ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರನ ಸ್ಯಾಂಪಲ್: ರಷ್ಯಾ, ಅಮೆರಿಕ ನಂತರ ಚೀನಾ ಸಾಧನೆ

|
Google Oneindia Kannada News

ಬೀಜಿಂಗ್, ಡಿ. 6: ಚಂದ್ರನ ಮೇಲ್ಭಾಗದ ಮಣ್ಣಿನ ಮಾದರಿಗಳನ್ನು ಸಂಗ್ರಹಿಸುವ ಚೀನಾದ ಐತಿಹಾಸಿಕ ಯೋಜನೆ ಯಶಸ್ವಿಯಾಗಿದೆ. ಚೀನಾದ ಮಾನವ ರಹಿತ ಬಾಹ್ಯಾಕಾಶ ನೌಕೆ ''ಚಾಂಗಿ-5'' ಚಂದ್ರನ ಮೇಲಿನ ಶಿಲೆ, ಮಣ್ಣು ಸಂಗ್ರಹಿಸಿ ಆರ್ಬಿಟರ್‌ಗೆ ರವಾನಿಸಿದೆ . ಚಂದ್ರನ ಅಂಗಳದಿಂದ ಈ ಸ್ಯಾಂಪಲ್ ಹೊತ್ತ ಗಗನನೌಕೆ ಈಗ ಭೂಮಿಯತ್ತ ಮುಖ ಮಾಡಿದೆ.

ನವೆಂಬರ್ 24ರಂದು ಚೀನಾ ತನ್ನ 'ಚಾಂಗ್- 5 ಪ್ರೋಬ್' ನೌಕೆಯನ್ನು ಉಡಾವಣೆ ಮಾಡಿತ್ತು. ಈ ಮಾನವರಹಿತ ನೌಕೆಗೆ ಚೀನಾದ ಪೌರಾಣಿಕ ದೇವತೆಯ ಹೆಸರನ್ನು ಇಡಲಾಗಿತ್ತು. ಚಂದ್ರನ ಉಗಮದ ಕುರಿತಾದ ರಹಸ್ಯವನ್ನು ತಿಳಿಯಲು ವಿಜ್ಞಾನಿಗಳಿಗೆ ಅನುಕೂಲವಾಗುವಂತೆ ಈ ನೌಕೆಯು ಚಂದ್ರನ ಮೇಲ್ಭಾಗದಲ್ಲಿನ ವಸ್ತುಗಳನ್ನು ಸಂಗ್ರಹಿಸಿದೆ.

Chinas Change 5 completes mission returning back to Earth

ಚಂದ್ರನ ಅಂಗಳದಲ್ಲಿ ಮತ್ತಷ್ಟು ನೀರು: ನಾಸಾ ಅಧ್ಯಯನಚಂದ್ರನ ಅಂಗಳದಲ್ಲಿ ಮತ್ತಷ್ಟು ನೀರು: ನಾಸಾ ಅಧ್ಯಯನ

ಚಂದ್ರನ ಓಷನ್ ಆಫ್ ಸ್ಟಾರ್ಮ್ಸ್ ಎಂದು ಕರೆಯಲಾಗುವ ಅಪಾರ ಲಾವಾ ಕೇಂದ್ರಿತ ಪ್ರದೇಶಕ್ಕೆ ಇದುವರೆಗೂ ಯಾವ ನೌಕೆಯೂ ಕಾಲಿರಿಸಿರಲಿಲ್ಲ. ಇದೇ ಮೊದಲ ಬಾರಿಗೆ ಚೀನಾದ ನೌಕೆ ಅಲ್ಲಿಗೆ ತೆರಳಿದ್ದು, ಸುಮಾರು 2 ಕೆಜಿಯಷ್ಟು ಕಲ್ಲು, ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ತರುತ್ತಿದೆ. ಈ ಮೂಲಕ ಅಮೆರಿಕ ಮತ್ತು ಸೋವಿಯತ್ ರಷ್ಯಾದ ಬಳಿಕ ಚಂದ್ರನ ಮಾದರಿಗಳನ್ನು ತಂದ ಮೂರನೇ ದೇಶ ಎನಿಸಿಕೊಂಡಿದೆ.

Chinas Change 5 completes mission returning back to Earth

ಚಂದ್ರನ ಮೇಲೆ ಇಳಿದ ಬಳಿಕ ಲ್ಯಾಂಡರ್ ವಾಹನವು ತನ್ನ ರೋಬೋಟಿಕ್ ಕೈಗಳಿಂದ ಚಂದ್ರನ ನೆಲವನ್ನು ಅಗೆದು, ಮಣ್ಣು ಮತ್ತು ಕಲ್ಲಿನ ಮಾದರಿಗಳನ್ನು ಏರಿಕೆ ವಾಹನಕ್ಕೆ ತುಂಬಿಸಿದೆ. ಅದು ಆರ್ಬಿಟಿಂಗ್ ಮಾಡ್ಯುಲ್‌ಗೆ ಸೇರಿಸಿದೆ. ಸುಮಾರು ಎರಡು ದಿನಗಳ ಕಾಲ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಗಗನನೌಕೆ ಬಳಿಕ ಚೀನಾದ ಮಂಗೋಲಿಯಾ ಪ್ರದೇಶಕ್ಕೆ ಮರಳಲಿದೆ ಎಂದು ಚೀನಾ ನ್ಯಾಷನಲ್‌ ಸ್ಪೇಸ್‌ ಅಡ್ಮಿನಿಸ್ಟ್ರೇಷನ್‌ (ಸಿಎನ್‌ಎಸ್‌ಎ) ಹೇಳಿದೆ.

English summary
China’s Chang’e-5 mission completed a tricky docking maneuver on Saturday, as it prepares to return the soil samples it collected from the Moon’s surface back to Earth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X