India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ ಪ್ರತಿ ದಂಪತಿ 3 ಮಕ್ಕಳನ್ನು ಹೊಂದಲು ಅವಕಾಶ

|
Google Oneindia Kannada News

ಚೀನಾದಲ್ಲಿ ಕುಟುಂಬ ಯೋಜನೆ ನಿಯಮವನ್ನು ಸಡಿಲಗೊಳಿಸಲಾಗಿದ್ದು, ಪ್ರತಿ ದಂಪತಿ 3 ಮಕ್ಕಳನ್ನು ಹೊಂದಬಹುದು ಎಂದು ಸರ್ಕಾರ ಹೇಳಿದೆ. ಜನಗಣತಿಯ ಮಾಹಿತಿ ಪ್ರಕಾರ ಜನನ ಪ್ರಮಾಣದಲ್ಲಿ ಕುಸಿತ ಕಂಡುಬಂದಿರುವ ಹಿನ್ನೆಲೆಯಲ್ಲಿ ಪ್ರತಿ ದಂಪತಿ ಮೂರು ಮಕ್ಕಳನ್ನು ಹೊಂದಲು ಅನುಮತಿ ನೀಡಲಾಗುವುದು ಎಂದು ಚೀನಾ ಹೇಳಿದೆ.

ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನೇತೃತ್ವದಲ್ಲಿ ಸೋಮವಾರ ನಡೆದ ಪೊಲಿಟ್‌ಬ್ಯುರೊ ಸಭೆಯಲ್ಲಿ ಈ ನೀತಿಗೆ ಬದಲಾವಣೆಯನ್ನು ಅಂಗೀಕರಿಸಲಾಗಿದೆ. ಆದರೆ ಈ ಬದಲಾವಣೆ ಯಾವಾಗ ಜಾರಿಗೆ ಬರುತ್ತದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ.

ಇತ್ತೀಚಿನ ಜನಗಣತಿ ಮಾಹಿತಿ ಪ್ರಕಾರ 1950ರ ದಶಕದಲ್ಲಿ ಚೀನಾದ ಜನಸಂಖ್ಯೆಯು ನಿಧಾನವಾಗಿ ಬೆಳೆಯಿತು ಜನಸಂಖ್ಯೆಯು ಕೇವಲ 0.53ರಷ್ಟು ಏರಕೆಯಾಗಿ, 1.41178 ಬಿಲಿಯನ್ ತಲುಪಿದೆ. ಇದು 2019ರಲ್ಲಿ 1.4 ಬಿಲಿಯನ್ ಆಗಿತ್ತು.

ವರದಿ ಪ್ರಕಾರ ಮುಂದಿನ ವರ್ಷದ ಆರಂಭದಿಂದ ಈ ಸಂಖ್ಯೆ ಕುಸಿಯುವ ಸಾಧ್ಯತೆ ಇದೆ, ಇದು ಕಾರ್ಮಿಕರ ಕೊರತೆ ಮತ್ತು ಬಳಕೆಯ ಮಟ್ಟದಲ್ಲಿ ಇಳಿಕೆಗೆ ಕಾರಣವಾಗಲಿದೆ.

ಚೀನಾದಲ್ಲಿ 139.77 ಕೋಟಿ ಜನಸಂಖ್ಯೆಯಿದೆ. ತಿಂಗಳ ಆರಂಭದಲ್ಲಿ, ನ್ಯಾಷನಲ್ ಬ್ಯೂರೋ ಆಫ್ ಸ್ಟಾಟಿಸ್ಟಿಕ್ಸ್ ಏಳನೇ ರಾಷ್ಟ್ರೀಯ ಜನಸಂಖ್ಯಾ ಗಣತಿಯನ್ನು ಬಿಡುಗಡೆ ಮಾಡಿದೆ. ಸಂಖ್ಯೆಗಳ ಪ್ರಕಾರ ಚೀನಾ ಜನಸಂಖ್ಯಾ ಬಿಕ್ಕಟ್ಟನ್ನು ಎದುರಿಸುತ್ತಿದೆ, ಮತ್ತು ಮುಂದಿನ ವರ್ಷಗಳಲ್ಲಿ ಇದು ಗಾಢವಾಗಲಿದೆ.

15-59 ವರ್ಷದೊಳಗಿನವರು 894 ಮಿಲಿಯನ್, 2010ರ ಜನಗಣತಿ ಬಳಿಕ ಶೇ.6.79ರಷ್ಟು ಕುಸಿತ ಕಂಡಿದೆ. ಭಾರತದಲ್ಲಿ ಮೊದಲ ಬಾರಿಗೆ 1871-72 ರಲ್ಲಿ ಸಂಪೂರ್ಣ ಭಾರತದ ಜನಗಣತಿಗೆ ಪ್ರಯತ್ನಿಸಲಾಯಿತು. ಗಣತಿಯ ಸಿಬ್ಬಂದಿಗಳನ್ನು ತರಬೇತಿ ಕೊಟ್ಟು ನೇಮಿಸಿಕೊಳ್ಳಲಾಯಿತು.

ಸರ್ಕಾರವು ನಾವಿಬ್ಬರು ನಮಗಿಬ್ಬರೂ ಎಂದು ಎಲ್ಲೆಡೆ ಜಾಗೃತಿ ಮೂಡಿಸುತ್ತಿದ್ದರೂ ಕೂಡ ನಿರ್ದಿಷ್ಟವಾಗಿ ಎರಡೇ ಮಕ್ಕಳನ್ನು ಹೊಂದಬೇಕು ಎಂದು ಎಲ್ಲಿಯೂ ಹೇಳಿಲ್ಲ. ಜನಸಂಖ್ಯಾ ನಿಯಂತ್ರಣಕ್ಕೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

English summary
After a Politburo meeting chaired by President Xi Jinping, China will allow each couple to have up to three children a move taken in a bid to stop the aging population & declining birth rate from disrupting its economic prospects.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X