• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಪ್‌ ನಿಷೇಧ WTO ನಿಯಮಗಳ ಉಲ್ಲಂಘನೆ: ಭಾರತದ ಮೇಲೆ ಹರಿಹಾಯ್ದ ಚೀನಾ

|

ಬೀಜಿಂಗ್, ನವೆಂಬರ್ 25: ಭದ್ರತಾ ನೆಲೆಯ ಆಧಾರದಲ್ಲಿ ಚೀನಾ ಮೂಲದ ಮೊಬೈಲ್ ಫೋನ್ 43 ಆಪ್‌ಗಳನ್ನು ನಿಷೇಧಿಸುವ ಭಾರತದ ನಿರ್ಧಾರವನ್ನು ಚೀನಾ ವಿರೋಧಿಸಿದೆ. ಭಾರತದ ಈ ನಡೆಯು ವಿಶ್ವ ವ್ಯಾಪಾರ ಸಂಸ್ಥೆಯ (ಡಬ್ಲ್ಯೂಟಿಒ) ನಿಯಮಾವಳಿಗಳ ಉಲ್ಲಂಘನೆಯಾಗಿದೆ ಎಂದು ಚೀನಾ ಆರೋಪಿಸಿದೆ.

ಈ ಹಿಂದೆ ಮೂರು ಬಾರಿ ನೂರಾರು ಚೀನಾ ಮೂಲದ ಆಪ್‌ಗಳನ್ನು ನಿಷೇಧಿಸಿದ್ದ ಭಾರತದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮಂಗಳವಾರ ಮತ್ತಷ್ಟು ಆಪ್‌ಗಳನ್ನು ನಿಷೇಧಿಸಿದೆ. ಪೂರ್ವ ಲಡಾಖ್‌ನ ಗಡಿ ವಾಸ್ತವ ನಿಯಂತ್ರಣ ರೇಖೆ ಬಳಿ ಚೀನೀ ಪಡೆಗಳೊಂದಿಗಿನ ಬಿಕ್ಕಟ್ಟು ಮುಂದುವರಿದಿರುವ ಸಂದರ್ಭದಲ್ಲಿಯೇ ನಾಲ್ಕನೆಯ ಬಾರಿ ಚೀನೀ ಆಪ್‌ಗಳ ಮೇಲೆ ನಿಷೇಧ ಹೇರಿದೆ.

ಮತ್ತೆ 43 ಚೀನೀ ಆಪ್‌ಗಳ ನಿಷೇಧ: ಯಾವ ಯಾವ ಆಪ್‌ ಮೇಲೆ ನಿರ್ಬಂಧ?

ಹೊಸದಾಗಿ 43 ಆಪ್‌ಗಳ ಮೇಲೆ ನಿಷೇಧ ವಿಧಿಸುವುದರೊಂದಿಗೆ ಭಾರತವು ಇದುವರೆಗೂ ನಿಷೇಧಿಸಿದ ಚೀನಾ ಮೂಲದ ಆಪ್‌ಗಳ ಸಂಖ್ಯೆ 267ಕ್ಕೇರಿದೆ.

'ಚೀನಾ ಹಿನ್ನೆಲೆಯ ಕೆಲವು ಮೊಬೈಲ್ ಆಫ್‌ಗಳನ್ನು ನಿಷೇಧಿಸುವ ಕ್ರಮವನ್ನು ಸಮರ್ಥಿಸಿಕೊಳ್ಳಲು ರಾಷ್ಟ್ರೀಯ ಭದ್ರತೆ ಎಂಬ ಪದವನ್ನು ಭಾರತ ಪದೇ ಪದೇ ಬಳಸುತ್ತಿರುವುದಕ್ಕೆ ನಾವು ದೃಢವಾಗಿ ವಿರೋಧ ವ್ಯಕ್ತಪಡಿಸುತ್ತೇವೆ' ಎಂದು ಚೀನಾ ರಾಯಭಾರ ಕಚೇರಿ ವಕ್ತಾರ ಜಿ ರೊಂಗ್ ತಿಳಿಸಿದ್ದಾರೆ.

'ಭಾರತವು ಚೀನಾ ಸೇರಿದಂತೆ ವಿವಿಧ ದೇಶಗಳ ಮಾರುಕಟ್ಟೆ ಸಂಸ್ಥೆಗಳಿಗೆ ಮುಕ್ತ, ಪಕ್ಷಪಾತರಹಿತ ಮತ್ತು ತಾರತಮ್ಯರಹಿತ ವ್ಯವಹಾರ ವಾತಾವರಣವನ್ನು ಕಲ್ಪಿಸಲಿದೆ ಎಂದು ನಾವು ವಿಶ್ವಾಸ ಹೊಂದಿದ್ದೇವೆ ಮತ್ತು ವಿಶ್ವ ವ್ಯಾಪಾರ ಸಂಸ್ಥೆಯ ನಿಯಮಾವಳಿಗಳ ಉಲ್ಲಂಘನೆಯ ತಾರತಮ್ಯ ಅಭ್ಯಾಸವನ್ನು ಸರಿಪಡಿಸಿಕೊಳ್ಳಲಿದೆ ಎಂದು ಭಾವಿಸಿದ್ದೇವೆ' ಎಂದಿದ್ದಾರೆ.

ಚೀನಾದ ವಿದೇಶಿ ಕಂಪೆನಿಗಳು ಅಂತಾರಾಷ್ಟ್ರೀಯ ನಿಯಮಾವಳಿಗಳಿಗೆ ಬದ್ಧವಾಗಿರುವುದು, ಕಾನೂನು ಮತ್ತು ನಿಯಂತ್ರಣಗಳಿಗೆ ಅನುಸಾರವಾಗಿ ಕಾರ್ಯ ನಿರ್ವಹಿಸುವುದು ಹಾಗೂ ಸಾರ್ವಜನಿಕ ಸುವ್ಯವಸ್ಥೆ ಮತ್ತು ಉತ್ತಮ ನೈತಿಕತೆಯನ್ನು ಪಾಲಿಸುವುದು ಸದಾ ಅತ್ಯಗತ್ಯವಾಗಿದೆ ಎಂದು ಹೇಳಿದ್ದಾರೆ.

English summary
China has oppsed India's latest decision to ban 43 more Chinese apps and said that the move violated the rules of the WTO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X