ಚೀನಾದ ಮಂಗಳ ನೌಕೆ ಕಳಿಸಿದ ಭೂಮಿ- ಚಂದ್ರನ ಚಿತ್ರ

ಬೀಜಿಂಗ್, ಜುಲೈ 29: ಕೊರೊನಾವೈರಸ್ ಸೋಂಕು, ಆರ್ಥಿಕ ಬಿಕ್ಕಟ್ಟಿನ ನಡುವೆ ಮಂಗಳಯಾನ ಆರಂಭಿಸಿರುವ ಚೀನಾ ಇದೆ ಮೊದಲ ಬಾರಿಗೆ ಭೂಮಿ ಹಾಗೂ ಚಂದ್ರನ ಕಪ್ಪು-ಬಿಳಿಪಿನ ಚಿತ್ರವನ್ನು ಹಂಚಿಕೊಂಡಿದೆ ಎಂದು ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ(ಸಿಎನ್ ಎಸ್ಎ) ಹೇಳಿದೆ.

Recommended Video

      Rafael fighter jet lands in India | Oneindia Kannada

      ತೈಯಾನ್ವೆನ್ 1 ಅಥವಾ ಕ್ವೆಸ್ಟ್ ಫಾರ್ ಹೆವೆನ್ಲಿ ಟ್ರೂಥ್ 1 ಹೆಸರಿನ ಮಂಗಳಯಾನ ನೌಕೆಯು ಸುಮಾರು 1.2 ಮಿಲಿಯನ್ ಕಿ. ಮೀ ದೂರದಿಂದ ಈ ಚಿತ್ರ ತೆಗೆದು ಕಳಿಸಿದೆ.

      China’s First Ever Mars Mission, Captures Pic of Earth & Moon

      ಜುಲೈ 23ರಂದು ದಕ್ಷಿಣ ದ್ವೀಪದ ಹೈನಾನ್‌ನ ವೆನ್‌ಚಾಂಗ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಲಾಂಗ್ ಮಾರ್ಚ್ ರಾಕೆಟ್ ವೈ -4 ವಾಹಕದ ಮೂಲಕ ತೈಯಾನ್ವೆನ್ 1 ಗಗನನೌಕೆಯನ್ನು ನಭಕ್ಕೆ ಕಳಿಸಲಾಯಿತು. ಭೂಮಿಯಿಂದ 400 ಮಿಲಿಯನ್ ಕಿ.ಮೀ ದೂರದಲ್ಲಿರುವ ಗ್ರಹ ಬಗ್ಗೆ ತಿಳಿಯಲು ಆರ್ಬಿಟರ್, ಲ್ಯಾಂಡರ್ ಹಾಗೂ ರೋವರ್ ವುಳ್ಳ ತೈಯಾನ್ವೆನ್ 1 ಪ್ರಯಾಣ ಮುಂದುವರೆಸಿದೆ.

      ಭಾರತ, ಯುಎಸ್, ರಷ್ಯಾ ಹಾಗೂ ಯುರೋಪಿಯನ್ ಯೂನಿಯನ್ ಬಳಿಕ ಮಂಗಳಯಾನಕ್ಕೆ ಚೀನಾ ಕೈ ಹಾಕಿದೆ. ಮಂಗಳದ ಮಾರ್ಷಿಯನ್ ಭಾಗದಲ್ಲಿ ಬಾಹ್ಯಾಕಾಶ ನೌಕೆಯನ್ನು ಕೆಳಗಿಳಿಸಿದ ಪ್ರಥಮ ಸಾಧನೆಯನ್ನು ಭಾರತ ಮಾಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+