• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾದಲ್ಲಿ ಜನಸಂಖ್ಯೆ ಕುಸಿತ! ಒಂದಲ್ಲ, ಎರಡಲ್ಲ, ಮೂರು ಮಕ್ಕಳಾದ್ರೂ ಓಕೆ!

|
Google Oneindia Kannada News

ಜನಸಂಖ್ಯೆಯಲ್ಲಿ ನಂಬರ್ 1 ಸ್ಥಾನದಲ್ಲಿರುವ ಚೀನಾದಲ್ಲಿ ಕೊರೊನಾ ನಂತರ ಜನಸಂಖ್ಯೆ ಕುಸಿತ ಕಾಣುತ್ತಿದೆ. ಚೀನಾದಲ್ಲಿ ಕಳೆದ ವರ್ಷ ಅಂದ್ರೆ 2020ರಲ್ಲಿ ಜನಸಂಖ್ಯೆ ಏರಿಕೆ ಪ್ರಮಾಣ 0.53ರಷ್ಟು ಮಾತ್ರ ದಾಖಲಾಗಿತ್ತು, ಇದನ್ನ ಸೊನ್ನೆ ಅಂತಲೇ ಕೆಲವರು ಲೇವಡಿ ಮಾಡಿದ್ದರು. ಈ ರೀತಿ ಚೀನಾದಲ್ಲಿ ಜನಸಂಖ್ಯೆ ಕುಸಿತ ಕಂಡಿದ್ದು ಇದೇ ಮೊದಲ ಬಾರಿ. ಹೀಗಾಗಿ ತಕ್ಷಣ ಅಲರ್ಟ್ ಆದ ಚೀನಾ ಸರ್ಕಾರ ಜನಸಂಖ್ಯೆ ಕಾನೂನಿಗೆ ಮೇಜರ್ ಸರ್ಜರಿ ಮಾಡಿದೆ.

   China ದೇಶದಲ್ಲಿ ಜನಸಂಖ್ಯೆ ಏರಿಸುವ ಕಾರ್ಯಕ್ರಮ | Oneindia Kannada

   ಚೀನಾದಲ್ಲಿ ಆಡಳಿತ ನಡೆಸುತ್ತಿರುವ ಕಮ್ಯುನಿಸ್ಟ್ ಪಕ್ಷ ಹೊಸ ನಿಯಮ ಜಾರಿಗೆ ತರಲು ಮುಂದಾಗಿದ್ದು, ಇನ್ನುಮುಂದೆ ಯಾವುದೇ ದಂಪತಿ ಗರಿಷ್ಠ ಮೂವರು ಮಕ್ಕಳನ್ನು ಹೊಂದಬಹುದು. ಇದು ಚೀನಾದಲ್ಲಿ ಮತ್ತೆ ಜನಸಂಖ್ಯೆ ಅಭಿವೃದ್ಧಿಗೆ ಪೂರಕವಾಗಲು ಕೈಗೊಂಡ ಕ್ರಮವಾಗಿದೆ.

    ಚೀನಾದಲ್ಲಿ ಪ್ರತಿ ದಂಪತಿ 3 ಮಕ್ಕಳನ್ನು ಹೊಂದಲು ಅವಕಾಶ ಚೀನಾದಲ್ಲಿ ಪ್ರತಿ ದಂಪತಿ 3 ಮಕ್ಕಳನ್ನು ಹೊಂದಲು ಅವಕಾಶ

   ಕಮ್ಯುನಿಸ್ಟ್ ಪಾಲಿಟ್‌ ಬ್ಯೂರೋ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ವೃದ್ಧರ ಸಂಖ್ಯೆ ನಿಭಾಯಿಸಲು ಕೂಡ ಈ ನಿಯಮ ಜಾರಿಗೆ ತರಲಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಆದರೆ ಈ ಬದಲಾವಣೆಯನ್ನು ಯಾವಾಗಿನಿಂದ ಜಾರಿಗೆ ತರಲಾಗುತ್ತದೆ ಎಂಬುದರ ವಿವರಣೆ ಇನ್ನೂ ಹೊರಬಿದ್ದಿಲ್ಲ.

