ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾರುವ ಶವಪೆಟ್ಟಿಗೆ ಎಂದೇ ಹೆಸರಾದ ಬೋಯಿಂಗ್ 737 ವಿಮಾನ ಪತನ: ವಿಡಿಯೋ ವೈರಲ್

|
Google Oneindia Kannada News

ಬೀಜಿಂಗ್ ಮಾರ್ಚ್ 21: ದಕ್ಷಿಣ ಚೀನಾದ ಗುವಾಂಗ್‌ಕ್ಸಿ ಝುವಾಂಗ್ ಸ್ವಾಯತ್ತ ಪ್ರದೇಶದಲ್ಲಿ ಸೋಮವಾರ 133 ಜನರನ್ನು ಹೊತ್ತ ಪ್ರಯಾಣಿಸುತ್ತಿದ್ದ ವಿಮಾನವೊಂದು ಪತನಗೊಂಡಿದೆ. ವಿಮಾನ ಪರ್ವತಗಳ ನಡುವೆ ಪತನಗೊಂಡಿದೆ. ವಿಮಾನ ಪತನದಗೊಂಡ ನಂತರ ಹಲವಾರು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ವಿಮಾನ ಪತನಗೊಂಡ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿದೆ. ಇದರೊಂದಿಗೆ ವಿಮಾನ ಅಪಘಾತದ ಹಲವು ವಿಡಿಯೋಗಳು ವೈರಲ್ ಆಗಿವೆ. ಈ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಇನ್ನೂ ಖಚಿತವಾಗಿ ತಿಳಿದುಬಂದಿಲ್ಲ.

ವಿಮಾನ ಪತನದ ಬಳಿಕ ವಿಮಾನ ಬಿದ್ದ ಜಾಗದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಬೃಹತ್ ಜ್ವಾಲೆ ಮತ್ತು ಹೊಗೆಯ ರಭಸವನ್ನು ನೋಡಿದಾಗ ಜ್ವಾಲಾಮುಖಿ ಸ್ಫೋಟಗೊಂಡಂತೆ ಭಾಸವಾಗಿದೆ. ಎತ್ತರದ ಜ್ವಾಲೆಯೊಂದಿಗೆ ಬಿಳಿ ಹೊಗೆ ಕಿಲೋ.ವರೆಗೂ ಗೋಚರಿಸಿದೆ. ಅಪಘಾತದ ನಂತರ ಬೆಂಕಿ ಸಂಪೂರ್ಣವಾಗಿ ಆ ಅರಣ್ಯ ಪ್ರದೇಶದಲ್ಲಿ ವ್ಯಾಪಿಸಿದೆ. ಬೆಂಕಿ ಎಷ್ಟು ತೀವ್ರವಾಗಿದೆ ಎಂದರೆ ಈ ಅಪಘಾತದಲ್ಲಿ ಯಾವುದೇ ಪ್ರಯಾಣಿಕರು ಬದುಕುಳಿಯಲು ಸಾಧ್ಯವಿಲ್ಲ.

133 ಜನರಿದ್ದ ವಿಮಾನ ಪತನ; ಸುರಕ್ಷತೆಯಲ್ಲಿ ಉತ್ತಮ ಎನಿಸಿಕೊಂಡ ರಾಷ್ಟ್ರದಲ್ಲಿ ಇದೇನಾಯಿತು? 133 ಜನರಿದ್ದ ವಿಮಾನ ಪತನ; ಸುರಕ್ಷತೆಯಲ್ಲಿ ಉತ್ತಮ ಎನಿಸಿಕೊಂಡ ರಾಷ್ಟ್ರದಲ್ಲಿ ಇದೇನಾಯಿತು?

ಬೃಹತ್ ಪ್ರಮಾಣದ ಬೆಂಕಿ

ಬೃಹತ್ ಪ್ರಮಾಣದ ಬೆಂಕಿ

ಸ್ಥಳೀಯ ಮಾಧ್ಯಮಗಳ ಪ್ರಕಾರ, ಚೀನಾ ಈಸ್ಟರ್ನ್ ಫ್ಲೈಟ್ MU5735 ಸೋಮವಾರ ಮಧ್ಯಾಹ್ನ 1 ಗಂಟೆಯ ನಂತರ ಕುನ್ಮಿಂಗ್ ನಗರದಿಂದ ಟೇಕ್ ಆಫ್ ಆಗಿದೆ. ನಂತರ ಗುವಾಂಗ್‌ಝೌಗೆ ತಲುಪಬೇಕಿತ್ತು. ಆದರೆ ಅದು ಅಲ್ಲಿಗೆ ತಲುಪಲಿಲ್ಲ. ಇದೀಗ ಈ ವಿಮಾನ ಅಪಘಾತದ ಲೈವ್ ವಿಡಿಯೋ ಹೊರಬಿದ್ದಿದೆ. ಇದರಲ್ಲಿ ವಿಮಾನವು ಆಕಾಶದಿಂದ ಪರ್ವತಗಳ ಮೇಲೆ ಬೀಳುತ್ತಿರುವುದು ಕಂಡುಬರುತ್ತದೆ. ದೃಶ್ಯದಲ್ಲಿ ವಿಮಾನ ನೇರವಾಗಿ ಪರ್ವತಗಳ ಮೇಲೆ ಬಿದ್ದಿರುವುದ ಸೆರೆಯಾಗಿದೆ. ಅದರ ನಂತರ ಬೃಹತ್ ಪ್ರಮಾಣದ ಬೆಂಕಿ ಹೊತ್ತುಕೊಂಡಿದೆ.

