• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಕಾಲದಲ್ಲಿ ಮಂಗಳಯಾನ ಆರಂಭಿಸಿದ ಚೀನಾ

|

ಬೀಜಿಂಗ್, ಜುಲೈ 23: ಅಮೆರಿಕದ ನಾಸಾದ ಕ್ಯುರಿಯಾಸಿಟಿ ರೋವರ್ ಮಂಗಳದ ಅಂಗಳದಲ್ಲಿ ಯಶಸ್ಸು ಸಾಧಿಸಿರುವುದು ಗೊತ್ತಿರಬಹುದು. ಈಗ ಕೊರೊನಾವೈರಸ್ ಸೋಂಕು, ಆರ್ಥಿಕ ಬಿಕ್ಕಟ್ಟಿನ ನಡುವೆ ಚೀನಾ ದೇಶವು ಮಂಗಳಯಾನ ಆರಂಭಿಸಿದೆ.

ದಕ್ಷಿಣ ದ್ವೀಪದ ಹೈನಾನ್‌ನ ವೆನ್‌ಚಾಂಗ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಲಾಂಗ್ ಮಾರ್ಚ್ ರಾಕೆಟ್ ವೈ -4 ವಾಹಕದ ಮೂಲಕ ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ. ಇದು ಆರ್ಬಿಟರ್ ಹಾಗೂ ರೋವರ್ ಒಳಗೊಂಡಿದೆ ಎಂದು ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಪ್ರಾಧಿಕಾರ(ಸಿಎನ್ ಸಿಎ) ಹೇಳಿದೆ.

ನಾಸಾದ ಕ್ಯೂರಿಯಾಸಿಟಿ ಕ್ಲಿಕ್ಕಿಸಿಕೊಂಡ ಮನೋಹರ 'ಪನೋರಮಾ ಸೆಲ್ಫಿ'

ಚೀನಾದ ಮಂಗಳಯಾನ ಯೋಜನೆಗೆ ತೈಯಾನ್ವೆನ್ 1 ಅಥವಾ ಕ್ವೆಸ್ಟ್ ಫಾರ್ ಹೆವೆನ್ಲಿ ಟ್ರೂಥ್ 1 ಎಂದು ಹೆಸರಿಡಲಾಗಿದೆ. ಕೆಂಪು ಗ್ರಹವನ್ನು ಮುಂದಿನ 90 ದಿನಗಳಲ್ಲಿ ಕ್ರಾಫ್ಟ್(ಗಗನನೌಕೆ) ತಲುಪಲಿದೆ.

ಗ್ರಹದ ಮಣ್ಣು, ಮೇಲ್ಮೈ ವಾತಾವರಣ, ಹವಾಮಾನ, ನೀರಿನ ಅಂಶದ ಬಗ್ಗೆ ತೈಯಾನ್ವೆನ್ 1 ತನಿಖೆ ನಡೆಸಲಿದೆ. ಭೂಮಿಯಿಂದ 400 ಮಿಲಿಯನ್ ಕಿ.ಮೀ ದೂರದಲ್ಲಿರುವ ಗ್ರಹ ಬಗ್ಗೆ ತಿಳಿಯಲು ಆರ್ಬಿಟರ್, ಲ್ಯಾಂಡರ್ ಹಾಗೂ ರೋವರ್ ಬಳಸಲಾಗುತ್ತದೆ.

ರೋವರ್ ನಲ್ಲಿ 6 ವ್ಹೀಲ್ ಹಾಗೂ ಸೌರಶಕ್ತಿ ಫಲಕ, 5 ವೈಜ್ಞಾನಿಕ ಉಪಕರಣಗಳಿವೆ. 200 ಕಿಲೋಗ್ರಾಮ್ ತೂಕದ ಈ ರೋವರ್ ಮೂರು ತಿಂಗಳುಗಳ ಕಾಲ ಗ್ರಹದ ಸುತ್ತಾ ಸುತ್ತಲಿದೆ.

ಮಂಗಳದ ಅಂಗಳದಲ್ಲಿ ಹಳೆ ಸರೋವರ ಪತ್ತೆ ಹಚ್ಚಿದ ಕ್ಯೂರಿಯಾಸಿಟಿ

ಭಾರತ, ಯುಎಸ್, ರಷ್ಯಾ ಹಾಗೂ ಯುರೋಪಿಯನ್ ಯೂನಿಯನ್ ಬಳಿಕ ಮಂಗಳಯಾನಕ್ಕೆ ಚೀನಾ ಕೈ ಹಾಕಿದೆ. ಮಂಗಳದ ಮಾರ್ಷಿಯನ್ ಭಾಗದಲ್ಲಿ ಬಾಹ್ಯಾಕಾಶ ನೌಕೆಯನ್ನು ಕೆಳಗಿಳಿಸಿದ ಪ್ರಥಮಸ ಸಾಧನೆಯನ್ನು ಭಾರತ ಮಾಡಿದೆ.

ಯುನೈಟೆಡ್ ಅರಬ್ ಎಮಿರೆಟ್ಸ್ ಕೂಡಾ ಮಂಗಳಯಾನ ಸ್ಪರ್ಧೆಗಿಳಿದಿದೆ ಜಪಾನ್ ನೌಕಾನೆಲೆ ಮೂಲಕ ಹೋಪ್ ಎಂಬ ಹೆಸರಿನಲ್ಲಿ ಯೋಜನೆ ಕೈಗೊಂಡಿದೆ.

English summary
China successfully launched its first Mars probe on Thursday from the Wenchang Spacecraft Launch Site in the southern island province of Hainan, official media here reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X