಿ ಚೀನಾದ ರಾಯಭಾರ ಕಚೇರಿ; ಮೂಕ ಪ್ರೇಕ್ಷಕನಾದ ಅಮೆರಿಕ ಇನ್ನು ಇರಾನ್‌ನಲ್ಲಿಯೂ ಚೀನಾ ಸರ್ಕಾರ ತನ್ನ ಹಸ್ತಕ್ಷೇಪವನ್ನು ಕ್ರಮೇಣ ಹೆಚ್ಚಿಸುತ್ತಿದೆ. ಅಮೆರಿಕ ಆರ್ಥಿಕ ದಿಗ್ಬಂಧನದಿಂದ ಕಂಗಾಲಾಗಿರುವ ಇರಾನ್, ಚೀನಾದ ತೆಕ್ಕೆಯತ್ತ ಹೊರಳುತ್ತಿದೆ. ಈ ಬಗ್ಗೆ ಇರಾನ್ ಸರ್ಕಾರ ಅನೇಕ ಹೊಸ ನೀತಿಗಳನ್ನು ಕೈಗೊಳ್ಳುತ್ತಿದ್ದು, ಚೀನಾಕ್ಕೆ ಕೆಂಪು ಹಾಸಿಗೆಯ ಸ್ವಾಗತ ನೀಡುತ್ತಿದೆ. ಬಂದರು ನಗರವಾದ "ಬಂದರ್ ಅಬ್ಬಾಸ್‌"ನಲ್ಲಿ ಕಾನ್ಸುಲೇಟ್ ತೆರೆಯಲು ಬೀಜಿಂಗ್ ಅನುಮೋದನೆಯನ್ನು ಪಡೆದುಕೊಂಡಿದೆ.

ಬಂದರ್ ಅಬ್ಬಾಸ್ ಕಡಲತೀರದ ರಾಜ್ಯವಾಗಿದ್ದು, ಹಾರ್ಮೋಜಾಗಾನ್‌ನ ಪ್ರಮುಖ ನಗರ ಮತ್ತು ವ್ಯಾಪಾರಿ ಕೇಂದ್ರವಾಗಿದೆ. ಈ ಬಂದರು ನಗರಿ ಮೇಲೆ ಚೀನಾ ಹಲವು ದಿನಗಳಿಂದ ಕಣ್ಣಿಟ್ಟಿತ್ತು. ಇದಕ್ಕಾಗಿ ಇರಾನ್ ಗೆ ಸಾಕಷ್ಟು ಪ್ರಮಾಣದಲ್ಲಿ ಚೀನಾ ಹಣದ ಆಮಿಷ ತೋರಿದೆ.

ಕೆಲವು ದಿನಗಳ ಹಿಂದಷ್ಟೇ, ತೈವಾನ್ ವಿಮಾನ ಪ್ರದೇಶದ ನಿಯಮ ಮೀರಿ ಚೀನಾ ತನ್ನ ಮಿಲಿಟರಿ ವಿಮಾನವನ್ನು ಹಾರಿಸುತ್ತಿದ್ದು, ಇದರಿಂದ ತೈವಾನ್ ಕೆರಳಿತ್ತು. ನಾವು ಯುದ್ಧ ಆರಂಭಿಸುವುದಿಲ್ಲ, ಆದರೆ, ನಾವು ಯುದ್ಧಕ್ಕೆ ಸಜ್ಜಾಗಿದ್ದೇವೆ ಎಂದು ಹೇಳಿಕೆ ನೀಡಿತ್ತು.
ಈ ಮೂಲಕ ಪರೋಕ್ಷವಾಗಿ ತೈವಾನ್ ಚೀನಾಗೆ ಎಚ್ಚರಿಕೆ ಸಂದೇಶ ಕೊಟ್ಟಿದೆ. ಇದರ ಜೊತೆಗೆ ಮುಂದೆ ಏನಾಗುತ್ತೋ ಎಂಬ ಭೀತಿಯನ್ನೂ ಹುಟ್ಟುಹಾಕಿದೆ.
ಈಗಿನ ಸ್ಥಿತಿ ನೋಡಿದರೆ ಚೀನಾ-ತೈವಾನ್ ಯುದ್ಧಕ್ಕೆ ಸಿದ್ಧವಾಗಿಲ್ಲ. ಇದಕ್ಕೆ ಕಾರಣ ನೂರಾರು, ಅದ್ರಲ್ಲೂ ಕೊರೊನಾ ಹೊಡೆತದಿಂದ ಸುಧಾರಿಸಿಕೊಳ್ಳಲು ಇಬ್ಬರಿಗೂ ಸಾಕಷ್ಟು ಸಮಯ ಅಗತ್ಯವಿದೆ.