ವಿಡಿಯೋದಲ್ಲಿ ದೃಶ್ಯ ಸೆರೆ

ವಿಡಿಯೋದಲ್ಲಿ ದೃಶ್ಯ ಸೆರೆ

ಅಪಘಾತಕ್ಕೆ ಸಂಬಂಧಿಸಿದ ಇನ್ನೊಂದು ವಿಡಿಯೋದಲ್ಲಿ ವಿಮಾನದ ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿದೆ. ವೀಡಿಯೊದಲ್ಲಿ, ಪರಿಹಾರ ಮತ್ತು ರಕ್ಷಣಾ ತಂಡಗಳ ಜನರು ವಿಮಾನದ ಅವಶೇಷಗಳ ಬಳಿ ಹಾದು ಹೋಗುತ್ತಿರುವುದು ಕಂಡುಬಂದಿದೆ. ಇದೇ ವೇಳೆ ಕೆಲವರು ಘಟನೆಯ ವಿಡಿಯೋ ಚಿತ್ರೀಕರಣ ಕೂಡ ಮಾಡುತ್ತಿರುವುದು ಕಂಡು ಬಂದಿದೆ. ವರದಿಗಳ ಪ್ರಕಾರ, ವಿಮಾನ ಎರಡು ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ 30,000 ಅಡಿಗಳಷ್ಟು ಮೇಲಿನಿಂದ ಕೆಳಗೆ ಬಿದ್ದಿದೆ. ಟೇಕ್ ಆಫ್ ಆದ 71 ನಿಮಿಷಗಳ ನಂತರ ಈ ವಿಮಾನ ಅಪಘಾತಕ್ಕೊಳಗಾಗಿದೆ. ವಿಮಾನ ಇಳಿಯುವ 43 ನಿಮಿಷಗಳ ಮೊದಲು ಎಟಿಸಿ ಸಂಪರ್ಕ ಕಳೆದುಕೊಂಡಿದೆ.

ಹಾರುವ ಶವಪೆಟ್ಟಿಗೆ

737 ಮಾದರಿಯ ಹಲವಾರು ವಿಮಾನಗಳು ಈ ಹಿಂದೆ ಅಪಘಾತಕ್ಕೀಡಾಗಿದ್ದವು. ಬೋಯಿಂಗ್ 737 ಸಣ್ಣ ಮತ್ತು ಮಧ್ಯಮ ದೂರದ ವಿಮಾನ ಪ್ರಯಾಣಕ್ಕೆ ಉತ್ತಮ ವಿಮಾನವೆಂದು ಪರಿಗಣಿಸಲಾಗಿದೆ. ಆದರೆ ಅಪಘಾತಗಳಿಂದಾಗಿ ಈಗ ಅದನ್ನು ಹಾರುವ ಶವಪೆಟ್ಟಿಗೆ ಎಂದು ಕರೆಯಲಾಗುತ್ತದೆ. 2019 ರಲ್ಲಿ ಇಥಿಯೋಪಿಯಾದಲ್ಲಿ ಬೋಯಿಂಗ್ 737 ವಿಮಾನ ಪತನಗೊಂಡಿತ್ತು. ಈ ವೇಲೆ ವಿಮಾನದಲ್ಲಿ 157 ಜನರಿದ್ದು ಎಲ್ಲರೂ ಸಾವನ್ನಪ್ಪಿದರು. ಅಕ್ಟೋಬರ್ 2018 ರಲ್ಲಿ, ಇಂಡೋನೇಷ್ಯಾದಲ್ಲಿ ಲಯನ್ ಏರ್‌ನ ಬೋಯಿಂಗ್ 737 ಜಕಾರ್ತಾದಿಂದ ಟೇಕ್ ಆಫ್ ಆದ 13 ನಿಮಿಷಗಳ ನಂತರ ಪತನಗೊಂಡಿತು. ಅದರಲ್ಲಿದ್ದ ಎಲ್ಲಾ 189 ಜನರು ಸಾವನ್ನಪ್ಪಿದರು. 2013ರಲ್ಲಿ ಬೋಯಿಂಗ್-737 ವಿಮಾನವೂ ಪತನವಾಗಿತ್ತು. ಈ ಅಪಘಾತದಲ್ಲಿ ಸುಮಾರು 108 ಜನರು ಸಾವನ್ನಪ್ಪಿದ್ದಾರೆ.

ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಆತಂಕ

ಇದು 6 ವರ್ಷ ಹಳೆಯ ಬೋಯಿಂಗ್ 737-800 ಎನ್‌ಜಿ ವಿಮಾನವಾಗಿದ್ದು, ಒಟ್ಟು 132 ಮಂದಿ ಪ್ರಯಾಣಿಸುತ್ತಿದ್ದರು. ಅದರಲ್ಲಿ 123 ಪ್ರಯಾಣಿಕರಾಗಿದ್ದರೆ, 9 ಸಿಬ್ಬಂದಿ ಇದ್ದರು ಎಂದು ತಿಳಿದು ಬಂದಿದೆ. ಚೀನಾದಲ್ಲಿ ನಡೆದಿರುವ ವಿಮಾನ ಪತನಕ್ಕೆ ಸಂಬಂಧಿಸಿದಂತೆ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಎಂದು ವರದಿ ಆಗಿದೆ.

English summary
A passenger plane carrying 133 people crashed on Monday in south China's Guangxi Zhuang Autonomous Region. There were 133 people on board the Boeing 737 passenger plane that crashed.long with this, many more videos and pictures of many plane crashes have come to the fore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X