ಚೀನಾದಲ್ಲಿ ಫೇಮಸ್ ಆದ ವಾಕಿಂಗ್ ರೋಬೋ ನಾಯಿಗಳು: ಬೆಲೆ ಎಷ್ಟು ಗೊತ್ತಾ?
ಸಾಮಾನ್ಯವಾಗಿ
ಜನರು ನಾಯಿಯನ್ನು ಹೊಂದಲು ತುಂಬಾ ಇಷ್ಟಪಡುತ್ತಾರೆ. ಹೀಗಾಗಿ ಪ್ರತಿ ಮನೆಯಲ್ಲೂ ನಾಯಿ ಕಾಣಿಸಿಕೊಳ್ಳುತ್ತವೆ. ಸಮಯ ಸಿಕ್ಕಾಗಲೆಲ್ಲಾ ಅವುಗಳೊಂದಿಗೆ ವಾಕಿಂಗ್, ಜಾಗಿಂಗ್, ಗೇಮ್ಸ್ ಆಡುವವರನ್ನ ನಾವು ನೋಡಿದ್ದೇವೆ. ಹೀಗೆ ನಾಯಿಯೊಂದಿಗಿನ ಜನರ ಭಾವನಾತ್ಮಕ ಸಂಬಂಧ ತುಂಬಾ ಆಳವಾಗಿರುತ್ತದೆ. ನಮ್ಮಂತೆಯೇ ನೆರೆಯ ಚೀನಾದಲ್ಲಿಯೂ ನಾಯಿ ಪ್ರಿಯರಿದ್ದಾರೆ. ಆದರೆ ಆ ನಾಯಿಗಳನ್ನು ಕಂಡು ಜನ ಶಾಕ್ ಆಗಿದ್ದಾರೆ. ಯಾಕೆ ಗೊತ್ತಾ? ಇವು ನಿಜವಾದ ನಾಯಿಗಳಲ್ಲ. ಬದಲಿಗೆ ಅವು ರೋಬೋಟಿಕ್ ನಾಯಿಗಳು. id="toptextpromo"> id='are-slot-1' class='oiad oi-axt oiadv'>ಹೌದು!
ಜಗತ್ತು ವಿಜ್ಞಾನದಲ್ಲಿ ಎಷ್ಟರಮಟ್ಟಿಗೆ ಮುನ್ನಡೆದಿದೆ ಎಂಬುದಕ್ಕೆ ಚೀನಾದ ಈ ರೋಬೋಟಿಕ್ ನಾಯಿಗಳೇ ಸಾಕ್ಷಿ. ಇಲ್ಲಿ ಜನರು ರೋಬೋಟಿಕ್ಸ್ ನಾಯಿಗಳನ್ನು ಹೊಂದಿದ್ದಾರೆ. ಇದು ಯುವ ಪೀಳಿಗೆಯ ಹವ್ಯಾಸವಾಗಿದೆ. ವಿಜ್ಞಾನದ ವಿಷಯದಲ್ಲಿ ಜಗತ್ತು ಸಾಕಷ್ಟು ಪ್ರಗತಿ ಸಾಧಿಸಿದೆ. ಚೀನಾದಲ್ಲಿ ಇದೇ ರೀತಿಯ ತಂತ್ರಜ್ಞಾನ ಕಾಣಬಹುದು, ಅಲ್ಲಿ ಜನರು ನಿಜವಾದ ನಾಯಿಗಳ ಬದಲಿಗೆ ರೋಬೋಟಿಕ್ ನಾಯಿಗಳನ್ನು ಸಾಕಲು ಬಯಸುತ್ತಾರೆ. ಆರೈಕೆಗೆ ತುಂಬಾ ಸುಲಭವಾದ ಈ ರೋಬೋಟ್ ಶ್ವಾನಗಳನ್ನು ಚೀನಿಯರು ಹೆಚ್ಚು ಇಷ್ಟಪಟ್ಟು ಸಾಕುತ್ತಿದ್ದಾರೆ. id='are-slot-2' class='oiad oi-axt oiadv'>
ನಿಜವಾದ ನಾಯಿಯ ಬದಲಿಗೆ ರೋಬೋಟ್ ನಾಯಿ
ಸಾಮಾನ್ಯವಾಗಿ ಜನರು ನಾಯಿಗಳನ್ನು ಮನುಷ್ಯರಂತೆ ಪ್ರೀತಿಯಿಂದ ಸಾಕುತ್ತಾರೆ. ಪ್ರೀತಿ ಕೊಟ್ಟಿದ್ದಕ್ಕಿಂತ ಹೆಚ್ಚಾಗಿ ನಾಯಿಗಳು ಮನೆಯ ಸದಸ್ಯರ ಮೇಲೆ ಪ್ರೀತಿ ಕಾಳಜಿ ಹೊಂದಿರುತ್ತವೆ. ಆ ನಾಯಿಗಳ ಸ್ಥಾನ ಯಾವುದೇ ಕುಟುಂಬದ ಸದಸ್ಯರಿಗಿಂತ ಕಡಿಮೆಯಿರುವುದಿಲ್ಲ. ಆದರೆ ಚೀನಾದಲ್ಲಿ ರೋಬೋಟ್ ನಾಯಿಗಳು ನಿಜವಾದ ನಾಯಿಗಳ ಸ್ಥಾನವನ್ನು ಪಡೆದುಕೊಳ್ಳುತ್ತಿವೆ. ಅವುಗಳಿಗೆ ಭಾವನೆಗಳು ತಿಳಿದಿಲ್ಲ, ಆದರೆ ಜನರು ಅವುಗಳನ್ನು ತೋರಿಕೆಗಾಗಿ ಬಹಳಷ್ಟು ಇಷ್ಟಪಡುತ್ತಿರುವುದಂತು ಸುಳ್ಳಲ್ಲ.