   1980ರಿಂದ ಕಠಿಣ ಕಾನೂನು

   1980ರಿಂದ ಕಠಿಣ ಕಾನೂನು

   ಚೀನಾದಲ್ಲಿ ವಿಪರೀತವಾಗಿ ಜನಸಂಖ್ಯೆ ಏರುತ್ತಿತ್ತು. ಹೀಗಾಗಿಯೇ ಚೀನಾದಲ್ಲಿ ಜನಸಂಖ್ಯೆ ಬೆಳವಣಿಗೆಯನ್ನು ತಡೆಯಲು ಕಮ್ಯುನಿಸ್ಟ್ ಪಾರ್ಟಿ 1980ರಿಂದ ಜನನದ ಮಿತಿ ಜಾರಿಗೊಳಿಸಿತ್ತು. ಈ ಕಾನೂನಿನ ಪರಿಣಾಮ ಚೀನಾದಲ್ಲಿ 65 ವರ್ಷ ಮೇಲ್ಪಟ್ಟವರ ಸಂಖ್ಯೆ ಹೆಚ್ಚಾಗಿದ್ದು, ಸರಾಸರಿ ವಯಸ್ಸು ನಿಭಾಯಿಸುವುದು ಇದೀಗ ಕಷ್ಟವಾಗಿದೆ. ಹೀಗಾಗಿ ದುಡಿಯುವ ವರ್ಗ ಕೂಡ ಕುಸಿತ ಕಾಣುತ್ತಿರುವುದು ಚೀನಾಗೆ ಆತಂಕ ಹುಟ್ಟಿಸಿದೆ. ಇದೇ ಕಾರಣಕ್ಕೆ ಜನಸಂಖ್ಯೆ ಕಾನೂನಿನಲ್ಲಿ ಮಹತ್ವದ ಬದಲಾವಣೆ ಮಾಡಿ, ವಯಸ್ಸಿನ ಅಂತರ ಸರಿದೂಗಿಸಿ ಅಭಿವೃದ್ಧಿಗೆ ಪೂರಕವಾಗುವ ವಾತಾವರಣ ನಿರ್ಮಿಸುವುದು ಕಮ್ಯುನಿಸ್ಟ್ ಸರ್ಕಾರದ ಗುರಿಯಾಗಿದೆ.

   ಕಾರ್ಮಿಕರ ಕೊರತೆ ಅಪಾಯ..?

   ಕಾರ್ಮಿಕರ ಕೊರತೆ ಅಪಾಯ..?

   ಯಾವುದೇ ದೇಶದ ಆರ್ಥಿಕತೆ ನಿರ್ಧಾರ ಆಗುವುದು ನೈಸರ್ಗಿಕ ಸಂಪತ್ತು ಹಾಗೂ ಶ್ರಮಿಕ ವರ್ಗದ ಮೇಲೆ. ಜನಸಂಖ್ಯೆ ಅಗತ್ಯಕ್ಕೆ ತಕ್ಕಷ್ಟು ಇರಬೇಕೆ ವಿನಃ, ಹೆಚ್ಚು-ಕಡಿಮೆಯಾದರೆ ಆರ್ಥಿಕತೆಗೆ ನೇರ ಪೆಟ್ಟು ಕೊಡಲಿದೆ. ಈ ಹಿಂದೆ ಚೀನಾದಲ್ಲಿ ಭಾರಿ ಪ್ರಮಾಣದಲ್ಲಿ ಜನಸಂಖ್ಯೆ ಏರಿಕೆ ಕಾಣುತ್ತಿತ್ತು. ಆದರೆ ಇದೀಗ ದಿಢೀರ್ ಕುಸಿತ ಕಾಣುತ್ತಿರುವುದು ಮುಂಬರುವ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರು ಹಾಗೂ ಬಳಕೆದಾರರ ಕೊರತೆ ಎದುರಾಗುವ ಮುನ್ಸೂಚನೆ ನೀಡುತ್ತಿದೆ. ಜಗತ್ತಿನ 2ನೇ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರಕ್ಕೆ ಜನಸಂಖ್ಯೆ ಕುಸಿತ ದೊಡ್ಡ ತಲೆನೋವು ತಂದೊಡ್ಡುತ್ತಿದೆ.

   7ನೇ ರಾಷ್ಟ್ರೀಯ ಜನಗಣತಿ

   7ನೇ ರಾಷ್ಟ್ರೀಯ ಜನಗಣತಿ

   ಭಾರತದಲ್ಲಿ ನಡೆಯುವಂತೆ ಪ್ರತಿ 10 ವರ್ಷಕ್ಕೆ ಒಂದು ಬಾರಿ ಚೀನಾದಲ್ಲೂ ಜನಗಣತಿ ನಡೆಯುತ್ತದೆ. 7ನೇ ಜನಗಣತಿ ವರದಿಯನ್ನು ಬಿಡುಗಡೆ ಮಾಡಿರುವ ಚೀನಾ ಜನಸಂಖ್ಯೆ ಏರಿಳಿತದ ಬಗ್ಗೆ ಮಾಹಿತಿ ನೀಡಿದೆ. ಒಟ್ಟು 31 ಪ್ರಾಂತ್ಯಗಳು ಸೇರಿದಂತೆ ಚೀನಾದಲ್ಲಿ ವಾಸಿಸುತ್ತಿರುವ ಪ್ರಜೆಗಳ ವಿವರ ಇದರಲ್ಲಿದೆ. ಆದರೆ ಹಾಂಕಾಂಗ್‌ ಮತ್ತು ಮಕಾವೊ ಜನಸಂಖ್ಯೆ ವಿವರ ಈ ಜನಗಣತಿಯಲ್ಲಿ ಇಲ್ಲದಿರುವುದು ವಿಶೇಷ. ಚೀನಾದಲ್ಲಿ 60 ವರ್ಷ ಮೇಲ್ಪಟ್ಟವರ ಸಂಖ್ಯೆ 26 ಕೋಟಿಗೆ ಹೆಚ್ಚಳವಾಗಿದ್ದರೆ 15-59 ವರ್ಷದೊಳಗಿನವರ ಸಂಖ್ಯೆಯು 89.4 ಕೋಟಿ ಇದೆ. ಚೀನಾದಲ್ಲಿ ನಗರ ಪ್ರದೇಶಗಳಲ್ಲಿ 90 ಕೋಟಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 50 ಕೋಟಿ ಪ್ರಜೆಗಳು ವಾಸ ಮಾಡುತ್ತಿದ್ದಾರೆ.

