ಚೀನಾದಲ್ಲಿ ಪಾಕಿಸ್ತಾನದ 2 ಉಪಗ್ರಹ ಉಡಾವಣೆ ಯಶಸ್ವಿ!

ಬೀಜಿಂಗ್, ಜುಲೈ 10: ಪಾಕಿಸ್ತಾನದ ಉಪಯೋಗಕ್ಕಾಗಿ ಚೀನಾದಲ್ಲಿ ಎರಡು ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಎರಡು ಕೂಡಾ ದೂರ ಸಂವೇದಿ ಉಪಗ್ರಹಗಳಾಗಿವೆ. ಇದು ಕಳೆದ 19 ವರ್ಷಗಳಲ್ಲಿ ಮೊಟ್ಟಮೊದಲ ಅಂತಾರಾಷ್ಟ್ರೀಯ ವಾಣಿಜ್ಯ ಉಡಾವಣೆ ಎನಿಸಿಕೊಂಡಿದೆ.

PRSS-1 ಹಾಗೂ ಪಾಕ್ TES-1A ಉಪಗ್ರಹಗಳನ್ನು ಹೊತ್ತ ಲಾಂಗ್ ಮಾರ್ಚ್ ಸಿ ರಾಕೆಟ್ ಮೂಲಕ ಜಿಯುಕ್ವಾನ್ ಉಪಗ್ರಹ ಕೇಂದ್ರ ದಿಂದ ಸೋಮವಾರದಂದು ಬೆಳಗ್ಗೆ 11.56ರ ಸುಮಾರಿಗೆ ಉಡಾವಣೆ ಮಾಡಲಾಗಿದೆ.

ಪಿಆರ್ ಎಸ್ಎಸ್ -1 ಇದು ಚೀನಾ ನಿರ್ಮಿತ ಮೊಟ್ಟ ಮೊದಲ ಆಪ್ಟಿಕಲ್ ದೂರ ಸಂವೇದಿ ಉಪಗ್ರಹವಾಗಿದ್ದು, ಪಾಕಿಸ್ತಾನಕ್ಕೆ ಮಾರಾಟ ಮಾಡಲಾಗಿದೆ. ಇದು ಚೀನಾದ ಬಾಹ್ಯಾಕಾಶ ತಂತ್ರಜ್ಞಾನ ಅಕಾಡೆಮಿ(CAST) ಅಭಿವೃದ್ಧಿಪಡಿಸಿರುವ 17ನೇ ಉಪಗ್ರಹವಾಗಿದೆ.

China launches two satellites for Pakistan

2011ra ಆಗಸ್ಟ್ ನಲ್ಲಿ ಪಾಕ್ ಸ್ಯಾಟ್ 1 ಆರ್ ಸಂವಹನ ಉಪಗ್ರಹವನ್ನು ಚೀನಾ ಹಾಗೂ ಪಾಕಿಸ್ತಾನವು ಜಂಟಿಯಾಗಿ ಯಶಸ್ವಿ ಉಡಾವಣೆ ಮಾಡಿದ ಬಳಿಕ ಮತ್ತೊಮ್ಮೆ ಬಾಹ್ಯಾಕಾಶ ಲೋಕದಲ್ಲಿ ಜಂಟಿ ಕಾರ್ಯಾಚರಣೆ ನಡೆದಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮ ಕ್ಸಿನ್ಹುವಾ ಹೇಳಿದೆ.

ಭೂಮಿ ಹಾಗೂ ಸಂಪನ್ಮೂಲ ಸರ್ವೇಕ್ಷಣ, ನಿರ್ವಹಣೆ, ನೈಸರ್ಗಿಕ ವಿಕೋಪ, ಕೃಷಿ ಸಂಶೋಧನೆ, ನಗರದ ಮೂಲ ಸೌಕರ್ಯ ನಿರ್ಮಾಣ ಹಾಗೂ ದೂರ ಸಂವೇದಿ ಮಾಹಿತಿಯನ್ನು ನೀಡಲು ಈ ಉಪಗ್ರಹಗಳು ಸಹಕಾರಿಯಾಗಿವೆ. ಒಟ್ಟಾರೆಯಾಗಿ ಲಾಂಗ್ ಮಾರ್ಚ್ ರಾಕೆಟ್ ಸರಣಿಯಲ್ಲಿ ಇದು 279ನೇ ಯೋಜನೆಯಾಗಿದೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+