ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಲ್ಕನೇ ಬಾರಿಗೆ ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ಅಜರ್ ನನ್ನು ರಕ್ಷಿಸಿದ ಚೀನಾ

|
Google Oneindia Kannada News

ಪಾಕಿಸ್ತಾನ ಮೂಲದ ಜೈಷ್-ಇ-ಮೊಹ್ಮದ್ ಮುಖ್ಯಸ್ಥ ಮಸೂದ್ ಅಜರ್ ನನ್ನು 'ಜಾಗತಿಕ ಭಯೋತ್ಪಾದಕ' ಎಂದು ಕಪ್ಪು ಪಟ್ಟಿಗೆ ಸೇರಿಸಲು ಮಾಡಿದ ಪ್ರಸ್ತಾವಕ್ಕೆ ಚೀನಾ ಮಗದೊಮ್ಮೆ ಅಡ್ಡಗಾಲಾಗಿದೆ. ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಮುಂದೆ ಇರಿಸಿದ್ದ ಪ್ರಸ್ತಾವಕ್ಕೆ "ತಾಂತ್ರಿಕ ತಡೆ" ಒಡ್ಡಿದೆ.

ಫ್ರಾನ್ಸ್, ಯುನೈಟೆಡ್ ಕಿಂಗ್ ಡಮ್ ಹಾಗೂ ಅಮೆರಿಕವು ಫೆಬ್ರವರಿ ಇಪ್ಪತ್ತೇಳರಂದು ಪ್ರಸ್ತಾವ ಸಲ್ಲಿಸಿದ್ದವು. ಪುಲ್ವಾಮಾ ಉಗ್ರ ದಾಳಿ ನಂತರ ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿತ್ತು. ಒಂದು ವೇಳೆ ಆತನನ್ನು ಕಪ್ಪು ಪಟ್ಟಿಗೆ ಸೇರಿಸಿದ್ದರೆ ಅಜರ್ ಮೇಲೆ ಕಠಿಣ ನಿಬಂಧನೆಗಳು ಇರುತ್ತಿದ್ದವು. ಆತನ ಆಸ್ತಿಯನ್ನು ವಶಪಡಿಸಿಕೊಳ್ಳಬಹುದಿತ್ತು.

ಮಸೂದ್ ಒಬ್ಬ ಜಾಗತಿಕ ಉಗ್ರ ಅಮೆರಿಕದಿಂದ ಘೋಷಣೆ ಮಾತ್ರ ಬಾಕಿಮಸೂದ್ ಒಬ್ಬ ಜಾಗತಿಕ ಉಗ್ರ ಅಮೆರಿಕದಿಂದ ಘೋಷಣೆ ಮಾತ್ರ ಬಾಕಿ

ಚೀನಾದ ಈ ಕ್ರಮಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತ, ಇದು ನಿರಾಶಾದಾಯಕ ಎಂದಿದೆ. ಮೂರು ದೇಶಗಳು ಮಾಡಿದ್ದ ಪ್ರಸ್ತಾವದ ಬಗ್ಗೆ ಆಕ್ಷೇಪಣೆಗಳು ಇದ್ದಲ್ಲಿ ಸಲ್ಲಿಸಲು ವಿಶ್ವ ಸಂಸ್ಥೆಯ ಅಲ್ ಖೈದಾ ನಿರ್ಬಂಧ ಸಮಿತಿಯ ಸದಸ್ಯರು ಹತ್ತು ದಿನದ ಸಮಯ ನೀಡಿದ್ದರು. ನಿರಾಕ್ಷೇಪಣಾ ಅವಧಿಯ ಗಡುವು ನ್ಯೂಯಾರ್ಕ್ ನ ಸ್ಥಳೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಇತ್ತು (ಭಾರತೀಯ ಕಾಲಮಾನ ಗುರುವಾರ ಮಧ್ಯರಾತ್ರಿ 12.30).

