ಭಾರತದೊಂದಿಗಿನ ಗಡಿ ವಿವಾದವನ್ನು ಸೂಕ್ತ ರೀತಿಯಲ್ಲಿ ಬಗೆಹರಿಸಿಕೊಳ್ಳುತ್ತೇವೆ: ಚೀನಾ
ಬೀಜಿಂಗ್, ಜೂನ್ 5: ಭಾರತದೊಂದಿಗಿನ ಗಡಿ ವಿವಾದವನ್ನು ಸೂಕ್ತ ರೀತಿಯಲ್ಲಿ ಬಗೆಹರಿಸಿಕೊಳ್ಳುತ್ತೇವೆ ಎಂದು ಚೀನಾ ಹೇಳಿದೆ.
ಎರಡೂ ಸೇನೆಯ ಲೆಫ್ಟಿನೆಂಟ್ ಜನರಲ್‌ಗಳ ನೇತೃತ್ವದಲ್ಲಿ ಶನಿವಾರ ಭಾರತ ಮತ್ತು ಚೀನಾ ಮಿಲಿಟರಿ ನಡುವೆ ಸುದೀರ್ಘ ಚರ್ಚೆ ನಡೆಯಲಿದೆ.
ಭಾರತದಲ್ಲಿ ತನ್ನ ಹೂಡಿಕೆ ಪಾಲನ್ನು ಹೆಚ್ಚಿಸಿರುವ ಚೀನಾ, ಏನಿದ್ರೂ ಲಕ್ಷ-ಲಕ್ಷ ಕೋಟಿ ವ್ಯವಹಾರ
ಪೂರ್ವ ಲಡಾಖ್‌ನಲ್ಲಿ ಒಂದು ತಿಂಗಳಿಂದ ಎದುರಾಗಿರುವ ಸಂಘರ್ಷಮಯ ಸನ್ನಿವೇಶವನ್ನು ಕೊನೆಗೊಳಿಸುವ ನಿರ್ದಿಷ್ಟ ಪ್ರಸ್ತಾಪಗಳ ಬಗ್ಗೆ ಎರಡೂ ಕಡೆಯವರು ಮತ್ತೆ ಚರ್ಚಿಸುವ ಸಾಧ್ಯತೆ ಇದೆ.
ಭಾರತ ಮತ್ತು ಚೀನಾ ನಡುವೆ ಗಡಿಯಲ್ಲಿ ಸೃಷ್ಟಿಯಾಗಿರುವ ಸಂಘರ್ಷಮಯ ವಾತಾವರಣದ ನಿವಾರಣೆಗಾಗಿ ಎರಡೂ ದೇಶಗಳ ರಾಜತಾಂತ್ರಿಕ ಅಧಿಕಾರಿಗಳ ನಡುವೆ ಶನಿವಾರ ಸಮಾಲೋಚನೆ ಸಭೆ ನಿಗಧಿಯಾಗಿರುವ ಹಿನ್ನೆಲೆಯಲ್ಲೇ ಚೀನಾ ಗಡಿ ಸಂಬಂಧಿತ ಸಮಸ್ಯೆಯನ್ನು ಸೂಕ್ತ ರೀತಿಯಲ್ಲಿ ಬಗೆಹರಿಸಿಕೊಳ್ಳಲು ಸಿದ್ಧರಾಗಿದ್ದೇವೆ ಎಂದು ಚೀನಾ ಹೇಳಿದೆ.
ಭಾರತ ಮತ್ತು ಚೀನಾ ನಡುವೆ ಶನಿವಾರ ನಡೆಯುತ್ತಿರುವ ಮಿಲಿಟರಿ ಅಧಿಕಾರಿ ಮಟ್ಟದ ಸಭೆಯ ಕುರಿತು ಉತ್ತರಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಗಡಿಗೆ ಸಂಬಂಧಿಸಿದಂತೆ ನಾವು ಪೂರ್ಣ ಪ್ರಮಾಣದ ಕಾರ್ಯ ವಿಧಾನಗಳನ್ನು ಹೊಂದಿದ್ದೇವೆ. ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ನಾವು ಸಂವಹನ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
ಚೀನಾ ಮತ್ತು ಭಾರತದ ನಡುವಿನ ಗಡಿ ಪ್ರದೇಶದ ಪರಿಸ್ಥಿತಿ ಒಟ್ಟಾರೆ ಸ್ಥಿರವಾಗಿದೆ ಮತ್ತು ನಿಯಂತ್ರಣದಲ್ಲಿದೆ ಎಂದು ತಿಳಿಸಿದ್ದಾರೆ.
ಗಡಿಗೆ ಸಂಬಂಧಿಸಿದ ವಿಚಾರಗಳನ್ನು ಕುಳಿತು ಶಾಂತ ರೀತಿಯಲ್ಲಿ ಬಗೆಹರಿಸಿಕೊಳ್ಳಲು ಸಿದ್ಧರಾಗಿದ್ದೇವೆ ಎಂಬ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.