ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಿ ಎಂಬ ಭಯೋತ್ಪಾದಕನಿಗೆ ಚೀನಾ ಬೆಂಬಲ- ಏನಿದರ ಮರ್ಮ?

|
Google Oneindia Kannada News

ನವದೆಹಲಿ, ಜೂನ್ 24: ಭಾರತದಲ್ಲಿ ಉಗ್ರ ದಾಳಿಗೆ ಸಂಚು ರೂಪಿಸಿದ ಮತ್ತು ಇಲ್ಲಿನ ಯುವಕರನ್ನು ಭಯೋತ್ಪಾದನೆಗೆ ಸೇರಲು ಪ್ರಚೋದಿಸಿದ ಆರೋಪ ಇರುವ ಪಾಕಿಸ್ತಾನ ಮೂಲದ ಅಬ್ದುಲ್ ರೆಹಮಾನ್ ಮಕ್ಕಿಯನ್ನು ಜಾಗತಿಕ ಉಗ್ರ ಎಂದು ಘೋಷಣೆ ಆಗಲು ಚೀನಾ ಅಡ್ಡಗಾಲು ಹಾಕಿದೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಲ್-ಖೈದಾ ನಿಷೇಧಗಳ ಸಮಿತಿಯ ಅಡಿಯಲ್ಲಿ ಅಬ್ದುಲ್ ರೆಹಮಾನ್ ಮಕ್ಕಿಯನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಪ್ರಸ್ತಾವಕ್ಕೆ ಚೀನಾ ಕಳೆದ ವಾರ ತಡೆ ಹಾಕಿದೆ.

ಯುಎನ್‌ಎಸ್‌ಸಿ 1267 ಕಮಿಟಿ ಎಂದು ಕರೆಯಲಾಗುವ ಅಲ್-ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್ ನಿಷೇಧಗಳ ಸಮಿತಿಯ ಅಡಿಯಲ್ಲಿ ಮಕ್ಕಿಯನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲು ಇದೇ ಜೂನ್ ತಿಂಗಳ ಮೊದಲ ವಾರದಲ್ಲಿ ಭಾರತ ಮತ್ತು ಅಮೆರಿಕ ದೇಶಘಳು ಪ್ರಸ್ತಾಪ ಸಲ್ಲಿಸಿದ್ದವು. ಆದರೆ, ಮಕ್ಕಿಗೆ ಚೀನಾ ಮತ್ತು ಪಾಕಿಸ್ತಾನದ ಅಭಯ ಹಸ್ತ ಇದ್ದಂತಿದೆ.

ಮತ್ತೊಮ್ಮೆ ಬೂದು ಪಟ್ಟಿಯಲ್ಲೇ ಉಳಿದ ಪಾಕಿಸ್ತಾನಮತ್ತೊಮ್ಮೆ ಬೂದು ಪಟ್ಟಿಯಲ್ಲೇ ಉಳಿದ ಪಾಕಿಸ್ತಾನ

ಭಾರತದ ಆಂತರಿಕ ಕಾನೂನುಗಳ ಅಡಿಯಲ್ಲಿ ಮಕ್ಕಿಯನ್ನು ಈಗಾಗಲೇ ಭಯೋತ್ಪಾದಕ ಎಂದು ಘೋಷಿಸಲಾಗಿದೆ. ಅಮೆರಿಕದಲ್ಲೂ ಆತನನ್ನು ಉಗ್ರರ ಪಟ್ಟಿಗೆ ಸೇರಿಸಲಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಆತನನ್ನು ಭಯೋತ್ಪಾದಕ ಎಂದು ಘೋಷಿಸಿದರೆ ಹಣಕಾಸು ಹರಿವು ಇತ್ಯಾದಿ ಎಲ್ಲವೂ ಸ್ಥಗಿತಗೊಳ್ಳುತ್ತದೆ.

 ಮಕ್ಕಿ ಯಾರು?

ಮಕ್ಕಿ ಯಾರು?

ಮುಂಬೈ ದಾಳಿ ಘಟನೆಯ ಮಾಸ್ಟರ್ ಮೈಂಡ್ ಹಾಗು ಲಷ್ಕರ್-ಎ-ತೈಬಾ ಎಂಬ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್‌ನ ಸೋದರ ಸಂಬಂಧಿ ಈ ಅಬ್ದುಲ್ ರೆಹಮಾನ್ ಮಕ್ಕಿ. ವಿದೇಶಿ ಭಯೋತ್ಪಾದಕ ಸಂಘಟನೆ (FTO- US-designated Foreign Terrorist Organization) ಎಂದು ಅಮೆರಿಕದಲ್ಲಿ ಘೋಷಣೆಯಾಗಿರುವ ಲಷ್ಕರೆ ಸಂಘಟನೆಯ ವಿವಿಧ ಸ್ತರಗಳ ನಾಯಕತ್ವಗಳಲ್ಲಿ ಮಕ್ಕಿ ಪಳಗಿದ್ದಾನೆ. ಲಷ್ಕರೆಯ ಉಗ್ರ ಕೃತ್ಯಗಳಿಗೆ ಹಣಕಾಸು ನೆರವಿಗೆ ವ್ಯವಸ್ಥೆ ಮಾಡುವ ಕೆಲಸದಲ್ಲೂ ಈತ ಎತ್ತಿದ ಕೈ.

