ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದ ಪುರುಷರಿಗೂ ಶುರುವಾಯ್ತು ಹೆರಿಗೆ ಬೇನೆ!

|
Google Oneindia Kannada News

ಬೀಜಿಂಗ್, ನ. 24: ಅದೊಂದು ಕನ್ನಡ ಸಿನಿಮಾದ ದೃಶ್ಯ, ಮಹಿಳೆಯರೆಲ್ಲ ಒಂದಾಗಿ 'ನಮಗೆ ಮಾತ್ರ ಯಾಕೆ ಹೆರಿಗೆ ಬೇನೆ? ಪುರುಷರಿಗೂ ನೀಡಿ, ಅವರು ಸಮ ಪಾಲುದಾರರಲ್ಲವೇ? ಎಂದು ದೇವರನ್ನು ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರವಾಗಿ ಭಗವಂತ ಹೆರಿಗೆ ಸಮಯದಲ್ಲಿ ಪುರುಷರಿಗೆ ನೋವು ಕಾಣಿಸಿಕೊಳ್ಳಲಿ ಎಂದು ವರ ನೀಡುತ್ತಾನೆ. ಮುಂದೆ ಏನೇನೋ ರಗಳೆಗಳಾಗಿ ಮಹಿಳೆಯರು ಮತ್ತೆ ದುಂಬಾಲು ಬಿದ್ದು ವರ ಹಿಂದಕ್ಕೆ ನೀಡುತ್ತಾರೆ.

ಆದರೆ ನಿಜವಾಗಿಯೂ ಪುರುಷರಿಗೂ ಹೆರಿಗೆ ಬೇನೆ ತರಿಸುವ ಕೆಲಸಕ್ಕೆ ಚೀನಾದ ಆಸ್ಪತ್ರೆಯೊಂದು ಕೈ ಹಾಕಿದೆ! ಪ್ರಸವ ವೇದನೆ ಅನುಭವ ಹೇಗಿರುತ್ತದೆ? ಎಂಬುದನ್ನು ಪುರುಷರು ಪಡೆದುಕೊಳ್ಳಬೇಕು ಎಂದು ಹೇಳಿರುವ ಆಸ್ಪತ್ರೆ ಅದಕ್ಕೊಂದು ಯಂತ್ರ ಸಿದ್ಧಮಾಡಿದೆ.[ಮಧುಮೇಹಿಗಳ ಸಂಖ್ಯೆː ಭಾರತಕ್ಕೆ ಎರಡನೇ ಸ್ಥಾನ]

child

ಶಾನ್ ಡೋಗ್ ನಲ್ಲಿರುವ ಐಮಾ ಆಸ್ಪತ್ರೆ ವಾರಕ್ಕೆರಡು ಬಾರಿ ಇಂಥ ಶಿಬಿರಗಳನ್ನು ಆಯೋಜಿಸಿ ಪುರುಷರಿಗೆ 'ನೋವು' ನೀಡುತ್ತಿದೆ. ನೂರಾರು ಪುರುಷರು ಈಗಾಗಲೇ ನೋವು ಅನುಭವಿಸಿದ್ದಾರೆ. ಇವರಲ್ಲಿ ಕೆಲವರು ಸದ್ಯವೇ ತಂದೆಯಾಗುವವರಾಗಿದ್ದರೆ, ಇನ್ನು ಕೆಲವರು ಥ್ರಿಲ್ ಗೋಸ್ಕರ ಯಂತ್ರಕ್ಕೆ ಹೊಟ್ಟೆ ಒಡ್ಡಿದ್ದಾರೆ.

ನೋವು ಪಡೆಯಲಿಚ್ಛಿಸುವ ಪುರುಷನ ಹೊಟ್ಟೆ ಮೇಲ್ಭಾಗದಲ್ಲಿ ಯಂತ್ರವೊಂದನ್ನು ಅಳವಡಿಸಲಾಗುವುದು. ವಿದ್ಯುತ್ ಶಾಕ್ ನೀಡುವುದರ ಮೂಲಕ ನೋವಿನ ಅನುಭವ ಆರಂಭವಾಗುವುದು. ಸುಮಾರು ಐದು ನಿಮಿಷಗಳ ಕಾಲ ಹೆರಿಗೆ ನೋವು ಮುಂದುವರಿಯುತ್ತದೆ. ನಂತರ ಕಡಿಮೆ ಮಾಡಲಾಗುವುದು ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.[ಯೋಗಕ್ಕೆ ಮೋದಿ ಮಣೆ : ಸಿಕ್ಕಿತು ಜಾಗತಿಕ ಮನ್ನಣೆ]

ಮಹಿಳೆಯರು ಹೆರಿಗೆ ಸಂದರ್ಭ ಅನುಭವಿಸುವ ನಿಜವಾದ ನೋವಿನ ಅನುಭವ ಪುರುಷರಿಗೆ ಆಗುವುದರಿಂದ ಅನೇಕ ಲಾಭಗಳಿವೆ. ಮುಂದೆ ತಮ್ಮ ಹೆಂಡತಿ ಮಕ್ಕಳನ್ನು ಹೆಚ್ಚಿನ ಎಚ್ಚರಿಕೆಯಿಂದ ನೋಡಿಕೊಳ್ಳಲು ಈ 'ನೋವು' ಪ್ರೇರೇಪಿಸುತ್ತದೆ ಎಂದು ವೈದ್ಯರು ಹೇಳಿದ್ದಾರೆ.

English summary
A hospital in eastern China is offering fathers-to-be a chance to experience the pain of childbirth after several new moms complained they got little sympathy from their partners.Free sessions are held twice a week at Aima maternity hospital in Shandong province and about 100 men have signed up to be tortured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X