Masood Azar

ಭದ್ರತಾ ಸಮಿತಿಯಲ್ಲಿ ವಿಟೋ ಅಧಿಕಾರ ಉಳ್ಳ ಶಾಶ್ವತ ಸದಸ್ಯ ರಾಷ್ಟ್ರ ಚೀನಾ. ಇನ್ನು ಆ ದೇಶವೇ ಹೇಳಿಕೊಳ್ಳುವಂತೆ ಪಾಕಿಸ್ತಾನದ ಪಾಲಿನ ಸರ್ವ ಋತು ಮಿತ್ರ ದೇಶ. ಈ ಹಿಂದೆ ಮೂರು ಬಾರಿ ಭಾರತದ ಪ್ರಸ್ತಾವವನ್ನು ಹೀಗೆ ತಡೆ ಹಿಡಿದಿತ್ತು ಚೀನಾ. ಇದು ನಾಲ್ಕನೇ ಬಾರಿಗೆ ತಡೆ ಒಡ್ಡಿದೆ.

ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದ್ದರೆ ಆತನ ಆಸ್ತಿ ಮೇಲೆ, ಪ್ರಯಾಣ ಮೇಲೆ ನಿರ್ಬಂಧ ಬೀಳುತ್ತಿತ್ತು. ಎಲ್ಲ ದೇಶಗಳಲ್ಲಿನ ಆತನ ಹಣಕಾಸು ಮೂಲಕ್ಕೆ ತಡೆ ಆಗುತ್ತಿತ್ತು. ಇನ್ನು ಯಾವುದೇ ದೇಶದ ಮೂಲಕ ಮತ್ತೊಂದು ದೇಶಕ್ಕೆ ಹೋಗುವುದು ಸಹ ಅಸಾಧ್ಯವಾಗುತ್ತಿತ್ತು.

ಯಾವುದೇ ದೇಶದ ಶಸ್ತ್ರಾಸ್ತ್ರ ಪೂರೈಕೆ, ಸೇನಾ ತರಬೇತಿ, ತಾಂತ್ರಿಕ ಸಲಹೆ, ಎಲ್ಲ ಬಗೆಯ ಸಲಕರಣೆಗಳು ನೇರ-ಪರೋಕ್ಷ ಮಾರಾಟ, ಹಸ್ತಾಂತರ ಮಾಡುವುದಕ್ಕೆ ಅಜರ್ ಮೇಲೆ ನಿರ್ಬಂಧ ಬೀಳುತ್ತಿತ್ತು. ಆದರೆ ನಾಲ್ಕನೇ ಬಾರಿಗೂ ಮಸೂದ್ ಅಜರ್ ನ ರಕ್ಷಣೆ ಮಾಡಿದೆ ಚೀನಾ.

ಮೌಲನಾ ಅಜರ್ ಕಟ್ಟಿಹಾಕಲು ಮುಂದಾದ ಭಾರತಕ್ಕೆ ಫ್ರಾನ್ಸ್ ಬಲಮೌಲನಾ ಅಜರ್ ಕಟ್ಟಿಹಾಕಲು ಮುಂದಾದ ಭಾರತಕ್ಕೆ ಫ್ರಾನ್ಸ್ ಬಲ

ಫೆಬ್ರವರಿ ಹದಿನಾಲ್ಕರಂದು ನಡೆದ ಉಗ್ರ ದಾಳಿಯಲ್ಲಿ ಪುಲ್ವಾಮಾದಲ್ಲಿ ನಲವತ್ತು ಮಂದಿ ಸಿಆರ್ ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದರು. ಆ ದಾಳಿಯ ಹೊಣೆಯನ್ನು ಮಸೂದ್ ಅಜರ್ ನೇತೃತ್ವದ ಜೈಷ್-ಇ-ಮೊಹ್ಮದ್ ಸಂಘಟನೆ ಹೊತ್ತುಕೊಂಡಿತ್ತು.

English summary
China has yet again blocked the proposal to designate Pakistan-based Jaish-e-Mohammed's chief Maulana Masood Azhar as a "global terrorist" by the UN Security Council. China has reportedly put a hold on the matter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X