• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೇಪಾಳದ 7 ಜಿಲ್ಲೆಗಳ ಭೂಭಾಗವನ್ನು ವಶಪಡಿಸಿಕೊಂಡ ಚೀನಾ

|
Google Oneindia Kannada News

ಕಠ್ಮಂಡು, ಆಗಸ್ಟ್ 19: ಚೀನಾ ಈಗ ಲಡಾಖ್ ಬಿಟ್ಟು ಇದೀಗ ನೇಪಾಳದಲ್ಲಿ ಉಪದ್ರವ ಕೊಡುತ್ತಿದೆ.

ದೇಶದ ಏಳು ಜಿಲ್ಲೆಗಳ ಭೂಭಾಗವನ್ನು ಚೀನಾ ವಶಪಡಿಸಿಕೊಂಡಿದೆ. ನೇಪಾಳದ ಗಡಿ ಭಾಗದಲ್ಲಿ ಚೀನಾ ಸೇನೆ ಸ್ವಲ್ಪ ಸ್ವಲ್ಪವೇ ಮುಂದಕ್ಕೆ ಬಂದು ಅಲ್ಲಿ ತನ್ನ ಪಾರಮ್ಯವನ್ನು ಸ್ಥಾಪಿಸತೊಡಗಿದೆ. ಮೂಲಗಳ ಪ್ರಕಾರ ಸರ್ಕಾರದ ಡೇಟಾದಲ್ಲಿರುವ ಅಂಶ ಸಾಂಕೇತಿಕವಾಗಿರಬಹುದು. ಗಡಿ ಭಾಗದಲ್ಲಿ ವಸ್ತುಸ್ಥಿತಿ ಬೇರೆಯೇ ಇರಬಹುದು.

ಭಾರತೀಯ ಸೇನೆಯಲ್ಲಿನ ನೇಪಾಳಿ ಗೂರ್ಖಾ ರೆಜಿಮೆಂಟ್ ಮೇಲೆ ಚೀನಾ ಕಣ್ಣುಭಾರತೀಯ ಸೇನೆಯಲ್ಲಿನ ನೇಪಾಳಿ ಗೂರ್ಖಾ ರೆಜಿಮೆಂಟ್ ಮೇಲೆ ಚೀನಾ ಕಣ್ಣು

ನೇಪಾಳ ಕಮ್ಯೂನಿಸ್ಟ್ ಪಾರ್ಟಿ ಈಗ ತನ್ನ ಅತಿ ಸಂಕಷ್ಟ ಮತ್ತು ಅತ್ಯಂತ ಕೆಟ್ಟ ಕಾಲವನ್ನು ಎದುರಿಸಲಾರಂಭಿಸಿದೆ. ನೇಪಾಳದೊಳಕ್ಕೆ ಚೀನಾ ಅನೇಕ ರಸ್ತೆಗಳನ್ನೂ ನಿರ್ಮಿಸಿದ್ದು, ಆ ಮೂಲಕ ಅಲ್ಲಿ ತನ್ನ ಪ್ರಾಬಲ್ಯವನ್ನು ತೋರಿಸುತ್ತಿದೆ.

ದೋಲಖಾದಲ್ಲಿ ಅಂತಾರಾಷ್ಟ್ರೀಯ ಗಡಿ ರೇಖೆ ದಾಟಿ 1,500 ಮೀಟರ್​ನಷ್ಟು ಒಳಕ್ಕೆ ಚೀನಾ ಆಗಮಿಸಿದೆ. ದೋಲಖಾದ ಕೋರ್ಲಂಗ್​ ಪ್ರದೇಶದಲ್ಲಿ ಪಿಲ್ಲರ್ ನಂ 57ರಲ್ಲಿ ಈ ಅತಿಕ್ರಮಣವಾಗಿದೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಗಡಿಯ ಪಿಲ್ಲರ್​ಗಳನ್ನು ಮುಂದಕ್ಕೆ ದೂಡುತ್ತ ಬಂದಿರುವ ಚೀನಾ ಈ ಬಗ್ಗೆ ಧ್ವನಿ ಎತ್ತದಂತೆ ನೇಪಾಳದ ಮೇಲೆ ಬೆದರಿಕೆಯಿಂದೊಡಗೂಡಿದ ಒತ್ತಡ ಹೇರಿದೆ.

ನೇಪಾಳದ ದೋಲಖಾ, ಗೋರ್ಖಾ, ದಾರ್ಚುಲಾ, ಹುಮ್ಲಾ, ಸಿಂಧುಪ್ಲಾಚೌಕ್​, ಶಂಖುವಸಭಾ ಮತ್ತು ರಸುವಾ ಜಿಲ್ಲೆಗಳ ಭೂಭಾಗವನ್ನು ಚೀನಾ ಆಕ್ರಮಣ ಮಾಡಿದೆ.

ನೇಪಾಳ-ಚೀನಾ ಸಂಬಂಧಗಳನ್ನು ಗಮನಿಸುತ್ತಿರುವ ರಾಜತಾಂತ್ರಿಕ ಪರಿಣತರ ಪ್ರಕಾರ, ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಸರ್ಕಾರ ಚೀನಾದ ನಡೆಯನ್ನು ಎದುರಿಸಿದರೆ ಪತನ ಭೀತಿಯನ್ನು ಎದುರಿಸಬೇಕಾಗುತ್ತದೆ. ಇದನ್ನು ಅರಿತೇ ಕೆ.ಪಿ.ಶರ್ಮಾ ಸುಮ್ಮನೆ ಕುಳಿತಿದ್ದಾರೆ. ಅವರಿಗೆ ಚೀನಾ ಕಮ್ಯೂನಿಸ್ಟ್ ಪಾರ್ಟಿಯಿಂದ ಎದುರಾಗಬಹುದಾದ ಅಪಾಯ ತಿಳಿದಂತಿದೆ.

English summary
Nepal is becoming the victim of colonial design as China is slowly and gradually, inch by inch, encroaching Nepali land at multiple fronts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X