   ಚೀನಾದಲ್ಲಿ ಬಡವರೇ ಇಲ್ಲ..!

   ಚೀನಾದಲ್ಲಿ ಬಡವರೇ ಇಲ್ಲ..!

   ಒಂದು ಕಾಲದಲ್ಲಿ ತೀವ್ರ ಬಡತನ ತುಂಬಿದ ರಾಷ್ಟ್ರವಾಗಿದ್ದ ಚೀನಾದಲ್ಲಿ ಈಗ ಬಡವರೇ ಇಲ್ಲ. ಪವರ್ ಫುಲ್ ರಾಷ್ಟ್ರಗಳೇ ಬಡತನದ ಸಂಕೋಲೆಯಲ್ಲಿ ನರಳುತ್ತಿರುವ ಸಂದರ್ಭದಲ್ಲಿ ಚೀನಾ ಮಾತ್ರ ಜಗತ್ತು ಮೆಚ್ಚುವ ಕೆಲಸ ಮಾಡಿದೆ. ಚೀನಾ ತನ್ನ ದೇಶದಲ್ಲಿದ್ದ 77 ಕೋಟಿ ಬಡವರನ್ನು ವಿಷ ವರ್ತುಲದಿಂದ ಹೊರತಂದಿದೆ. ಫೆಬ್ರವರಿ ತಿಂಗಳಲ್ಲಿ ಈ ವಿಚಾರ ಹಂಚಿಕೊಂಡಿದ್ದ ಚೀನಾ, ಸತತ 40 ವರ್ಷಗಳ ಪರಿಶ್ರಮದ ನಂತರ ಗುರಿ ತಲುಪುವಲ್ಲಿ ಯಶಸ್ವಿಯಾಗಿತ್ತು. ಇದರ ಜೊತೆಗೆ ಶ್ರೀಮಂತರ ಪಟ್ಟಿಯಲ್ಲೂ ಚೀನಾ ನಂಬರ್ 1 ಸ್ಥಾನವನ್ನು ಅಲಂಕರಿಸಿದೆ. ಆದರೆ ಜನಸಂಖ್ಯೆ ಇಳಿಕೆ ಚೀನಾ ಸರ್ಕಾರಕ್ಕೆ ಸಣ್ಣ ಆತಂಕ ತಂದೊಡ್ಡಿದೆ.

   ಬಡವರಿಗೆ ಐಷಾರಾಮಿ ಫ್ಲ್ಯಾಟ್‌ಗಳು..!

   ಬಡವರಿಗೆ ಐಷಾರಾಮಿ ಫ್ಲ್ಯಾಟ್‌ಗಳು..!

   ಚೀನಾದಲ್ಲಿ ಬಡವರಿಗೆ ವಸತಿ ಒದಗಿಸುವ ಯೋಜನೆ ಜಾರಿಗೆ ಬಂದಾಗ, ಜಗತ್ತಿನ ಇತರ ರಾಷ್ಟ್ರಗಳಂತೆ ಇಲ್ಲೂ ಮಾಮೂಲಿ ಸೂರು ಸಿಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಆ ಊಹೆ ಸುಳ್ಳಾಗಿತ್ತು. ಈಗಲೂ ಬಹುತೇಕ ಕೊಳೆಗೇರಿ ಜನರಿಗೆ ಐಷಾರಾಮಿ ಫ್ಲ್ಯಾಟ್‌ಗಳನ್ನು ಒದಗಿಸಿದೆ ಚೀನಿ ಸರ್ಕಾರ. ಇದಕ್ಕಾಗಿ ಸಾವಿರಾರು ಕೋಟಿ ವೆಚ್ಚ ಮಾಡಿ, ಹತ್ತಾರು ವರ್ಷಗಳ ಪರಿಶ್ರಮವನ್ನೂ ಹಾಕಿದೆ. ಇದರ ಪರಿಣಾಮ ಬಡ ಜನರಿಗೂ ಅತ್ಯುತ್ತಮ ಸೇವೆ ಸಿಗುವಂತಾಗಿದೆ. ಈ ಸಾಧನೆ ಕಂಡಿದ್ದ ಬಹುತೇಕ ಶ್ರೀಮಂತ ರಾಷ್ಟ್ರಗಳು ಶಾಕ್‌ ಆಗಿದ್ದುಂಟು.

   English summary
   China’s communist party leaders decided to amendment in law to increase population.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   Desktop Bottom Promotion