ಪಾಕಿಸ್ತಾನಕ್ಕೆ 25 ಜೆ-10ಸಿ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ನೀಡಲಿದೆ ಚೀನಾ

ಬೀಜಿಂಗ್, ಫೆಬ್ರವರಿ 22: ಪಾಕಿಸ್ತಾನಕ್ಕೆ ಎಲ್ಲಾ ವಿಧದಿಂದಲೂ ಸಹಾಯ ಮಾಡುತ್ತಲೇ ಬಂದಿರುವ ಚೀನಾ ಇದೀಗ ಯುದ್ಧ ವಿಮಾನಗಳನ್ನು ನೀಡಲು ನಿರ್ಧರಿಸಿದೆ.

ಅತ್ಯಾಧುನಿಕ 25 ಜೆ-10ಸಿ ಯುದ್ಧ ವಿಮಾನಗಳನ್ನು ಚೀನಾ ತನ್ನ ಮಿತ್ರರಾಷ್ಟ್ರ ಪಾಕಿಸ್ತಾನಕ್ಕೆ ಮುಂದಿನ ಕೆಲ ವಾರಗಳಲ್ಲಿ ಹಸ್ತಾಂತರಿಸಲಿದೆ.ಚೆಂಗ್ಡು ಏರೋಸ್ಪೇಸ್ ಕಾರ್ಪೊರೇಶನ್‌ ನಿರ್ಮಿತ ಮೊದಲ ಬ್ಯಾಚ್ ಯುದ್ಧ ವಿಮಾನವನ್ನು ಚೆಂಗ್ಡುವಿನಲ್ಲಿ ಪರೀಕ್ಷಿಸಲಾಗುತ್ತಿದೆ.

ಪಾಕಿಸ್ತಾನದ ವಾಯುಪಡೆಯ ಪೈಲಟ್‌ಗಳು ಮತ್ತು ತಂತ್ರಜ್ಞರು ಟ್ರೈನಿಂಗ್ ಪೂರ್ಣಗೊಳಿಸಿದ ನಂತರ ವಿಮಾನಗಳನ್ನು ಪಾಕಿಸ್ತಾನಕ್ಕೆ ವರ್ಗಾಯಿಸುತ್ತದೆ ಎಂದು ಚೀನಾದ ಮಿಲಿಟರಿ ಪ್ರಕಟಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರೊಬ್ಬರು ಮಾಹಿತಿ ನೀಡಿದ್ದಾರೆ ಎಂದು ಫೈನಾನ್ಶಿಯಲ್ ಟೈಮ್ಸ್ ವರದಿಯಲ್ಲಿ ಹೇಳಿದೆ.

China To Provide J-10C Fighter Jets To Pakistan

ಪಾಕಿಸ್ತಾನದ ವಾಯುಪಡೆಯ ಗುರುತು ಹೊಂದಿರುವ ಜೆ10 ಫೈಟರ್ ಜೆಟ್‌ನ ಚಿತ್ರಗಳು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು ಮತ್ತು ಮಾಧ್ಯಮಗಳು ಅವುಗಳನ್ನು ಬಿತ್ತರಿಸಿದ್ದವು.

ಪಾಕಿಸ್ತಾನದ ವಾಯುಪಡೆಯ ಫೈಲಟ್‌ಗಳು ಮತ್ತು ತಂತ್ರಜ್ಞರು ವಿಮಾನದ ಕುರಿತು ಮಾಹಿತಿ ಪಡೆಯುವ ಕಾರ್ಯ ಪೂರ್ಣಗೊಂಡ ಬಳಿಕ, ಚೀನಾವು ಪಾಕಿಸ್ತಾನಕ್ಕೆ ವಿಮಾನಗಳನ್ನು ವರ್ಗಾಯಿಸಲಿದೆ ಎಂದು ಚೀನಾದ ಮಿಲಿಟರಿ ಪ್ರಕಟಣೆಯಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರೊಬ್ಬರು ಮಾಹಿತಿ ನೀಡಿದ್ದಾರೆ.

ಈ ಯುದ್ಧ ವಿಮಾನಗಳು ಪಾಕಿಸ್ತಾನದ ವಾಯು ಪ್ರದೇಶದ ರಕ್ಷಣೆ ಹಾಗೂ ಮಿಲಿಟರಿ ಸಾಮರ್ಥ್ಯ ವೃದ್ಧಿಗೆ ನೆರವಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಚೀನಾದ ವಿಶ್ಲೇಷಕರು ಉಭಯ ದೇಶಗಳ ನಡುವಿನ ಇತ್ತೀಚಿನ ರಕ್ಷಣಾ ಸಹಕಾರವನ್ನು ಶ್ಲಾಘಿಸಿದ್ದಾರೆ. ಈ ಕ್ರಮವು ಪಾಕಿಸ್ತಾನದ ಮಿಲಿಟರಿಯ ಯುದ್ಧ ಸಾಮರ್ಥ್ಯಗಳನ್ನು ಹೆಚ್ಚಿಸುವುದು, ಚೀನಾದ ವಾಯುಯಾನ ಉಪಕರಣಗಳನ್ನು ಉತ್ತೇಜಿಸುವುದು ಮತ್ತು ಅವರ ಭದ್ರತಾ ಹಿತಾಸಕ್ತಿಗಳಿಗೆ ಪ್ರತಿಕ್ರಿಯಿಸುವ ವಿಷಯದಲ್ಲಿ ಹೆಚ್ಚಿನ ಮಹತ್ವವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ವಾಯು ಪ್ರದೇಶದ ರಕ್ಷಣೆ ಮತ್ತು ಮಿಲಿಟರಿ ಸಾಮರ್ಥ್ಯ ವೃದ್ಧಿಗೆ ನೆರವಾಗಲಿ ಎಂದು ಜೆ10ಸಿ ಯುದ್ಧ ವಿಮಾನಗಳನ್ನು ಚೀನಾ ಪಾಕಿಸ್ತಾನಕ್ಕೆ ನೀಡುತ್ತಿದೆ ಎಂದು ಬ್ರಿಟನ್ ನ ಫೈನಾನ್ಶಿಯಲ್ ಟೈಮ್ಸ್ ವರದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+