ಭಾರತದಲ್ಲೂ, ಅದರಲ್ಲೂ ಜಮ್ಮು ಮತ್ತು ಕಾಶ್ಮೀರದಲ್ಲಿ ಅಬ್ದುಲ್ ರೆಹಮಾನ್ ಮಕ್ಕಿ ಲಷ್ಕರೆ ಸಂಘಟನೆಯ ಮೂಲಕ ಸ್ಥಳೀಯ ಯುವಕರನ್ನು ಭಯೋತ್ಪಾದನೆಯತ್ತ ಸೆಳೆಯುವ ಜಾಲ ಬೀಸಿದ್ದ. ಅನೇಕ ಕಡೆ ದಾಳಿ ನಡೆಸುವ ಸಂಚು ರೂಪಿಸಿದ್ದೂ ಬೆಳಕಿಗೆ ಬಂದಿದೆ.

ಭಾರತ ಮತ್ತು ಬಾಂಗ್ಲಾದೇಶದ ವಿರುದ್ಧ ಜಿಹಾದ್‌ಗೆ ಕರೆಭಾರತ ಮತ್ತು ಬಾಂಗ್ಲಾದೇಶದ ವಿರುದ್ಧ ಜಿಹಾದ್‌ಗೆ ಕರೆ

 ಪಾಕಿಸ್ತಾನದ ಇಬ್ಬಗೆಯ ನೀತಿ

ಪಾಕಿಸ್ತಾನದ ಇಬ್ಬಗೆಯ ನೀತಿ

2020ರಲ್ಲಿ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವೊಂದು ಅಬ್ದುಲ್ ರೆಹಮಾನ್ ಮಕ್ಕಿಗೆ ಜೈಲುಶಿಕ್ಷೆ ವಿಧಿಸಿದ್ದಿದೆ. ಭಯೋತ್ಪಾದನೆಗೆ ಹಣಕಾಸು ವ್ಯವಸ್ಥೆ ಮಾಡಿದ ಆರೋಪ ಸಾಬೀತಾಗಿ ಶಿಕ್ಷೆ ನೀಡಲಾಗಿತ್ತು. ಆದರೆ, ಪಾಕಿಸ್ತಾನದಲ್ಲಿ ಶಿಕ್ಷೆ ಜಾರಿಯಾಗಿರುವ ಉಗ್ರರನ್ನು ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡುವ ಸಂಪ್ರದಾಯವೇ ಬೆಳೆದುಬಂದಿದೆ. ಈ ಹಿನ್ನೆಲೆಯಲ್ಲಿ ಮಕ್ಕಿಯ ಈಗಿನ ಸ್ಥಿತಿ ಬಗ್ಗೆ ಮಾಹಿತಿ ಇನ್ನೂ ಗೊತ್ತಾಗಿಲ್ಲ. ಅಮೆರಿಕ ಈತನ ಬಗ್ಗೆ ಪಾಕಿಸ್ತಾನದ ಬಳಿ ಮಾಹಿತಿ ಕೇಳುತ್ತಲೇ ಇದೆ. ಇನ್ನೂ ಸಿಕ್ಕಿಲ್ಲ. ಜೈಲಿನಲ್ಲಿದ್ದರೆ ಮಕ್ಕಿ ಜೈಲಲ್ಲಿದ್ದಾನೆ ಎಂದು ಹೇಳಲು ಪಾಕಿಸ್ತಾನಕ್ಕೆ ಏನಡ್ಡಿ?

 ಚೀನಾ ಅಡ್ಡಿಯಾಗಿದ್ದು ಹೇಗೆ?

ಚೀನಾ ಅಡ್ಡಿಯಾಗಿದ್ದು ಹೇಗೆ?