ರೋಬೋಟ್ ಶ್ವಾನಗಳ ಆರೈಕೆ ತುಂಬಾ ಸುಲಭ
ಈ ರೋಬೋಟ್ ಶ್ವಾನಗಳ ಜೊತೆಗಿನ ಚಿತ್ರಗಳನ್ನು ಅನೇಕರು ಪೋಸ್ಟ್ ಮಾಡುತ್ತಿದ್ದು, ಅವು ತುಂಬಾ ವೈರಲ್ ಆಗುತ್ತಿವೆ. ಯುವ ಪೀಳಿಗೆ ಕೂಡ ತಮ್ಮ ಅಗತ್ಯಕ್ಕೆ ಅನುಗುಣವಾಗಿ ಈ ನಾಯಿಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಅಲ್ಲದೆ, ಈ ನಾಯಿಗಳಿಗೆ ಹೆಚ್ಚಿನ ಬೇಡಿಕೆಯೂ ಇದೆ.
ತೋರಿಕೆಗಾಗಿ ಜನರು ಈ ನಾಯಿಗಳನ್ನು ಇಷ್ಟಪಡುತ್ತಿದ್ದಾರೆ, ಜೊತೆಗೆ ಅವುಗಳ ನಿರ್ವಹಣೆ ವೆಚ್ಚವೂ ತುಂಬಾ ಕಡಿಮೆಯಾಗಿದೆ. ಯಾಕೆಂದರೆ ಅವು ಏನನ್ನು ತಿನ್ನುವುದಿಲ್ಲ, ಕುಡಿಯುವುದಿಲ್ಲ, ಮತ್ತೊಂದು ಪ್ರಮುಖ ವಿಚಾರ ಅಂದರೆ ಅವುಗಳ ಸ್ವಚ್ಛತೆ ಅವಶ್ಯಕತೆ ಇಲ್ಲ. ಮಾತ್ರವಲ್ಲದೆ ಅವುಗಳೊಂದಿಗೆ ಹೆಚ್ಚು ಸಮಯ ಕಳೆಯುವ ಅಗತ್ಯವಿಲ್ಲ.

ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ವೈರಲ್
ಈ ರೋಬೋಟಿಕ್ ನಾಯಿಗಳನ್ನು 'ಬೋಸ್ಟನ್ ಡೈನಾಮಿಕ್ಸ್' ಎಂಬ ಕಂಪನಿಯು ತಯಾರಿಸಿದೆ. ಕಂಪನಿಯವರೇ ತಯಾರಿಸಿದ ಈ ಯಾಂತ್ರಿಕ ನಾಯಿಗಳ ಬಗ್ಗೆ ಜನರೂ ತುಂಬಾ ಇಷ್ಟಪಡುತ್ತಾರೆ. ಜನರು ಈ ರೋಬೋಟ್ ನಾಯಿಗಳೊಂದಿಗೆ ತಿರುಗಾಡುತ್ತಿದ್ದಾರೆ ಮತ್ತು ಅದರ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ರೋಬೋಟ್ ಶ್ವಾನಗಳ ಬೆಲೆ ಹೀಗಿದೆ
ಚೀನಾದ ಸ್ಥಳೀಯ ಪತ್ರಿಕೆಯ ಸುದ್ದಿ ಪ್ರಕಾರ, ಈ ರೋಬೋಟಿಕ್ ನಾಯಿಗಳು 5 ಕೆಜಿಯಷ್ಟು ತೂಕವನ್ನು ಎತ್ತಬಲ್ಲವು. ಅಲ್ಲದೆ, ಈ ನಾಯಿಗಳ ಬೆಲೆಯ ಬಗ್ಗೆ ನಾವು ಮಾತನಾಡಿದರೆ, ಅವುಗಳ ಬೆಲೆಯನ್ನು 1.72 ಲಕ್ಷದಿಂದ 11.50 ಲಕ್ಷದವರೆಗೆ ಇದೆ. ರೋಬೋಟ್ ಶ್ವಾನಗಳನ್ನು ಒಮ್ಮೆ ಚಾರ್ಜ್ ಮಾಡಿದರೆ ಸಾಕು. ನಂತರ ಅದು 45 ನಿಮಿಷಗಳ ಕಾಲ ಸಕ್ರಿಯವಾಗಿರುತ್ತದೆ. ಒಟ್ಟಿನಲ್ಲಿ ಚೀನಾದ ಮಂದಿ ಸದ್ಯ ಭಾವನೆಗಳಿಲ್ಲದ ಈ ರೊಬೊಟಿಕ್ಸ್ ಶ್ವಾನಗಳನ್ನು ಹೆಚ್ಚು ಇಷ್ಟಪಟ್ಟು ಖರೀದಿ ಮಾಡುತ್ತಿರುವುದು ಇವುಗಳ ಫೋಟೋಗಳು ವೈರಲ್ ಆಗುತ್ತಿರುವುದು ಜನರನ್ನು ಆಶ್ಚರ್ಯಗೊಳಿಸಿದೆ.












Click it and Unblock the Notifications