ತೈವಾನ್‌ನ ಗಡಿಯಲ್ಲಿ ಯುದ್ಧ ವಿಮಾನ ಹಾರಿಸುತ್ತಿದೆ. ಅಲ್ಲದೆ ಮಿಲಿಟರಿ ಪ್ರಯೋಗಗಳು ನಡೆಯುತ್ತಿರುವ ಕಾರಣ ನಾವು ಯುದ್ಧಕ್ಕೆ ಸಿದ್ಧರಾಗಬೇಕು ಎಂದಿದ್ದಾರೆ.

ಪರಿಸ್ಥಿತಿ ಹೀಗಿರುವಾಗ ಯುದ್ಧಕ್ಕೆ ಎರಡೂ ರಾಷ್ಟ್ರಗಳು ಸಿದ್ಧವಿಲ್ಲ! ತೈವಾನ್ ಸಚಿವರು ಇತ್ತೀಚೆಗೆ ಯುದ್ಧಕ್ಕೆ ಸಜ್ಜಾಗಬೇಕಿದೆ ಎಂದು ಹೇಳಿದ್ದರು. ಆದ್ರೆ ಚೀನಾಗೆ ಎಚ್ಚರಿಕೆ ನೀಡುವ ಸಲುವಾಗಿ ಹೀಗೆ ಹೇಳಿರಬಹುದು ಅಂತಿದ್ದಾರೆ ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ, ತೈವಾನ್ ಯುದ್ಧಕ್ಕೆ ಸಜ್ಜು ಎಂದು ಘೋಷಿಸಿರುವುದು ಹಲವರ ಹುಬ್ಬೇರಿಸಿದೆ. ತೈವಾನ್ ಡಚ್ಚರ ವಸಾಹತಾಗಿತ್ತು ತೈವಾನ್ ಡಚ್ಚರ ವಸಾಹತಾಗಿತ್ತು ಮೊದಲಿಗೆ ತೈವಾನ್ ಡಚ್ಚರ ವಸಾಹತಾಗಿತ್ತು.

ಇದು ಈಗಲೂ ಮುಂದುವರಿದಿದೆ. ತೈವಾನ್ ಗಂಡೆದೆ ಮೆಚ್ಚಲೇಬೇಕು ತೈವಾನ್ ಗಂಡೆದೆ ಮೆಚ್ಚಲೇಬೇಕು ತೈವಾನ್ ಚೀನಾದಷ್ಟು ದೊಡ್ಡ ದೇಶವಲ್ಲ, ಆದರೂ ತೈವಾನ್ ಗಂಡೆದೆ ಮೆಚ್ಚಲೇಬೇಕು. ತನ್ನದೇ ಸರ್ಕಾರ ಹೊಂದಿರುವ ತೈವಾನ್‌ನಲ್ಲಿ 2.40 ಕೋಟಿ ಜನ ವಾಸಿಸುತ್ತಿದ್ದಾರೆ. ಇಲ್ಲಿ ಕೆಲ ದಶಕಗಳ ಹಿಂದೆ ರಾಜಕೀಯ ಸ್ಥಿರತೆ ಇರಲಿಲ್ಲ. 2 ದಶಕಗಳಿಂದ ಈಚೆಗೆ ಅಂದರೆ 1996ರ ನಂತರ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದಿದೆ.