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಲ್-ಖೈದಾ ನಿಷೇಧಗಳ ಪಟ್ಟಿಗೆ ಮಕ್ಕಿಯನ್ನು ಸೇರಿಸುವ ಪ್ರಸ್ತಾವದ ಬಗ್ಗೆ ಜೂನ್ 16ರವರೆಗೆ ನಿರಾಕ್ಷೇಪಣೆ ಏನಾದರೂ ಇದ್ದರೆ ಸಲ್ಲಿಸಬೇಕೆಂದು 1267 ಕಮಿಟಿಯ ಎಲ್ಲಾ ಸದಸ್ಯರಿಗೂ ಸುತ್ತುವಳಿ ಹೊರಡಿಸಲಾಗಿತ್ತು.

ಆದರೆ, ಚೀನಾ ಜೂನ್ 16ರ ಬಳಿಕ ಈ ಪ್ರಸ್ತಾಪಕ್ಕೆ ತಾಂತ್ರಿಕವಾಗಿ ತಡೆಯೊಡ್ಡಿರುವುದು ತಿಳಿದುಬಂದಿದೆ. ಅಂತಾರಾಷ್ಟ್ರೀಯ ಭಯೋತ್ಪಾದನೆ ವಿರುದ್ಧ ಪುಂಖಾನುಪುಂಖವಾಗಿ ಮಾತನಾಡುವ ಚೀನಾ ಪಾಕಿಸ್ತಾನೀ ಸಂಬಂಧಿತ ಉಗ್ರರ ವಿಚಾರದಲ್ಲಿ ಯಾವಾಗಲೂ ಮೃದು ಧೋರಣೆ ತೋರುತ್ತದೆ.

ಮಕ್ಕಿ ವಿಚಾರದಲ್ಲಿ ನಡೆದುಕೊಂಡ ರೀತಿ ಚೀನಾಗೆ ಮೊದಲೇನಲ್ಲ. ಈ ಹಿಂದೆ ಜೈಷ್-ಎ-ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಮೌಲಾನ ಮಸೂದ್ ಅಜರ್ ಅನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಬೇಕೆಂಬ ಅನೇಕ ಪ್ರಯತ್ನಗಳಿಗೆ ಪ್ರತೀ ಬಾರಿಯೂ ಅಡ್ಡಿಯಾಗುತ್ತಿದ್ದುದು ಇದೇ ಚೀನಾವೇ. ಮಸೂದ್ ಅಜರ್ ಮಾತ್ರವಲ್ಲ ಇನ್ನೂ ಹಲವು ಉಗ್ರರ ವಿಚಾರದಲ್ಲೂ ಚೀನಾ ಇದೇ ನಿಲುವು ತಳೆದಿದ್ದಿದೆ.

 ಚೀನಾದಿಂದ ಮಕ್ಕಿಯ ರಕ್ಷಣೆ ಯಾಕೆ?

ಚೀನಾದಿಂದ ಮಕ್ಕಿಯ ರಕ್ಷಣೆ ಯಾಕೆ?

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಜೀವಂತವಾಗಿಡುವುದು ಪಾಕಿಸ್ತಾನದ ಉದ್ದೇಶ. ತನ್ನ ದೇಶದೊಳಗೇ ಉಗ್ರರು ಹಿಂಸಾಚಾರ ನಡೆಸುತ್ತಿದ್ದರೂ ಪಾಠ ಕಲಿಯದ ಪಾಕಿಸ್ತಾನ ಭಾರತದಿಂದ ಜಮ್ಮು ಕಾಶ್ಮೀರವನ್ನು ಬೇರ್ಪಡಿಸುವುದನ್ನೇ ತನ್ನ ಪರಮ ಗುರಿಯಾಗಿಸಿಕೊಂಡಿದೆ.

ತನ್ನ ಸಿಪೆಕ್, ಬಿಆರ್‌ಐ ಇತ್ಯಾದಿ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಪಾಕಿಸ್ತಾನದ ಅವಶ್ಯಕತೆ ಚೀನಾಗೆ ಇದೆ. ಆದ್ದರಿಂದ ಪಾಕಿಸ್ತಾನ ಮೂಲದ ಉಗ್ರಗಾಮಿಗಳಿಗೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಚೀನಾ ಬೆಂಬಲ ನೀಡುತ್ತದೆ. ಈಗ ಮಕ್ಕಿಗೂ ಈ ಕಾರಣಕ್ಕೇ ಬೆಂಬಲ ಕೊಟ್ಟಿರುವುದು. ಇದು ಪಾಕಿಸ್ತಾನವನ್ನು ಖುಷಿಪಡಿಸುತ್ತಾ ಚೀನಾ ತನ್ನ ಕೆಲಸ ಸಾಧಿಸಿಕೊಳ್ಳುವ ತಂತ್ರವಷ್ಟೇ.

(ಒನ್ಇಂಡಿಯಾ ಸುದ್ದಿ)

English summary
China has brought technical hold to the proposal of adding Abdul Rehman Makki to the list of international terrorists in UNSC sanctions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X