ಆಲಿಬಾಬಾ ಸಾಮ್ರಾಜ್ಯಕ್ಕೆ ಗುಡ್ ಬೈ ಹೇಳಿದ ಜಾಕ್ ಮಾ

ಬೀಜಿಂಗ್, ಸೆಪ್ಟೆಂಬರ್ 10: ಇ-ಕಾಮರ್ಸ್, ರಿಟೇಲ್, ಇಂಟರ್ನೆಟ್ ಮತ್ತು ತಂತ್ರಜ್ಞಾನ ಸೇರಿದಂತೆ ಬೇರೆ ಬೇರೆ ಉದ್ಯಮಗಳಿಗೆ ಹೆಸರಾದ ಆಲಿಬಾಬ ಗ್ರೂಪ್ ನ ಸಂಸ್ಥಾಪಕ ಅಧ್ಯಕ್ಷ ಜಾಕ್ ಮಾ ತಮ್ಮ ಹುದ್ದೆಯಿಂದ ಕೆಳಗಿಳಿದ್ದಾರೆ.

ಸೆಪ್ಟೆಂಬರ್ 10 ರಂದು ತಮ್ಮ 55 ನೇ ಹುಟ್ಟುಹಬ್ಬ ಆಚರಿಸಿಕೊಂಡ ಜಾಕ್ ಮಾ ತಮ್ಮ ನಿವೃತ್ತಿಯ ಬಗ್ಗೆ ಹೇಳಿದ್ದು, ಅಧಿಕೃತವಾಗಿ ಅವರು ತಮ್ಮ ಸ್ಥಾನದಿಂದ ಕೆಳಗಿಳಿದ್ದಾರೆ.

42 ಬಿಲಿಯನ್ ಅಮೆರಿಕನ್ ಡಾಲರ್(30,18,47,70,00,00 ರೂ.) ಮೌಲ್ಯದ ಆಸ್ತಿಯನ್ನು ಹೊಂದಿರುವ ಜಾಕ್ ಮಾ ಅಥವಾ ಮಾ ಯುನ್ ಚೀನಾದ ವಾಣಿಜ್ಯೋದ್ಯಮದ ಜಾಗತಿಕ ರಾಯಭಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ.

Chinas Alibaba Founder Jack Ma Steps Down

2016 ರಲ್ಲಿ ಏಷ್ಯಾದ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿ ಗಳಿಸಿದ್ದ ಅಲಿಬಾಬಾ ಅವರು ಕೆಲಸ ಹುಡುಕುತ್ತಿದ್ದ ಸಮಯದಲ್ಲಿ ಕೆಎಫ್ ಸಿಯಲ್ಲಿ ಕೆಲಸಕ್ಕೆಂದು ಅರ್ಜಿ ಹಾಕಿದ್ದರು. ಆದರೆ ಅವರ ಅರ್ಜಿಯನ್ನು ಕೆಎಫ್ ಸಿ ತಿರಸ್ಕರಿಸಿತ್ತು. ಪ್ರಸ್ತುತ ಕೆಎಫ್ ಸಿಯಲ್ಲಿ ಜಾಕ್ ಮಾ ಕಂಪನಿ ಅಲಿಬಾಬಾದ ಸಾಕಷ್ಟು ಶೇರುಗಳಿವೆ!

ಸ್ಟಾರ್ಟ್ ಅಪ್ ಬಿಸಿನೆಸ್ ಗಳಿಗೆ ಸ್ಫೂರ್ತಿ ಎನ್ನಿಸಿರುವ ಜಾಕ್ ಮಾ ಅವರು ಹಾರ್ವರ್ಡ್ ಬಿಸಿನೆಸ್ ಸ್ಕೂಲ್ ನಲ್ಲಿ ಓದಲು ಹತ್ತು ಬಾರಿ ನಡೆಸಿದ ಪ್ರಯತ್ನವನ್ನೂ ವಿಶ್ವವಿದ್ಯಾಲಯ ತಿರಸ್ಕರಿಸಿತ್ತು. ಆದರೆ ಅವರು ಈಗ ಫೋರ್ಬ್ಸ್ ನ ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ 21 ನೇ ಸ್ಥಾನದಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+