ಅದಕ್ಕೂ ಮೊದಲು ಹಲವು ದೇಶಗಳು, ಇದೇ ತೈವಾನ್‌ನ ಹರಿದು-ಹಂಚಿ ಆಳ್ವಿಕೆ ನಡೆಸಿದ್ದವು. ಹೀಗೆ ಕಮ್ಯುನಿಸ್ಟ್ ಚೀನಾ ಪಕ್ಕದಲ್ಲೇ ತೈವಾನ್ ಪ್ರಜಾಪ್ರಭುತ್ವ ದೇಶವಾಗಿ ಬೆಳೆದು ನಿಂತಿದೆ. ಇದು ಸಹಜವಾಗಿಯೇ ಎರಡೂ ರಾಷ್ಟ್ರಗಳ ನಡುವೆ ಘರ್ಷಣೆಗೆ ಕಾರಣವಾಗಿದೆ. ಆಗಾಗ ಅಮೆರಿಕ ತೈವಾನ್ ವಿಚಾರದಲ್ಲಿ ಚೀನಾಗೆ ಎಚ್ಚರಿಕೆ ನೀಡುವುದು ದ್ವೇಷ ಹೆಚ್ಚಾಗುವಂತೆ ಮಾಡುತ್ತಿದೆ.

ನಂತರ ಜಪಾನ್ ಆಡಳಿತ ಮಾಡಿತ್ತು. 2ನೇ ಮಹಾಯುದ್ಧದ ಬಳಿಕ ಚೀನಾದ ರಾಷ್ಟ್ರೀಯವಾದಿ ಪಕ್ಷದ ಚಿಯಾಂಗ್ ಕೈ-ಶೇಕ್ ಅಧ್ಯಕ್ಷರಾದರು. 1949ರಲ್ಲಿ ಅಂತರ್ಯುದ್ಧ ನಡೆದಾಗ ಮಾವೋ ನೇತೃತ್ವದ ಕಮ್ಯುನಿಸ್ಟ್ ಸೇನೆ ಚಿಯಾಂಗ್ ಪಡೆಯನ್ನು ಹೊರದಬ್ಬಿತ್ತು. ತನ್ನ ಬೆಂಬಲಿಗರ ಜೊತೆ ಚಿಯಾಂಗ್ ಬಂದು ಸೇರಿದ್ದು ಇದೇ ತೈವಾನ್ ಅನ್ನು. ಮಾವೋ ವಶದಲ್ಲಿದ್ದ ಚೀನಾ ಮುಖ್ಯ ಭೂಭಾಗ ಕಮ್ಯೂನಿಸ್ಟರಿಗೆ ನೆಲೆ ಕೊಟ್ಟಿದ್ದರೆ, ತೈವಾನ್ 'ರಿಪಬ್ಲಿಕ್ ಆಫ್ ಚೀನಾ' ಆಗಿ ಉಳಿಯಿತು. ಬಳಿಕ ಚೀನಾ ಹಾಗೇ ತೈವಾನ್ ಮಧ್ಯೆ ನಿರಂತರ ಘರ್ಷಣೆಗಳು ನಡೆದಿದ್ದವು.

ತೈವಾನ್ ಕೂಡ ಚೀನಾ ಪಾಲಾಗುತ್ತಿತ್ತು ತೈವಾನ್ ಕೂಡ ಚೀನಾ ಪಾಲಾಗುತ್ತಿತ್ತು ಲೀ ಟೆಂಗ್ ಹೂಯಿ ಇರದೇ ಇದ್ದಿದ್ದರೆ ತೈವಾನ್‌ ಸ್ವಾಭಿಮಾನದ ಉಳಿವಿನ ಪ್ರಶ್ನೆ ಉದ್ಭವಿಸುತ್ತಲೇ ಇರಲಿಲ್ಲ. ಏಕೆಂದರೆ ಇಷ್ಟೊತ್ತಿಗೆ ಹಾಂಕಾಂಗ್ ರೀತಿಯಲ್ಲೇ ತೈವಾನ್ ಕೂಡ ಚೀನಾ ಪಾಲಾಗುತ್ತಿತ್ತು.

ಆದರೆ ತೈವಾನ್‌ನ 'ಮಿಸ್ಟರ್ ಡೆಮಾಕ್ರಸಿ' ಎಂದು ಕರೆಸಿಕೊಳ್ಳುವ ಲೀ ಟೆಂಗ್ ಹೂಯಿ, 90ರ ದಶಕದಲ್ಲಿ ಹಲವಾರು ಕ್ರಾಂತಿಕಾರಿ ಬದಲಾವಣೆ ತಂದರು. ಇವರ ಪರಿಶ್ರಮದಿಂದ 1996ರಲ್ಲಿ ತೈವಾನ್ ಪೂರ್ಣ ಪ್ರಜಾಪ್ರಭುತ್ವದತ್ತ ತಿರುಗಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+