ಸಿರಿಯಾದಲ್ಲಿ ಮತ್ತೆ ಭೀಕರ ರಸಾಯನಿಕ ದಾಳಿ, 70 ಬಲಿ

Subscribe to Oneindia Kannada

ಡಮಾಸ್ಕಸ್, ಏಪ್ರಿಲ್ 8: ಯುದ್ಧ ಪೀಡಿತ ಸಿರಿಯಾದಲ್ಲಿ ಮತ್ತೆ ಭೀಕರ ರಸಾಯನಿಕ ದಾಳಿ ನಡೆದಿದ್ದು ಹಸುಳೆಗಳ ಸಹಿತ 70 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸಂಘಟನೆಯೊಂದರೆ ಸದಸ್ಯರು ಹೇಳಿದ್ದಾರೆ.

ವಿರೋಧಿಗಳ ಹಿಡಿತದಲ್ಲಿರುವ ಸಿರಿಯಾದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ 'ವೈಟ್ ಹೆಲ್ಮೆಟ್ಸ್' ಈ ವಿವರ ನೀಡಿದೆ. ಸಿರಿಯಾ ಸರಕಾರದ ವಿರೋಧಿಗಳ ಹಿಡಿತದಲ್ಲಿರುವ 'ಡೂಮಾ' ನಗರದಲ್ಲಿ ಈ ಘಟನೆ ನಡೆದಿದೆ.

ರಸಾಯನಿಕ ದಾಳಿಯಿಂದ ಹಲವು ಜನರ ಪರಿಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದು ವೈಟ್ ಹೆಲ್ಮೆಟ್ಸ್ ಮುಖ್ಯಸ್ಥ ರಯೀದ್ ಅಲ್ ಸಲೇಹ್ ಹೇಳಿದ್ದಾರೆ.

 Chemical attack in Syria kills 70

ಕ್ಲೋರಿನ್ ಮತ್ತು ಅಪರಿಚಿತ ಅನಿಲವನ್ನು ಡೂಮಾದ ಮೇಲೆ ಹಾಕಲಾಗಿದೆ ಎಂದು ಅವರು ಹೇಳಿದ್ದಾರೆ. ರಸಾಯನಿಕ ದಾಳಿಗೆ ಒಳಗಾದ ಪ್ರದೇಶದ ಜನರನ್ನು ಬೇರೆ ಪ್ರದೇಶಗಳಿಗೆ ಕರೆದೊಯ್ಯುವುದೊಂದೇ ಜನರನ್ನು ಉಳಿಸಲು ಇರುವ ಏಕೈಕ ಉಪಾಯ ಎಂದು ಅವರು ಹೇಳಿದ್ದಾರೆ.

ಆದರೆ ವಾಹನ ಮತ್ತು ರಸ್ತೆ ಸೇವೆ ಕಡಿತವಾಗಿರುವುದರಿಂದ ಇವರನ್ನು ಕಾಲ್ನಡಿಗಯಲ್ಲೇ ಇನ್ನೊಂದು ಪ್ರದೇಶಕ್ಕೆ ಕರೆದೊಯ್ಯಬೇಕಿದೆ ಎಂದು ಅವರು ಹೇಳಿದ್ದಾರೆ.

ಈ ಸಂಬಂಧ ಹೇಳಿಕೆ ನೀಡಿರುವ ಅಮೆರಿಕಾ, ಒಂದೊಮ್ಮೆ ರಸಾಯನಿಕ ದಾಳಿ ಖಚಿತಗೊಂಡರೆ ಸಿರಿಯಾ ವಿರುದ್ಧ ಜಾಗತಿಕ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದೆ. ಆದರೆ ರಸಾಯನಿಕ ದಾಳಿಯನ್ನು ಸಿರಿಯಾ ಸೇನೆ ತಳ್ಳಿ ಹಾಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A chemical attack in Douma, the last rebel-held stronghold near Syria's capital, Damascus, has killed at least 70 people and affected hundreds.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